ಬೆಂಗಳೂರು: ಹಿರಿಯ ನಟ ಶಿವರಾಮ್ ಇಹಲೋಕ ತ್ಯಜಿಸಿದ್ದು, ಸಾರ್ವಜನಿಕರ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಶಿವರಾಮ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸಂತಾಪ ಸೂಚಿಸಿ ಮಾತನಾಡಿದರು.
ಶ್ರೀರಾಮ ಸಂಘಟನೆಯಿಂದ ಶ್ರದ್ಧಾಂಜಲಿ ಅರ್ಪಿಸಿದ್ದೇವೆ. ಶಿವರಾಮ್ ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟುಮಾಡಿದೆ. ಅವರೊಬ್ಬ ಅದ್ಭುತ ಕಲಾವಿದ. ಚಿತ್ರರಂಗಕ್ಕೆ ಆದರ್ಶವಾಗಿದ್ದರು. ಅವರ ಮಾರ್ಗದರ್ಶನ ಚಿತ್ರರಂಗಕ್ಕಿದೆ. ಅಯ್ಯಪ್ಪ ಸ್ವಾಮಿಯ ಆರಾಧಕರು ಅವರು. ಆದ್ರೆ ಅವರಿಂದು ನಮ್ಮೊಂದಿಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಗೆ, ಸಹ ಕಲಾವಿದರನ್ನು ಚಿತ್ರರಂಗ ಗೌರವಿಸಬೇಕೆಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: ಚಂದನವನದ ಹಿರಿಯ ಚೇತನ ಶಿವರಾಮಣ್ಣ ನೆನೆದು ಕಣ್ಣೀರಿಟ್ಟ ಕನ್ನಡ ಚಿತ್ರರಂಗ: VIDEO