ETV Bharat / city

Bitcoin Scam: ಹಗರಣ ಗಂಭೀರವಲ್ಲದಿದ್ದರೆ ಪ್ರಧಾನಿ ಬಳಿ ಪ್ರಸ್ತಾಪಿಸಿದ್ದೇಕೆ?: ಪ್ರಿಯಾಂಕ್ ಖರ್ಗೆ ಪ್ರಶ್ನೆ - ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ

ಬಿಟ್ ಕಾಯಿನ್ ಹಗರಣ ಗಂಭೀರ ವಿಷಯವಲ್ಲ ಎನ್ನುವ ಸಿಎಂ ಬೊಮ್ಮಾಯಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದು, ಏಕೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
author img

By

Published : Nov 15, 2021, 2:06 PM IST

ಬೆಂಗಳೂರು: ಬಿಟ್ ಕಾಯಿನ್ ಹಗರಣ (Bitcoin Scam) ಗಂಭೀರ ಪ್ರಕರಣವಲ್ಲದಿದ್ದರೆ ಪ್ರಧಾನಿ ನರೇಂದ್ರ ಮೋದಿ ಬಳಿ ಏಕೆ ಪ್ರಸ್ತಾಪಿಸಿದ್ದು? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Congress MLA Priyank Kharge ) ಪ್ರಶ್ನಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ (Priyank Kharge tweet ) ಬಿಜೆಪಿಗೆ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. "ಬಿಟ್ ಕಾಯಿನ್ ಹಗರಣ ಗಂಭೀರ ವಿಷಯವಲ್ಲ ಎನ್ನುತ್ತಾರೆ ಸಿಎಂ. ಹಾಗಾದರೆ ಪ್ರಧಾನಿ ಬಳಿ ಪ್ರಸ್ತಾಪಿಸಿದ್ದೇಕೆ? ಬಿಟ್ ಕಾಯಿನ್ ಹಗರಣದ ವಿಚಾರವಾಗಿ ಪೊಲೀಸರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಏಕೆ?. ಬಿಟ್ ಕಾಯಿನ್ ವಿಚಾರವಾಗಿ ರಾತ್ರಿ 9ಕ್ಕೆ ಸಚಿವರ ಪತ್ರಿಕಾಗೋಷ್ಠಿ ಮಾಡಿದ್ದಾದರೂ ಏತಕ್ಕಾಗಿ? ಹಾಗೂ ಬಿಜೆಪಿಗರ ಸಿಡಿಮಿಡಿಗೊಂಡಿದ್ದೇಕೆ?. ನಮ್ಮ ಸರಳ ಪ್ರಶ್ನೆಗೆ ಉತ್ತರವಿಲ್ಲ ಯಾಕೆ" ಎಂದು ಪ್ರಶ್ನಿಸಿದ್ದಾರೆ. ಇವರ ಕಳ್ಳಾಟದಿಂದಲೇ ಹಗರಣದ ಗಾಂಭೀರ್ಯತೆ ಜನತೆಗೆ ತಿಳಿಯುತ್ತಿದೆ ಎಂದು ಖರ್ಗೆ ಕಿಡಿ ಕಾರಿದ್ದಾರೆ.

  • ಬಿಟ್ ಕಾಯಿನ್ ಹಗರಣ ಗಂಭೀರ ವಿಷಯವಲ್ಲ - ಸಿಎಂ.

    ಹಾಗಾದರೆ ಪ್ರಧಾನಿ ಬಳಿ ಪ್ರಸ್ತಾಪಿಸಿದ್ದೇಕೆ?

    ಪೊಲೀಸರ ಪತ್ರಿಕಾ ಪ್ರಕಟಣೆ ಏಕೆ?

    ರಾತ್ರಿ 9ಕ್ಕೆ ಮಂತ್ರಿಗಳ ಪತ್ರಿಕಾಗೋಷ್ಠಿ ಏಕೆ?

    ಬಿಜೆಪಿಗರ ಸಿಡಿಮಿಡಿ ಏಕೆ?

    ನಮ್ಮ ಸರಳ ಪ್ರಶ್ನೆಗೆ ಉತ್ತರವಿಲ್ಲವೇಕೆ?

    ಇವರ ಕಳ್ಳಾಟದಿಂದಲೇ ಹಗರಣದ ಗಾಂಭೀರ್ಯತೆ ಜನತೆಗೆ ತಿಳಿಯುತ್ತಿದೆ.

    — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 14, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಬಿ ಕೇರ್ ಫುಲ್ ಅಂದ ಬಿಎಸ್​ವೈ ; ಶಿಷ್ಯನ ನೆರವಿಗೆ ನಿಂತ ರಾಜಾಹುಲಿ!

ಈಗಾಗಲೇ ಬಿಟ್ ಕಾಯಿನ್ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳ ಜೊತೆ ಸರ್ಕಾರಕ್ಕೆ ಪಂಚ ಪ್ರಶ್ನೆಗಳನ್ನು ಕೇಳಿದ್ದರು. ‌ಬಿಟ್ ಕಾಯಿನ್ ಸಂಬಂಧ ಸರ್ಕಾರದ ವಿರುದ್ಧ ಮುಂಚೂಣಿಗರಾಗಿ ಪ್ರಿಯಾಂಕ್​ ಖರ್ಗೆ ವಾಗ್ದಾಳಿ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.