ETV Bharat / city

ಪೋಂಜಿ ಹಗರಣ ; ಬೆಂಗಳೂರಿನಲ್ಲಿ 35.70 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶಕ್ಕೆ - ಜಾರಿ ನಿರ್ದೇಶನಾಲಯ

ಪೋಂಜಿ ಪದವನ್ನು ಸಾಮಾನ್ಯವಾಗಿ ಅಕ್ರಮ ಸಾಮೂಹಿಕ ಹೂಡಿಕೆ ಯೋಜನೆಗಳಿಗೆ ಬಳಸಲಾಗುತ್ತದೆ. 1990ರ ದಶಕದಲ್ಲಿ ಪ್ಲಾಂಟೇಶನ್ ಕಂಪನಿಗಳ ಹೆಸರಿನಲ್ಲಿ ಚಹಾ ಮತ್ತು ಇತರ ತೋಟಗಳ ಮಾಲೀಕರಿಗೆ ಹೆಚ್ಚಿನ ಲಾಭದ ಭರವಸೆ ನೀಡಿ ಹಣಕಾಸಿನ ಅವ್ಯವಹಾರ ನಡೆಸಲಾಗಿತ್ತು. ಈ ಅಕ್ರಮ ಹಣ-ಸಂಗ್ರಹಿಸುವ ಯೋಜನೆಗೆ ನಂತರದ ದಿನಗಳಲ್ಲಿ ಪೋಂಜಿ ಪದವನ್ನು ಪರಿಚಯಿಸಲಾಗಿದೆ..

Ponzi scheme: ED attaches Rs 35.70-cr assets in Bengaluru
ಪೋಂಜಿ ಹಗರಣ; ಬೆಂಗಳೂರಿನಲ್ಲಿ 35.70 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶಕ್ಕೆ
author img

By

Published : Nov 3, 2021, 1:55 PM IST

ಬೆಂಗಳೂರು : ನಗರದ ಪೋಂಜಿ ಯೋಜನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನಡಿಯಲ್ಲಿ 35.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.

ವಿಕ್ರಂ ಇನ್ವೆಸ್ಟ್‌ಮೆಂಟ್ಸ್ ಮತ್ತು ಅಸೋಸಿಯೇಟ್ಸ್ ಹೆಸರಿದ ಬೆಂಗಳೂರಿನಲ್ಲಿನರುವ ಆಸ್ತಿ,ಬ್ಯಾಂಕ್ ದಾಖಲೆಗಳು, ಸ್ಥಿರ ಠೇವಣಿಯ 1.49 ಕೋಟಿ ರೂ., ಜಮೀನು, ಕಚೇರಿ ಸ್ಥಳಗಳು ಮತ್ತು ವಸತಿ ಫ್ಲಾಟ್‌ಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಶಕ್ಕೆ ಪಡೆಯಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ.

2018ರ ಮಾರ್ಚ್‌ನಲ್ಲಿ ಬೆಂಗಳೂರು ಪೊಲೀಸರು ದಾಖಿಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಪ್ರಕರಣವನ್ನು ದಾಖಲಿಸಿತ್ತು.

ವಿಕ್ರಮ್ ಇನ್ವೆಸ್ಟ್‌ಮೆಂಟ್‌ನ ಪಾಲುದಾರರು ಮತ್ತು ಇತರ ಸಹಚರರಾದ ರಾಘವೇಂದ್ರ ಶ್ರೀನಾಥ್, ಕೆ ಪಿ ನರಸಿಂಹಮೂರ್ತಿ, ಎಂ ಪ್ರಹ್ಲಾದ, ಕೆ ಸಿ ನಾಗರಾಜ್ ಮತ್ತು ಸೂತ್ರಂ ಸುರೇಶ್ ಅವರು ಸರಕು ವ್ಯಾಪಾರದ ನೆಪದಲ್ಲಿ ಹೆಚ್ಚಿನ ಆದಾಯದ ಭರವಸೆ ನೀಡಿ ವಿಕ್ರಮ್ ಇನ್ವೆಸ್ಟ್‌ಮೆಂಟ್‌ನಲ್ಲಿ ಹೂಡಿಕೆ ಮಾಡುವಂತೆ ಸಾರ್ವಜನಿಕರಿಗೆ ಆಮಿಷ ಒಡ್ಡಿ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದೊಡ್ಡದ ಲಾಭದ ಆಮಿಷ ನೀಡಿ ವಂಚನೆ! : ಕಂಪನಿಯು ಅಳವಡಿಸಿಕೊಂಡಿರುವ ವಿಧಾನವೆಂದರೆ ಅವರು ಸರಕು ವ್ಯಾಪಾರದ ನೆಪದಲ್ಲಿ ಗ್ರಾಹಕರಿಂದ ಹೂಡಿಕೆಗಳನ್ನು ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿದ್ದಾರೆ, ವಾರ್ಷಿಕವಾಗಿ ಶೇ.30-35ರಷ್ಟು ದೊಡ್ಡ ಲಾಭವನ್ನು ನೀಡುವ ಆಮಿಷವೊಡ್ಡಿದ್ದರು ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸಂಸ್ಥೆಯು ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಯಾವುದೇ ನಿಯಂತ್ರಕ ಏಜೆನ್ಸಿಗಳಲ್ಲಿ ನೋಂದಾಯಿಸಲ್ಪಟ್ಟಿಲ್ಲ. ಗ್ರಾಹಕರಿಗೆ ನೀಡಿದ್ದ ಭರವಸೆಯಂತೆ ತಮ್ಮ ಮೊದಲ ಕಂತನ್ನು ವಾಪಸ್‌ ನೀಡಿದ್ದಾರೆ. ಬಳಿಕ ಗ್ರಾಹಕರ ನಂಬಿಕೆಯನ್ನು ಗಳಿಸಿ ಅವರು ಇನ್ನಷ್ಟು ಹೂಡಿಕೆ ಮಾಡಲು ಆಮಿಷವೊಡ್ಡಿದ್ದರು. ನಂತರ ಕಂಪನಿಯು ಅವರಿಗೆ ಅಸಲು ಮೊತ್ತವನ್ನು ಒಳಗೊಂಡಂತೆ ಹಣವನ್ನು ಹಿಂತಿರುಗಿಸುವುದನ್ನು ನಿಲ್ಲಿಸಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೆಲವು ಹೈ ಪ್ರೊಫೈಲ್ ವ್ಯಕ್ತಿಗಳು ಸಹ ಈ ಯೋಜನೆಯಲ್ಲಿ ಭಾರಿ ಆದಾಯವನ್ನು ಗಳಿಸುವ ಭರವಸೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ಕಂಪನಿಯು ತನ್ನ ಹೊಸ ಹೂಡಿಕೆದಾರರಿಂದ ಪಡೆದ ನಿಧಿಯಿಂದ ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೆ ಲಾಭವನ್ನು ಪಾವತಿಸಿದೆ ಎಂದು ಜಾರಿನಿರ್ದೇಶನಾಲಯ ವಿವರಿಸಿದೆ. ಕಂಪನಿಯು ಎಲ್‌ಐಸಿ ಏಜೆಂಟ್‌ಗಳು ಮತ್ತು ಇತರರನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಏನಿದು ಪೋಂಜಿ? : ಪೋಂಜಿ ಪದವನ್ನು ಸಾಮಾನ್ಯವಾಗಿ ಅಕ್ರಮ ಸಾಮೂಹಿಕ ಹೂಡಿಕೆ ಯೋಜನೆಗಳಿಗೆ ಬಳಸಲಾಗುತ್ತದೆ. 1990ರ ದಶಕದಲ್ಲಿ ಪ್ಲಾಂಟೇಶನ್ ಕಂಪನಿಗಳ ಹೆಸರಿನಲ್ಲಿ ಚಹಾ ಮತ್ತು ಇತರ ತೋಟಗಳ ಮಾಲೀಕರಿಗೆ ಹೆಚ್ಚಿನ ಲಾಭದ ಭರವಸೆ ನೀಡಿ ಹಣಕಾಸಿನ ಅವ್ಯವಹಾರ ನಡೆಸಲಾಗಿತ್ತು. ಈ ಅಕ್ರಮ ಹಣ-ಸಂಗ್ರಹಿಸುವ ಯೋಜನೆಗೆ ನಂತರದ ದಿನಗಳಲ್ಲಿ ಪೋಂಜಿ ಪದವನ್ನು ಪರಿಚಯಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.