ETV Bharat / city

ದೇಶದಲ್ಲಿ ಚುನಾವಣೆ ಅಬ್ಬರ : ಪ್ರಿಂಟಿಂಗ್ ಪ್ರೆಸ್​ನವರ ಬದುಕು ದುರ್ಬರ - undefined

ಕಳೆದ ಹತ್ತು ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್​ಗಳು ನಷ್ಟ ಅನುಭವಿಸುತ್ತಿವೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಪ್ರಿಂಟಿಂಗ್ ಪ್ರೆಸ್​ಗಳಿಗೆ ನಷ್ಟ
author img

By

Published : Apr 12, 2019, 6:09 AM IST

ಬೆಂಗಳೂರು: ದೇಶದೆಲ್ಲೆಡೆ ಲೋಕಸಭೆ ಚುಣಾವಣೆ ಹವಾ ಜೋರಾಗಿದೆ. ಆದರೆ ಚುನಾವಣಾ ಪ್ರಚಾರಕ್ಕಾಗಿ ಪೋಸ್ಟರ್​​, ಟೀ ಶರ್ಟ್, ಟೋಪಿ ಹಾಗೂ ಪಾಂಪ್ಲೆಟ್​ಗಳನ್ನು ತಯಾರಿಸುವ ಪ್ರಿಂಟಿಂಗ್ ಪ್ರೆಸ್​ಗಳು ಮಾತ್ರ ಕಳೆದ ಹತ್ತು ವರ್ಷಗಳಿಂದ ನಷ್ಟ ಅನುಭವಿಸುತ್ತಿವೆ.

ಹತ್ತು ವರ್ಷಗಳ ಹಿಂದೆ ಚುನಾವಣೆ ಬಂತೆಂದರೆ ರಸ್ತೆಗಳಲ್ಲಿ ಬ್ಯಾನರ್​​ಗಳು ರಾರಾಜಿಸುತ್ತಿದ್ದವು. ಇದೀಗ ಕೋರ್ಟ್​ ಆದೇಶದಂತೆ ಬ್ಯಾನರ್​​ಗಳನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಟೀಶರ್ಟ್ ಹಾಗೂ ಟೋಪಿಗಳನ್ನು ಪಕ್ಷಗಳ ಗುರುತಿನೊಂದಿಗೆ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಇದರಿಂದ ಪ್ರಿಂಟಿಂಗ್ ಪ್ರೆಸ್​ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಪ್ರಿಂಟಿಂಗ್ ಪ್ರೆಸ್​ಗಳಿಗೆ ನಷ್ಟ

ಈ ಬಗ್ಗೆ ಈ ಟಿವಿ ಭಾರತದೊಂದಿಗೆ ಮಾತನಾಡಿದ ಪ್ರಿಂಟಿಂಗ್ ಪ್ರೆಸ್ ​ವ್ಯವಸ್ಥಾಪಕ ರೆಹತ್​ ಉಲ್ಲಾ ಶೇಕ್ , ಹತ್ತು ವರ್ಷಗಳ ಹಿಂದೆ ಪ್ರಿಂಟಿಂಗ್ ಪ್ರೆಸ್​ಗೆ ಸಾಕಷ್ಟು ಡಿಮ್ಯಾಂಡ್ ಇತ್ತು. ಆದರೆ ಈಗ ಎಲ್ಲ ಆರ್ಡರ್​ಗಳು ದೊಡ್ಡ ಪ್ರೆಸ್​ನವರಿಗೆ ಮಾತ್ರ ಹೋಗುತ್ತವೆ. ಒಂದು ವೇಳೆ ನಮ್ಮಂತವರಿಗೆ ಆರ್ಡರ್​ ಕೊಡುವುದೇ ಆದರೆ ರಾಜಕಾರಣಿಗಳು ಕಂಡೀಷನ್​ ಹಾಕುತ್ತಾರೆ. ಒಂದೆರಡು ದಿನಗಳಲ್ಲಿ ಕೆಲಸ ಮುಗಿಯಬೇಕು ಎಂದು ಒತ್ತಾಯ ಮಾಡುತ್ತಾರೆ. ನಮ್ಮಲ್ಲಿರುವ ಕೆಲವೇ ಕೆಲವು ಕೆಲಸಗಾರರು ಹಾಗೂ ಉಪಕರಣಗಳಿಂದ ಇದು ಸಾಧ್ಯವಿಲ್ಲ. ಇದರ ಜೊತೆಗೆ ಆನ್​ಲೈನ್ ವ್ಯವಸ್ಥೆಯಿಂದ ನಮ್ಮ ವ್ಯಾಪಾರ ವಹಿವಾಟು ಸಂಪೂರ್ಣ ದುರ್ಬಲಗೊಂಡಿದೆ ಎಂದು ನೋವು ಹಂಚಿಕೊಂಡರು.

ಐಪಿಎಲ್ ನಡೆಯುವ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ವ್ಯಾಪಾರ ಆಗುತ್ತದೆ. ನಗರದಲ್ಲಿರುವ ಹಳೆಯ ಪ್ರಿಂಟಿಂಗ್ ಪ್ರೆಸ್​ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಆದರೆ ಹೊಸದಾಗಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಲು ಜನ ಹಿಂದೇಟು ಹಾಕುತ್ತಿದ್ದಾರೆ ಎಂದೂ ಹೇಳಿದರು.

Intro:ಚುನಾವಣಾ ಸಂದರ್ಭದಲ್ಲಿ ನಷ್ಟದಲ್ಲಿರುವ ಪ್ರಿಂಟಿಂಗ್ ಪ್ರೆಸ್

ಬೆಂಗಳೂರು: ಚುನಾವಣಾ ಪ್ರಚಾರ ಗಳು ಹೆಚ್ಚಾಗಿ ಪೋಸ್ಟರ್ಗಳು, ಟೀ ಶರ್ಟ್, ಟೋಪಿಗಳು ಹಾಗೂ ಪಾಂಪ್ಲೆಟ್ ಗಳನ್ನು ಒಳಗೊಂಡಿರುತ್ತದೆ. ಇದನ್ನು ತಯಾರಿಸುವ ಪ್ರಿಂಟಿಂಗ್ ಪ್ರೆಸ್ ಗಳು ಕಳೆದ ಹತ್ತು ವರ್ಷಗಳಿಂದ ನಷ್ಟದಲ್ಲಿದೆ.

ಚುನಾವಣಾ ಪ್ರಚಾರ ದೇಶದಲ್ಲಿ ರಂಗೇರಿದೆ ಆದರೆ ಪ್ರಚಾರಕ್ಕೆ ಬೇಕಾಗುವ ಟೀ ಶರ್ಟ್ ಗಳು ಟೋಪಿಗಳು ತಯಾರಿಸುವ ಪ್ರಿಂಟಿಂಗ್ ಪ್ರೆಸ್ ಕಳೆದ ಹತ್ತು ವರ್ಷಗಳಿಂದ ನಷ್ಟದಲ್ಲಿದೆ. ಹತ್ತು ವರ್ಷಗಳ ಹಿಂದೆ ರಸ್ತೆ ತುಂಬಾ ಬ್ಯಾನರ್ ಗಳು ರಾರಾಜಿಸುತ್ತಿತ್ತು ಆದರೆ ಕೋರ್ಟಿನ ಆದೇಶದಂತೆ ಬ್ಯಾನರ್ ಗಳನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಪ್ರಚಾರಕ್ಕೆ ಶರ್ಟ್ ಗಳು ಹಾಗೂ ಟೋಪಿಗಳನ್ನು ತಮ್ಮ ತಮ್ಮ ಪಕ್ಷಗಳ ಚಿನ್ನ ಯೊಂದಿಗೆ ಉಪಯೋಗಿಸಲಾಗುತ್ತದೆ.

ಈ ಕಾರಣಕ್ಕೆ ಈ ಟಿವಿ ಭಾರತ್ ಪ್ರಿಂಟಿಂಗ್ ಪ್ರೆಸ್ಸಿನ ವ್ಯಾಪಾರ ವಹಿವಾಟನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಿತು, ಪ್ರಿಂಟಿಂಗ್ ಪ್ರೆಸ್ಸಿನ ವ್ಯವಸ್ಥಾಪಕರು ವಿಷಾದಕರ ಉತ್ತರ.
ಹತ್ತು ವರ್ಷದ ಹಿಂದೆ ಪ್ರಿಂಟಿಂಗ್ ಪ್ರೆಸ್ ಸಿಗೆ ಸಾಕಷ್ಟು ಡಿಮ್ಯಾಂಡ್ ಇತ್ತು ಆದರೆ ಪ್ರಸ್ತುತವಾಗಿ ಈಗ ಎಲ್ಲ ಕೆಲಸವು ದೊಡ್ಡವರಿಗೆ ಮಾತ್ರ ಹೋಗುತ್ತದೆ ಎಂದು 35 ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್ ವ್ಯವಸ್ಥಾಪಕರಾದ ರೇಮತ್ತುಲ್ಲಾ ಶೇಕ್ ತಿಳಿಸಿದರು. ರಾಜಕೀಯ ಪಕ್ಷಗಳು ಒಂದು ವೇಳೆ ವ್ಯಾಪಾರ ಕೊಡುವುದೇ ಆದರೆ ಒಂದೆರಡು ದಿನಗಳಲ್ಲಿ ಕೆಲಸ ಮುಗಿಯಬೇಕು ಎಂದು ಬೇಡಿಕೆ ಇಡುತ್ತಾರೆ ನಮ್ಮಲ್ಲಿರುವ ಉದ್ಯೋಗಿಗಳು ಹಾಗೂ ಇರುವ ಉಪಕರಣಗಳಿಂದ ಇದು ಸಾಧ್ಯವಿಲ್ಲ ಇದರ ಜೊತೆಗೆ ಆನ್ಲೈನ್ ವ್ಯವಸ್ಥೆಯಿಂದ ನಮ್ಮ ವ್ಯಾಪಾರ ವಹಿವಾಟು ದುರ್ಬಲಗೊಂಡಿದೆ ಎಂದು ಸೇರಿಸಿದರು.

ಗಣನೀಯವಾಗಿ ಪ್ರಿಂಟಿಂಗ್ ಪ್ರೆಸ್ ಗಳು ಐಪಿಎಲ್ ನಡೆಯುವ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ವ್ಯಾಪಾರ ಆಗುತ್ತದೆ, ನಗರದಲ್ಲಿರುವ ಹಳೆಯ ಪ್ರಿಂಟಿಂಗ್ ಪ್ರೆಸ್ ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಆದರೆ ನೂತನವಾಗಿ ಪ್ರಿಂಟಿಂಗ್ ಪ್ರೆಸ್ ಚಾಲನೆ ಮಾಡಬೇಕೆಂದರೆ ಜನ ಹಿಂದೆಟ್ ಹಾಕುತ್ತಿದ್ದಾರೆ

Body:.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.