ETV Bharat / city

ನಟಿ ಚೇತನಾ ರಾಜ್ ಸಾವು:‌ ಮರಣೋತ್ತರ ಪರೀಕ್ಷೆ ವರದಿ ಬಳಿಕ ಪೊಲೀಸ್ ತನಿಖೆ - serial actor Chetan Raj

ಕಿರುತರೆ ನಟಿ ಚೇತನಾ ರಾಜ್ ಸಾವಿನ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ 'ಅಸಹಜ ಸಾವು' ಪ್ರಕರಣ ದಾಖಲಾಗಿದೆ.

ಕಿರುತರೆ ನಟಿ ಚೇತನಾ ರಾಜ್
ಕಿರುತರೆ ನಟಿ ಚೇತನಾ ರಾಜ್
author img

By

Published : May 18, 2022, 6:42 AM IST

ಬೆಂಗಳೂರು: ದೇಹದಲ್ಲಿರುವ ಬೊಜ್ಜು ತೆಗಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿರುತರೆ ನಟಿ ಚೇತನಾ ರಾಜ್ ಸಾವಿನ ಸಂಬಂಧ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ 'ಅಸಹಜ ಸಾವು' ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಭಾರತೀಯ ವೈದ್ಯಕೀಯ ಮಂಡಳಿಗೆ ಕಳುಹಿಸಿ ಅಭಿಪ್ರಾಯ ಕೇಳಲಾಗುತ್ತದೆ. ಇದರ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಯಲಿದೆ. ತನಿಖೆಯ ವೇಳೆ ನಿರ್ಲಕ್ಷ್ಯ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮಂಜುನಾಥ್ ನಗರದ ಕಾಡೇ ಆಸ್ಪತ್ರೆ ವೈದ್ಯ ಡಾ.ಶೆಟ್ಟಿ ಅವರು ಕಾಸ್ಮೆಟಿಕ್ ಆಸ್ಪತ್ರೆ ಅರವಳಿಕೆ ತಜ್ಞ ಡಾ.ಮೆಲ್ವಿನ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೋಮವಾರ ಸಂಜೆ 5.30ಕ್ಕೆ ಏಕಾಏಕಿ ಡಾ.ಮೆಲ್ವಿನ್, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಕರೆತಂದು ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್‌ಗಳು ಪ್ರಶ್ನಿಸಿದಾಗ ಬೆದರಿಕೆವೊಡ್ಡಿದ್ದಾರೆ. ಆ ನಂತರ, ಆಸ್ಪತ್ರೆಯೊಳಗೆ ಒತ್ತಾಯಪೂರ್ವಕವಾಗಿ ರೋಗಿಯನ್ನು ಕರೆತಂದು ತುರ್ತು ನಿಗಾ ಘಟಕದಲ್ಲಿ ಸೇರಿಸಿದರು.

ಕಿರುತರೆ ನಟಿ ಚೇತನಾ ರಾಜ್
ಕಿರುತರೆ ನಟಿ ಚೇತನಾ ರಾಜ್

ವಿಷಯ ತಿಳಿದು ವೈದ್ಯರು ಐಸಿಯುಗೆ ಹೋದಾಗ ಆಕೆಗೆ ಹೃದಯಾಘಾತವಾಗಿದೆ. ಹೀಗಿದ್ದರೂ ಚಿಕಿತ್ಸೆ ನೀಡುವಂತೆ ಬೆದರಿಕೆ ಒಡ್ಡಿದ್ದಾರೆ. ಅದಕ್ಕೂ ಮೊದಲು ಆಕೆಗೆ ಯಾವ ಚಿಕಿತ್ಸೆ ನೀಡಲಾಗಿತ್ತು. ಏನಾಗಿದೆ ಎಂಬುದರ ಬಗ್ಗೆ ಪ್ರಶ್ನಿಸಿದಾಗ ಯಾವುದೇ ಉತ್ತರ, ದಾಖಲೆಯನ್ನು ಕೊಟ್ಟಿಲ್ಲ. ಕೊನೆಗೆ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನಾಡಿಮಿಡಿತ, ಹೃದಯಬಡಿತ ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲಾ ರೀತಿಯ ಪ್ರಯತ್ನ ಮಾಡಿ ಕೊನೆಗೆ ಅವರು ಮೃತಪಟ್ಟಿರುವುದಾಗಿ ಘೋಷಣೆ ಮಾಡಲಾಗಿದೆ. ಕಾಡೇ ಆಸ್ಪತ್ರೆಗೆ ಬರುವ ಮೊದಲೇ ಅವರು ಅಸುನೀಗಿದ್ದು, ವಿಷಯ ತಿಳಿಸದೆ ಡಾ.ಮೆಲ್ವಿನ್ ರೋಗಿಯನ್ನು ಕರೆತಂದು ಅಪ್ಪಣೆ ಇಲ್ಲದೆ ಒಳಗೆ ದಾಖಲು ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಾಸ್ಮೆಟಿಕ್ ಸರ್ಜರಿ ಒಳ್ಳೆಯದಲ್ಲ.. ಗಾಳಿಪಟದ‌‌‌‌‌ ನಟಿ‌ ನೀತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.