ಬೆಂಗಳೂರು : ಹೊಸ ವರ್ಷ ಹತ್ತಿರವಾಗುತ್ತಿದ್ದಂತೆ ಮಾದಕ ವಸ್ತುಗಳ ಮಾರಾಟ ಹೆಚ್ಚಾಗುತ್ತಲೇ ಇದೆ. ಇವುಗಳ ಮಾರಾಟ ಜಾಲ ಪತ್ತೆ ಮಾಡಲು ಪೊಲೀಸರೂ ಕೂಡಾ ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
ಸದ್ಯಕ್ಕೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರ ಕಾರ್ಯಾಚರಣೆ ನಡೆಸಿ, ಅಫೀಮು ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸಿದ್ದಾರೆ. ರಾಜುರಾಮ್ ಮತ್ತು ಉತ್ತಮ್ ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಹೆಚ್ಚು ಜನ ಸೇರುವ ಹಿನ್ನೆಲೆ ಕೆಲವು ನಿರ್ಬಂಧ ಹೇರಲಾಗುತ್ತದೆ: ಗೃಹ ಸಚಿವ ಬೊಮ್ಮಾಯಿ
ಈ ಇಬ್ಬರು ಮೆಜೆಸ್ಟಿಕ್ ಬಳಿ ಅಕ್ರಮವಾಗಿ ಆಫೀಮು ಮಾರುತ್ತಿದ್ದನ್ನು ಕಂಡು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 1 ಕೆಜಿ 20ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.