ETV Bharat / city

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು, ಆತ್ಮಹತ್ಯೆ ಯತ್ನಿಸಿಲ್ಲ: ಪ್ರಭಾಕರರೆಡ್ಡಿ ಸ್ಪಷ್ಟನೆ - ಪ್ರಭಾಕರ ರೆಡ್ಡಿ ವಿರುದ್ಧ ಸುಳ್ಳು ಸುದ್ದಿ

‘ಸಾಯಿ ಡೆವಲಪರ್ಸ್‌ನ ಮಾಲೀಕರೂ ಆಗಿರುವ ಪ್ರಭಾಕರ ರೆಡ್ಡಿ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಗೆ ಮುಂದಾಗಿದ್ದರು’ ಎಂಬ ಸುದ್ದಿ ಹರಿದಾಡಿತ್ತು.

prabhakar reddy clarifies on suicide news
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು, ಆತ್ಮಹತ್ಯೆ ಯತ್ನಿಸಿಲ್ಲ: ಪ್ರಭಾಕರರೆಡ್ಡಿ ಸ್ಪಷ್ಟನೆ
author img

By

Published : Jul 1, 2021, 4:07 AM IST

ಬೆಂಗಳೂರು: ‘ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವದಂತಿ ಹಬ್ಬಿದೆ. ಅದನ್ನು ನಂಬಬೇಡಿ’ ಎಂದು ರಿಯಲ್ ಎಸ್ಟೇಟ್‌ ಉದ್ಯಮಿ ಆರ್. ಪ್ರಭಾಕರ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

‘ಸಾಯಿ ಡೆವಲಪರ್ಸ್‌ನ ಮಾಲೀಕರೂ ಆಗಿರುವ ಪ್ರಭಾಕರ ರೆಡ್ಡಿ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ವೈಯಕ್ತಿಕ ಕಾರಣದಿಂದ ಆತ್ಮಹತ್ಯೆಗೆ ಮುಂದಾಗಿದ್ದರು’ ಎಂಬ ಸುದ್ದಿ ಹರಿದಾಡಿತ್ತು.

ಸಾಯಿ ಡೆವಲಪರ್ಸ್‌ನ ಮಾಲೀಕ ಪ್ರಭಾಕರ್ ರೆಡ್ಡಿ

ಈ ಸಂಬಂಧ ಆಸ್ಪತ್ರೆಯಿಂದಲೇ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ಪ್ರಭಾಕರ ರೆಡ್ಡಿ, ‘ನನಗೆ ಕೋವಿಡ್‌ ಸೋಂಕು ತಗುಲಿತ್ತು. ಬಳಿಕ ಮೊನ್ನೆ ನಡೆದ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಶ್ವಾಸಕೋಶ ಮತ್ತು ಗಂಟಲಿನಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಸದ್ಯ ವಾರ್ಡ್‌ನಲ್ಲೇ ಇದ್ದು, ಯಾವುದೇ ಸಮಸ್ಯೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಗೋವಾ ಪೊಲೀಸರಿಂದ ದೌರ್ಜನ್ಯ ಆರೋಪ: ಮುದ್ದೇಬಿಹಾಳದ ಮೂವರು ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.