ಬೆಂಗಳೂರು: 'ಹೇಳೋದನ್ನೆಲ್ಲಾ ಸದನದಲ್ಲಿ ಹೇಳಿದ್ದೇನೆ. ನನಗೆ ಯಾವ ಬೇಸರವೂ ಇಲ್ಲ' ಎಂದು ವಿಧಾನಸಭೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿರುವ ಪ್ರತಾಪಚಂದ್ರ ಶೆಟ್ಟಿ ತಿಳಿಸಿದ್ದಾರೆ.
ತಮ್ಮ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದೆ ಪರಿಷತ್ನಲ್ಲಿ ಆದ ಗಲಾಟೆ ಬಗ್ಗೆ ಈಗ ಏನೂ ಮಾತಾಡಲ್ಲ. ನಾನು ನನ್ನ ಕೆಲಸ ಚೆನ್ನಾಗಿ ಮಾಡಿದ್ದೇನೆ. ಎಲ್ಲಾ ನಂಬರ್ ಗೇಮ್ ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗೆ ನಡು ರಸ್ತೆಯಲ್ಲಿಯೇ ಥಳಿಸಿದ ಶಿಕ್ಷಕ... ಕಾರಣ
ಹೇಳಲು ಏನು ಇಲ್ಲ ಅಂತ ನಗುತ್ತಲೇ ಬೇಸರ ವ್ಯಕ್ತಪಡಿಸಿದ ಪ್ರತಾಪಚಂದ್ರ ಶೆಟ್ಟಿ, ರಾಜೀನಾಮೆಯಿಂದ ಯಾವುದೇ ಬೇಸರ ಇಲ್ಲ, ಈವರೆಗೂ ಕೆಲಸ ಚೆನ್ನಾಗಿಯೇ ಮಾಡಿದ್ದೇನೆ. ಬಹುಮತ ಕಳೆದುಕೊಂಡ ಮೇಲೆ ಹೋಗಲೇಬೇಕು. ಇದೆಲ್ಲಾ ನಂಬರ್ ಗೇಮ್, ಇದರಲ್ಲಿ ವಿಶೇಷ ಏನಿಲ್ಲ. ಪಕ್ಷದಿಂದ ಯಾವುದೇ ಒತ್ತಡ ಇರಲಿಲ್ಲ. ಸಭೆಯಲ್ಲಿ ಎಲ್ಲವೂ ಹೇಳಿದ್ದೇನೆ ಎಂದು ಹೇಳಿ ತಮ್ಮ ಕಚೇರಿಯಿಂದ ತೆರಳಿದರು.