ETV Bharat / city

'ಒಳ್ಳೇ ಹುಡುಗ'ನಿಗೆ ಪೊಲೀಸ್​​ ನೋಟಿಸ್: ವಾರದೊಳಗೆ ವಿಚಾರಣೆ ಹಾಜರಾಗಲು ಸೂಚನೆ

author img

By

Published : Aug 18, 2020, 8:48 PM IST

ಮುಸ್ಲಿಂ ಮಹಿಳೆಯ ಹೇಳಿಕೆಯನ್ನು ಟ್ರೋಲ್​​ ಮಾಡಿ ಫಜೀತಿಗೀಡಾಗಿರುವ ನಟ 'ಒಳ್ಳೆಯ ಹುಡುಗ' ಪ್ರಥಮ್​ಗೆ ವಿಚಾರಣೆಗೆ ಹಾಜರಾಗುವಂತೆ ಹಲಸೂರು ಗೇಟ್​​ ಪೊಲೀಸರು ನೋಟಿಸ್​​ ನೀಡಿದ್ದಾರೆ.

police-sent-notice-to-actor-pratham-to-attend-inquiry
ಪ್ರಥಮ್

ಬೆಂಗಳೂರು : ಡಿ.ಜೆ.ಹಳ್ಳಿ ಪ್ರಕರಣದ‌ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದ ನಟ, ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆ, 7 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

'ನನಗೆ 7 ತಿಂಗಳ ಮಗು ಮತ್ತು 3 ತಿಂಗಳ ಮಗು ಇದೆ' ಎಂಬ ಮುಸ್ಲಿಂ ಮಹಿಳೆಯ ಹೇಳಿಕೆಯ ದೃಶ್ಯವನ್ನು ಶೇರ್​ ಮಾಡಿ 'ನಿಜವಾಗಲೂ ಇಂತಹ ಮುಗ್ಧರು ಅನ್ ಎಜುಕೇಟೆಡ್ ಇರಬೇಕು. 4 ತಿಂಗಳ ಅಂತರದಲ್ಲಿ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ?' ಎಂದು ಅಚ್ಚರಿ ಜೊತೆ ಪ್ರಶ್ನೆ ಮಾಡಿದ್ದ ಪೊಸ್ಟ್​ ಅ​ನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿದ್ದರು.

ಇದನ್ನೂ ಓದಿ: ಒಳ್ಳೆ ಹುಡ್ಗ ಪ್ರಥಮ್ ವಿರುದ್ಧ ಹಲಸೂರು ಗೇಟ್​ ಠಾಣೆಯಲ್ಲಿ ಎಫ್​ಐಆರ್​

ಈ ಕುರಿತು ಹಲಸೂರು ಗೇಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಹಾಜರಾಗುವಂತೆ ಪೊಲೀಸರು ನೋಟಿಸ್​​ ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.