ಬೆಂಗಳೂರು : ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡಿದ ಹಿನ್ನೆಲೆ ಉಪ ಸಭಾಪತಿ ಎಂ ಕೆ ಪ್ರಾಣೇಶ್ ಹಂಗಾಮಿ ಸಭಾಪತಿಯಾಗಿದ್ದು, ನೂತನ ಸಭಾಪತಿ ಆಯ್ಕೆಯಾಗುವವರೆಗೂ ಸಭಾಪತಿ ಪೀಠದಲ್ಲಿ ಕುಳಿತು ಕಾರ್ಯಕಲಾಪ ನಡೆಸಿಕೊಡಲಿದ್ದಾರೆ.
ಬಿಎಸಿ ಸಭೆಯಲ್ಲಿ ಬುಧವಾರದವರೆಗೂ ವಿಧಾನ ಪರಿಷತ್ ಕಲಾಪ ಮುಂದುವರೆಸಲು ನಿರ್ಧಾರ ಕೈಗೊಂಡಿದ್ದು, ನೂತನ ಸಭಾಪತಿ ಆಯ್ಕೆಯಾಗುವವರೆಗೂ ಪ್ರಾಣೇಶ್ ಅವರೇ ಸದನದ ಕಾರ್ಯ ಕಲಾಪ ನಡೆಸಲಿದ್ದಾರೆ.
ಹಾಗಾಗಿ, ಸಭಾಪತಿ ಕಚೇರಿಯಿಂದಲೇ ಪ್ರಾಣೇಶ್ ಕಾರ್ಯ ನಿರ್ವಹಿಸಲಿದ್ದು, ಸಭಾಪತಿ ಕಚೇರಿಗೂ ಪ್ರಾಣೇಶ್ ನಾಮಫಲಕವನ್ನು ಅಳವಡಿಸಲಾಗಿದೆ. ಇದರಿಂದಾಗಿ ಉಪ ಸಭಾಪತಿ ಹಾಗೂ ಸಭಾಪತಿ ಕಚೇರಿ ಎರಡಕ್ಕೂ ಪ್ರಾಣೇಶ್ ನಾಮಫಲಕ ಅಳವಡಿಕೆ ಮಾಡಲಾಗಿದೆ.
ಓದಿ: ಮುಂದೆ ಸ್ಟಾರ್ಟ್ ಅಪ್ಗಳು ದೇಶದ ಆರ್ಥಿಕತೆ ನಡೆಸುತ್ತವೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಸಚಿವಾಲಯ ಸಿಬ್ಬಂದಿ ಎಡವಟ್ಟು: ಉಪ ಸಭಾಪತಿ ಪ್ರಾಣೇಶ್ ಇದೀಗ ಹಂಗಾಮಿ ಸಭಾಪತಿಯಾಗಿದ್ದು,ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಲಾಗಿದೆ.
![pranesh-to-act-as-council-interim-president-speaker](https://etvbharatimages.akamaized.net/etvbharat/prod-images/10507066_863_10507066_1612505472420.png)
ಅದಕ್ಕೆ ಪೂರಕವಾಗಿ ಸಭಾಪತಿ ಕಚೇರಿ ಮುಂದೆ ಪ್ರಾಣೇಶ್ ಹೆಸರಿನ ನಾಮಫಲಕ ಅಳವಡಿಸಲಾಗಿದೆ. ಆದರೆ, ಅವರು ಹಂಗಾಮಿ ಸಭಾಪತಿ ಮಾತ್ರ. ಪ್ರಭಾರಿ ಇಲ್ಲವೇ ಹಂಗಾಮಿ ಪದ ಬಳಕೆ ಮಾಡದಿರುವುದು ಕಾಣಬಹುದು.