ಬೆಂಗಳೂರು: ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಎಂಬ ಶಂಕೆಯ ಮೇಲೆ ಹೆಣ್ಣೂರು ಪೊಲೀಸರು ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ದಾಳಿಯಲ್ಲಿ ಹಲವು ಯುವಕ, ಯುವತಿಯರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ರಿಪೋರ್ಟ್ ಬಂದ ನಂತರ ಕಾನೂನು ಕ್ರಮ: ವಶಕ್ಕೆ ಪಡೆದ ಯುವಕ - ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಓದಿ: ಜೈಲಲ್ಲಿದ್ದ ಮಗನಿಗೆ ಬ್ಯಾಗ್ನಲ್ಲಿ ಡ್ರಗ್ಸ್ ಕೊಡಲು ಯತ್ನಿಸಿ ಜೈಲುಪಾಲಾದ ತಾಯಿ!
ವಿದೇಶಿ ಯುವಕ-ಯುವತಿಯರು ವಶ: ಬೇರೆ ರಾಜ್ಯದವರು ಸೇರಿದಂತೆ ವಿದೇಶಿ ಯುವಕ-ಯುವತಿಯರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಅವರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಹೆಣ್ಣೂರು ಪೊಲೀಸರು ಹೇಳಿದರು. ಈ ಘಟನೆ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.