ETV Bharat / city

ಸಾಹಿತಿ ಚಂದ್ರಶೇಖರ್ ಕಂಬಾರ ಅವರಿಗೆ ಪತ್ನಿ ವಿಯೋಗ - ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರ ಪತ್ನಿ ಸತ್ಯಭಾಮಾ ನಿಧನ

ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರ ಪತ್ನಿ ಸತ್ಯಭಾಮಾ ಸಿ. ಕಂಬಾರ ಅವರ ಪತ್ನಿ ಮೃತಪಟ್ಟಿದ್ದಾರೆ.

ಸಾಹಿತಿ ಚಂದ್ರಶೇಖರ್ ಕಂಬಾರ ಅವರಿಗೆ ಪತ್ನಿ ವಿಯೋಗ

author img

By

Published : Jan 18, 2022, 11:22 AM IST

Updated : Jan 18, 2022, 11:49 AM IST

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರ ಪತ್ನಿ ಸತ್ಯಭಾಮಾ ಸಿ. ಕಂಬಾರ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸತ್ಯಭಾಮ 15 ದಿನ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.

ವೈದ್ಯರ ನಿರಂತರ ಶ್ರಮ ಫಲಕೊಟ್ಟಿಲ್ಲ. ಅವರು ಇಂದು ಬೆಳಗ್ಗೆ 6-15 ಕ್ಕೆ ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ 9-30ಕ್ಕೆ ಕತ್ರಿಗುಪ್ಪೆಯ ಸಿರಿ ಸಂಪಿಗೆ ಮನೆಯಲ್ಲಿ ಮೃತರ ಅಂತಿಮ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸತ್ಯಭಾಮಾ ಅವರು ಪತಿ ಡಾ. ಚಂದ್ರಶೇಖರ್ ಕಂಬಾರ, ಒಬ್ಬ ಪುತ್ರ, ಮೂವರು ಪುತ್ರಿಯರು, ಮೊಮ್ಮಕ್ಕಳು, ಬಂಧು ಬಳಗ, ಆಪ್ತರನ್ನು ಅಗಲಿದ್ದಾರೆ. ಚಂದ್ರಶೇಖರ್ ಕಂಬಾರ್ ಅವರ ಜತೆ ಸತ್ಯಭಾಮಾ ಅವರ ವಿವಾಹ ನಿಶ್ಚಯವಾದಾಗ ಅವರು 7ನೇ ತರಗತಿ ಓದುತ್ತಿದ್ದರು. 1958ರಲ್ಲಿ ವಿವಾಹ ನಿಶ್ಚಯವಾಗಿ, 1964ರಲ್ಲಿ ವಿವಾಹ ಜರುಗಿತ್ತು. ಅತ್ಯಂತ ಸರಳವಾಗಿ ದೇವಾಲಯದಲ್ಲಿ ಇವರ ಮದುವೆ ಆಗಿತ್ತು.

ಸತ್ಯಭಾಮಾ ನಿಧನಕ್ಕೆ ಸಾರಸ್ವತ ಕ್ಷೇತ್ರದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಪತ್ನಿಯ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಚಂದ್ರಶೇಖರ ಕಂಬಾರರಿಗೆ ಕರುಣಿಸಲಿ ಎಂದು ಆಶಿಸಿದ್ದಾರೆ.

ಸಿಎಂ ಸಂತಾಪ:

ಡಾ. ಚಂದ್ರಶೇಖರ್ ಕಂಬಾರ ಅವರ ಧರ್ಮಪತ್ನಿ ಸತ್ಯಭಾಮ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸತ್ಯಭಾಮ ಅವರು ಚಂದ್ರಶೇಖರ ಕಂಬಾರ ಅವರ ಪ್ರೇರಣಾ ಶಕ್ತಿಯಾಗಿದ್ದರು. ಅವರಿಗೆ ಅಪಾರವಾದ ಓದಿನ ಹವ್ಯಾಸವಿತ್ತು. ಹೀಗಾಗಿ ಅವರು ಸಾಹಿತ್ಯ ಕ್ಷೇತ್ರದಲ್ಲಿನ ಬೆಳವಣಿಗೆ ಕುರಿತು ಆಸಕ್ತಿ ಹೊಂದಿದ್ದರು. ಸತ್ಯಭಾಮ ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕಂಬಾರ ಕುಟುಂಬದ ಸದಸ್ಯರಿಗೆ ನೀಡಲಿ ಎಂದು ಕೋರುತ್ತೇನೆ ಎಂದು ಸಿಎಂ ಕಂಬನಿ ಮಿಡಿದಿದ್ದಾರೆ.

Last Updated : Jan 18, 2022, 11:49 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.