ಬೆಂಗಳೂರು: ಪರಿಕ್ರಮ ಹ್ಯುಮಾನಿಟಿ ಫೌಂಡೇಶನ್ ಮತ್ತು ಇಂಡಿಯಾಸೆಟ್ಜ್ ಸೇರಿ ಪ್ರಾಣ - ಕ್ಲಿನಿಕ್ ಆನ್ ವ್ಹೀಲ್ಸ್ ಎಂಬ ಸೇವೆಯನ್ನು ಆರಂಭಿಸಿದೆ. ಈ ಮೊಬೈಲ್ ಘಟಕವು ಪ್ರಾಥಮಿಕ ಚಿಕಿತ್ಸೆಯ ಸೌಲಭ್ಯ ಮಾತ್ರವಲ್ಲದೇ ತುರ್ತು ಸಂದರ್ಭದಲ್ಲಿ ಬೇಕಾದ 4 ಹಾಸಿಗೆಗಳೊಂದಿಗೆ ಐಸಿಯು ಆಕ್ಸಿಜನ್ ಸೌಲಭ್ಯ ಕೂಡ ಹೊಂದಿದೆ. ಬೆಂಗಳೂರಿನಲ್ಲಿ 110 ಕೊಳಗೇರಿ ಪ್ರದೇಶ ಮತ್ತು 20,000 ಜನಸಂಖ್ಯೆಯನ್ನು ಒಳಗೊಂಡಿರುವ ಹಿಂದುಳಿದ ಸಮುದಾಯಗಳಿಗೆ ಈ ಆರೋಗ್ಯ ಸೇವೆ ಸಿಗಲಿದೆ.
ಪರಿಕ್ರಮ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಸಿಇಒ ಶುಕ್ಲಾ ಬೋಸ್ ಮಾತನಾಡಿ, ಬೆಂಗಳೂರು 1.3 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಸುಮಾರು 10 ಲಕ್ಷ ಜನರು ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಅಂತಹ ಪ್ರದೇಶದಲ್ಲಿ 1,000 ಕ್ಲಿನಿಕ್ ವಾಹನಗಳ ಅಗತ್ಯವಿದೆ. ಆದರೆ ಮೊದಲು 100 ಮೊಬೈಲ್ ಕ್ಲಿನಿಕ್‌ಗಳನ್ನು ತಲುಪಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅಂಕೋಲಾದಲ್ಲಿ ವಿಶಿಷ್ಟ ಆಚರಣೆ : ಆಯಾಸ ತಣಿಯಲು ಜಲಕ್ರೀಡೆಯಾಡುವ ದೇವರು
ಇಂಡಿಯಾಸೆಟ್ಜ್ ನ ಸಂಸ್ಥಾಪಕ ಮತ್ತು ಸಿಇಒ ಶಿವಂ ಸಿನ್ಹಾ ಮಾತನಾಡಿ, ಪರಿಕ್ರಮ ಫೌಂಡೇಶನ್ ನಿರ್ಗತಿಕರಿಗೆ ಮತ್ತು ದೀನದಲಿತರಿಗೆ ವಿಶೇಷವಾಗಿ ಮಕ್ಕಳ ಶಿಕ್ಷಣ ಮತ್ತು ಅವರ ಕುಟುಂಬಗಳಿಗಾಗಿ ಮಾಡುತ್ತಿರುವ ಕೆಲಸದಿಂದ ನಮಗೆ ಉತ್ತೇಜನ ಸಿಕ್ಕಿದೆ. ಅವರೊಂದಿಗೆ ಸೇರಿ ಈ ಮೊಬೈಲ್ ಕ್ಲಿನಿಕ್ ಸ್ಥಾಪಿಸಿ ನಿರ್ಗತಿಕರಿಗೆ ಆರೋಗ್ಯ ಕವಚ ನೀಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.