ಬೆಂಗಳೂರು: ಸೌದಿ ಅರೇಬಿಯಾದ ಮದೀನಾದಲ್ಲಿ ತೆರವುಗೊಂಡಿರುವ ಮಹಮದ್ ಪೈಗಂಬರ್ ಅವರ ಮಗಳು ಫಾತಿಮಾರ ಗೋರಿಯನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಮುಸ್ಲಿಂ ಸಮುದಾದವರು ಇಂದು ನಗರದ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಶಿಯಾ ಹಾಗೂ ಸುನ್ನಿ ಸಮುದಾಯದವರು, ಅಂಜುಮನ್ - ಎ-ಇಮಾಮಿಯ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
1925ರಲ್ಲಿ ಸೌದಿ ಅರೇಬಿಯಾದ ಮದೀನಾದಲ್ಲಿರುವ ಮಹಮದ್ ಪೈಗಂಬರ್ ಅವರ ಮಗಳಾದ ಫಾತಿಮಾ ಅವರ ರೋಜಾ(ಗೋರಿ)ವನ್ನು ತೆರವುಗೊಳಿಸಲಾಗಿದೆ. ಇದನ್ನು ಶೀಘ್ರವೇ ಪುನರ್ ನಿರ್ಮಿಸಬೇಕು. ಸೌದಿ ಅರೇಬಿಯಾ ಸರ್ಕಾರಕ್ಕೆ ಧನಸಹಾಯ ಮಾಡಲು ನಮ್ಮ ಸಮುದಾಯದವರು ಮುಂದಾಗಲಿದ್ದೇವೆ ಎಂದು ಸೌದಿ ಸರ್ಕಾರವನ್ನು ಒತ್ತಾಯಿಸಿದರು.