ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಲೆಹರ್ ಸಿಂಗ್ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ನಿಂದ ಕುಪ್ಪೇಂದ್ರ ರೆಡ್ಡಿ ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ನಾಲ್ವರು ಅಭ್ಯರ್ಥಿಗಳ ಆಸ್ತಿ ವಿವರ ಈ ಕೆಳಗಿನಂತಿದೆ.
ನಿರ್ಮಲಾ ಸೀತಾರಾಮನ್ ಆಸ್ತಿ ವಿವರ: ವಿಧಾನಸಭೆಯಿಂದ ರಾಜ್ಯಸಭೆ ಚುನಾವಣಾ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಳಿ ಒಟ್ಟು 2.50 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
- ಸ್ಥಿರಾಸ್ತಿ : 1,87,60,200 ರೂ.
- ಚರಾಸ್ತಿ - 63,39,196 ರೂ.
- ಆಭರಣ- 315 ಗ್ರಾಂ. ಬಂಗಾರ, 2 ಕೆಜಿ ಬೆಳ್ಳಿ
- ಕೈಯಲ್ಲಿರುವ ಹಣ-17,200 ರೂ.
- ಬ್ಯಾಂಕ್ ಎಫ್ಡಿ- 45,04,479
- ಸ್ಕೂಟರ್- ಬಜಾಜ್ ಚೇತಕ್
- ಕಾರು-ಇಲ್ಲ
- ಸಾಲ ಪಡೆದಿದ್ದು: 30,44,838 ರೂ.
- ಕುಟುಂಬಸ್ಥರಿಗೆ ನೀಡಿದ ಸಾಲ: 3,50, 000 ರೂ.
- ಜಮೀನು: ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ಕುಂಟನೂರು ಗ್ರಾಮದಲ್ಲಿ 4,806 ಚದರ ಅಡಿ
ಜಗ್ಗೇಶ್ ಆಸ್ತಿ ವಿವರ: ನಟ ಜಗ್ಗೇಶ್ ಅವರು ತಮ್ಮ ಬಳಿ ಒಟ್ಟು 22.81 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
- ಸ್ಥಿರಾಸ್ತಿ : 13,25,00,000
- ಚರಾಸ್ತಿ- 4,39,23,378 ರೂ.
- ಕೈಯಲ್ಲಿರುವ ಹಣ: 2,00,000 ರೂ.
- ಪತ್ನಿ ಕೈಯಲ್ಲಿರುವ ಹಣ: 1,60,000 ರೂ.
- ಆಭರಣ-500 ಗ್ರಾಂ ಬಂಗಾರ, 1 ಕೆಜಿ ಬೆಳ್ಳಿ
- ಪತ್ನಿ ಬಳಿ ಆಭರಣ: 500 ಗ್ರಾಂ. ಬಂಗಾರ, 3 ಕೆಜಿ ಬೆಳ್ಳಿ
- ಕೃಷಿ ಭೂಮಿ; 6,75,00,000
- ಮನೆ : 6,50,00,000 ರೂ.
- ಪತ್ನಿ ಹೆಸರಲ್ಲಿ ಮನೆ: 4,50,00,000
- ಕಾರು-2 ಬಿಎಂಡಬ್ಲ್ಯು, 1 ಇನ್ನೋವಾ, ರಾಯಲ್ ಎನ್ ಫೀಲ್ಡ್ ಬೈಕ್, ಎಕ್ಸ್ ಯು ಝಡ್ ಸ್ಕೂಟಿ
- ಸಾಲ: 2,91,24,140 ರೂ.
- ಪತ್ನಿ ಹೆಸರಲ್ಲಿ ಸಾಲ : 4,00,000 ರೂ.
ಲೆಹರ್ಸಿಂಗ್ ಆಸ್ತಿ ವಿವರ: ಬಿಜೆಪಿ ಅಭ್ಯರ್ಥಿ ಲೆಹರ್ಸಿಂಗ್ ಅವರು ಅವಿಭಜಿತ ಕುಟುಂಬದ ಆಸ್ತಿ ಸೇರಿದಂತೆ ಒಟ್ಟು 54.64 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
- ಸ್ಥಿರಾಸ್ತಿ: 29,40,00,000 ರೂ.
- ಪತ್ನಿ ಸ್ಥಿರಾಸ್ತಿ : 88,00,000 ರೂ.
- ಚರಾಸ್ತಿ : 16,15,21,092 ರೂ.
- ಪತ್ನಿ ಬಳಿ ಚರಾಸ್ತಿ : 6,94,15,023 ರೂ.
- ಮಕ್ಕಳ ಬಳಿ ಚರಾಸ್ತಿ : 1,21,02,185 ರೂ.
- ಕೈಯಲ್ಲಿರುವ ಹಣ: 84,168 ರೂ.
- ಪತ್ನಿ ಕೈಯಲ್ಲಿರುವ ಹಣ: 65,417 ರೂ.
- ಆಭರಣ: 175 ಗ್ರಾಂ ಬಂಗಾರ, 5 ಕೆಜಿ ಬೆಳ್ಳಿ
- ಪತ್ನಿ ಬಳಿ ಆಭರಣ: 1500 ಗ್ರಾಂ. ಬಂಗಾರ, 20 ಕೆಜಿ ಬೆಳ್ಳಿ
- ಮಕ್ಕಳ ಬಳಿ 1500 ಗ್ರಾಂ. ಬಂಗಾರ
- ಕಾರು- ಇನ್ನೋವಾ ಕ್ರಿಸ್ಟಾ, ಪತ್ನಿ ಕಾರು; ಸೆಲೆರಿಯೊ
- ಸಾಲ : 40,50,000 ರೂ.
- ಪತ್ನಿ ಸಾಲ : 52,50,000 ರೂ.
ಕುಪ್ಪೇಂದ್ರ ರೆಡ್ಡಿ ಆಸ್ತಿ ವಿವರ: ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರು 817.02 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
- ಸ್ಥಿರಾಸ್ತಿ : 222,47,60,624 ರೂ.
- ಚರಾಸ್ತಿ-353,42,14,926
- ಕೈಯಲ್ಲಿರುವ ಹಣ: 21,12,381 ರೂ.
- ಪತ್ನಿ ಕೈಯಲ್ಲಿರುವ ಹಣ: 43,41,108 ರೂ.
- ಆಭರಣ-1,74,35,500 ರೂ.ಬೆಲೆಯ ಆಭರಣ
- ಪತ್ನಿ ಬಳಿ ಆಭರಣ: 3,51,77,870 ರೂ.
- ಕೃಷಿ ಭೂಮಿ: 20,91,54,125 ರೂ.
- ಮನೆ : 4,42,74,259 ರೂ.
- ವಾಣಿಜ್ಯ ಮಳಿಗೆಗಳು : 92,01,74,990 ರೂ.
- ಕಾರು-1 ಆಡಿ, 2 ಟೊಯೊಟಾ ಫಾರ್ಚ್ಯುನರ್
- ಸಾಲ: 67,29,87,928 ರೂ.
- ತೆರಿಗೆ ಬಾಕಿ : 3,40,501 ರೂ.ಇದೆ.
ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ₹ 8,633 ಕೋಟಿ GST ಪರಿಹಾರ ಮಂಜೂರು