ಬೆಂಗಳೂರು: ಮಲ್ಲೇಶ್ವರದ ಗಂಗಮ್ಮ ದೇವಿ ದೇವಸ್ಥಾನಕ್ಕೆ ಪೊಲೀಸರು ಶಬ್ದ ಮಾಲಿನ್ಯ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಪುರಾತನ ದೇವಾಲಯ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ನೊಟೀಸ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೇ ವೇಳೆ, ಮೈಕ್ ವಿಚಾರದಲ್ಲಿ ದೇವಸ್ಥಾನಗಳನ್ನೇ ಗುರಿಯಾಗಿಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಹೈಕೋರ್ಟ್ ಆದೇಶದಂತೆ ನಿಯಮ ಪಾಲಿಸಿ. ಹೆಚ್ಚು ಧ್ವನಿವರ್ಧಕಗಳನ್ನು ಬಳಸಬೇಡಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ದೇವಸ್ಥಾನದ ಅಧ್ಯಕ್ಷ ಸುಧಾಕರ್, ನೋಟಿಸ್ ಕೊಟ್ಟಿಲ್ಲ. ಮೌಕಿಕವಾಗಿ ಎಚ್ಚರಿಸಿದ್ದಾರೆ ಎಂದು ತಿಳಿಸಿದರು.
ಸಾಮಾನ್ಯ ದಿನಗಳಲ್ಲಿ ನಮ್ಮ ದೇವಸ್ಥಾನದಲ್ಲಿ ಮೈಕ್ ಬಳಸುವುದಿಲ್ಲ. ಹಬ್ಬದಂದು ವಿಶೇಷ ಪೂಜೆ ವೇಳೆ ಮತ್ತು ಕಾರ್ಯಕ್ರಮಗಳು ಜರುಗುವಾಗ ಮೈಕ್ ಬಳಸಲಾಗುತ್ತದೆ. ಈ ರೀತಿ ವಿಶೇಷವಾಗಿ ಬಳಸುವಾಗ ಪೊಲೀಸರ ಅನುಮತಿ ಪಡೆದು ಧ್ವನಿವರ್ಧಕ ಬಳಸುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ರಿಂಗ್ ಮಾಸ್ಟರ್ ಮಹಾನಾಯಕ ಆಗಿರಬಹುದೇ? ಮೀರ್‌ಸಾದಿಕ್ ಆಗಿರಬಹುದೇ?: ಬಿಜೆಪಿ