ದೊಡ್ಡಬಳ್ಳಾಪುರ: ಇಲ್ಲಿ ನಡೆದ ಅಂಗನವಾಡಿ ಶಂಕುಸ್ಥಾಪನೆ ಕಾರ್ಯಕ್ರಮ ಜನರಿಗೆ ತಮ್ಮ ಜನಪ್ರತಿನಿಧಿಗಳ ಮೇಲಿದ್ದ ಆಕ್ರೋಶದ ಕಟ್ಟೆ ಒಡೆಯಲು ವೇದಿಕೆಯಾದ ಘಟನೆ ನಡೆಯಿತು. ರಾಜೀವ್ ಗಾಂಧಿ ಬಡಾವಣೆ ಸ್ಥಾಪನೆಯಾಗಿ 20 ವರ್ಷಗಳೇ ಕಳೆದರೂ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಶೂನ್ಯ ಸಾಧನೆ ಮಾಡಿದ್ದಾರೆಂದು ಜನರು ಶಾಸಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕ ಟಿ. ವೆಂಕಟರಮಣಯ್ಯ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದಾಗ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಹೇಳಲು ಪ್ರಾರಂಭಿಸಿದರು. ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ನಿರ್ಮಾಣವಾಗಿಲ್ಲ. ಹೇಳೋದಕ್ಕೆ ನಗರಸಭೆಯ ವ್ಯಾಪ್ತಿಯಲ್ಲಿದ್ದರೂ ಇಲ್ಲಿನ ಜನರು ಕುಗ್ರಾಮದ ನಿವಾಸಿಗಳಂತೆ ನಿತ್ಯ ಜೀವನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರನ್ನು ಮುತ್ತಿಗೆ ಹಾಕಿದ ಬಿಜೆಪಿ ಪಕ್ಷದ ನಗರಸಭಾ ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದರಿಂದ ಕೆರಳಿದ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು ಕೇಂದ್ರದಲ್ಲೂ ನಿಮ್ಮದೇ ಸರ್ಕಾರ, ರಾಜ್ಯದಲ್ಲೂ ನಿಮ್ಮದೇ ಸರ್ಕಾರವಿದೆ. ಜೊತೆಗೆ ನಗರಸಭೆಯಲ್ಲೂ ನಿಮ್ಮ ಪಕ್ಷದವರೇ ಅಧ್ಯಕ್ಷರಾಗಿದ್ದಾರೆ. ತ್ರಿಬಲ್ ಇಂಜಿನ್ ಸರ್ಕಾರ ಇರುವಾಗ ಅನುದಾನ ತಂದು ಅಭಿವೃದ್ಧಿ ಮಾಡುವ ಬದಲಿಗೆ ಶಾಸಕರನ್ನು ದೂರುವುದು ಯಾವ ನ್ಯಾಯ ಎಂದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಜನರಿಗೆ ಮಾಡುತ್ತಿರುವ ಅನ್ಯಾಯ ನಿಲ್ಲಿಸಿ: ಸಿದ್ದರಾಮಯ್ಯ