ETV Bharat / city

ಕೋವಿಡ್​ ಪರಿಹಾರ ನಿಧಿಗೆ ಹಣ ನೀಡುವ ಮುನ್ನ... ಡಿಜಿ - ಐಜಿಪಿ ಮಾತನ್ನೊಮ್ಮೆ ಕೇಳಿ ಬಿಡಿ - ಕೊರೊನಾ ವೈರಸ್​

ಕೊರೊನಾ ಹಾವಳಿಗೆ ರಾಜ್ಯದಲ್ಲಿ ಬಡ ಕಾರ್ಮಿಕರು, ನಿರ್ಗತಿಕರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸದ್ಯ ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲವರು ಪರಿಹಾರ ನೆಪದಲ್ಲಿ ಹಣವಸೂಲಿಗೆ ನಿಂತಿದ್ದಾರೆ. ಈ ಕುರಿತು ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವೀಣ್​ ಸೂದ್​ ಅವರು ಟ್ವೀಟ್​ ಮಾಡುವ ಮೂಲಕ ಜಾಗೃತಿ ಸಂದೇಶ ರವಾನಿಸಿದ್ದಾರೆ.

praveen-sood-twit-about-relief-found
ಡಿಜಿ-ಐಜಿಪಿ
author img

By

Published : Apr 24, 2020, 3:05 PM IST

ಬೆಂಗಳೂರು : ಕೋವಿಡ್ 19 ತಲ್ಲಣ ಸೃಷ್ಟಿ ಮಾಡಿರುವ ಬೆನ್ನಲ್ಲೇ ದೇಶಕ್ಕೆ ಹಾಗೆ ಸರಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ.‌ ಮತ್ತೊಂದೆಡೆ ಕಾರ್ಮಿಕರು , ಬಡವರಿಗೆ ಊಟದ ವ್ಯವಸ್ಥೆಗೆ ತೊಂದರೆ ಯಾಗಿದೆ. ಹೀಗಾಗಿ ಸದ್ಯ ಉಳ್ಳವರು ಬಹಳಷ್ಟು ಮಂದಿ ದೇಣಿಗೆಯನ್ನ ನೀಡ್ತಿದ್ದಾರೆ. ಇದನ್ನೇ ಕೆಲವರು ದುರ್ಬಳಕೆ ಮಾಡಿಕೊಂಡು ಹಣ ಲಪಟಾಯಿಸ್ತಿರುವ ಘಟನೆಗಳು ಬೆಳಕಿಗೆ ಬರುತ್ತಿದೆ.

  • Want to contribute to COVID relief? PM-Cares Fund or CM’s Covid-19 Relief Fund is right choice. Or a personally known organisation. Transferring money to unknown bank account in response to messages on social media is sure recipe for being taken for a ride. Beware of such frauds.

    — DGP KARNATAKA (@DgpKarnataka) April 24, 2020 " class="align-text-top noRightClick twitterSection" data=" ">

ಈ ಕುರಿತು ಎಚ್ಚರಿಕೆ ವಹಿಸುವಂತೆ ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವೀಣ್​ ಸೂದ್​ ಅವರು ಟ್ವೀಟ್​ ಮೂಲಕ ಜನರಿಗೆ ಜಾಗೃತ ಸಂದೇಶವನ್ನು ಕಳುಹಿಸಿದ್ದು, ದೇಣಿಗೆ ನೀಡಲು ಬಯಸುವವರು ಸಾಮಾಜಿಕ ಜಾಲತಾಣದಲ್ಲಿ ಸಿಗುವ ಲಿಂಕ್ ಅಥವಾ ಖಾತೆಗೆ ಹಣ ವರ್ಗಾವಣೆ ಮಾಡಬೇಡಿ. ‌ಪಿಎಂ ಕೇರ್ ಅಥವಾ ಸಿಎಂ ಪರಿಹಾರ ನಿಧಿ ಸರಿಯಾದ ಆಯ್ಕೆ ಎಂದು ತಿಳಿಸಿದ್ದಾರೆ.

ಅಲ್ಲದೇ ವೈಯಕ್ತಿಕವಾಗಿ ತಿಳಿದಿರುವ ಸಂಸ್ಥೆಗಳಿಗೆ ದೇಣಿಗೆ ನೀಡಿ. ಸಾಮಾಜಿಕ‌ ಜಾಲತಾಣದಲ್ಲಿ ಕೆಲವರು ಹಾಕುವ ಪೋಸ್ಟ್​ಗೆ ತಕ್ಷಣ ದೇಣಿಗೆ ನೀಡಿ ಮೋಸದ ಜಾಲಕ್ಕೆ ಬಲಿಯಾಗಬೇಡಿ ಡಿಜಿ -ಐಜಿಪಿ ಮನವಿ ‌ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.