ETV Bharat / city

ಬೆಂಗಳೂರಲ್ಲಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿಕಲಚೇತನ ವ್ಯಕ್ತಿ ಹೃದಯಘಾತದಿಂದ ಸಾವು - physically challenged man died of heart attack,

ಸಾರಿಗೆ ಇಲಾಖೆ ಸಿಬ್ಬಂದಿಯ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿಕಲಚೇತನ ವ್ಯಕ್ತಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

A Man died form heart attack in BMTC bus stand
ಬಿಎಂಟಿಸಿ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿಶೇಷಚೇತನ ವ್ಯಕ್ತಿ ಹೃದಯಘಾತದಿಂದ ಸಾವು
author img

By

Published : Apr 7, 2021, 10:10 AM IST

ಬೆಂಗಳೂರು: ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿಕಲಚೇತನ ವ್ಯಕ್ತಿವೋರ್ವರು ಹೃದಯಘಾತದಿಂದ ಸಾವನ್ನಪ್ಪಿದ್ದು, ಮೃತನ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮೃತನನ್ನು ಆನೇಕಲ್​​ನ ಚಿಕ್ಕನಹಳ್ಳಿ ನಿವಾಸಿ ಚೆನ್ನಪ್ಪ ಎಂದು ಗುರುತಿಸಲಾಗಿದೆ. ಜಿಗಣಿಯಿಂದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ಚೆನ್ನಪ್ಪ, ತನಗೆ ಸುಸ್ತಾಗಿರುವುದಾಗಿ ಬಿಎಂಟಿಸಿ ಸಿಬ್ಬಂದಿಗೆ ತಿಳಿಸಿದ್ದರು. ಬಳಿಕ ಸಿಬ್ಬಂದಿ ಅವರಿಗೆ ಟೀ ಕೊಡಿಸಿ ನಿಲ್ದಾಣದಲ್ಲೇ ಕೂರಿಸಿದ್ದರು. ಕೆಲ ಹೊತ್ತಿನ ಬಳಿಕ ಆ ವ್ಯಕ್ತಿ ಹೃದಯಘಾತದಿಂದ ಕೂತಲ್ಲೇ ಕುಸಿದು ಸಾವನ್ನಪ್ಪಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಮೃತನ ವ್ಯಕ್ತಿಯ ಅಳಿಯನಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ.‌ ಸದ್ಯ, ಚಿರಶಾಂತಿ ವಾಹನದಲ್ಲಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯರು ಮೊದಲು ಕೋವಿಡ್ ಟೆಸ್ಟ್​ ನಂತರ ಶವಪರೀಕ್ಷೆ ನಡೆಸಲಿದ್ದಾರೆ.

ಓದಿ: ಕೊರೊನಾ ನೆಗೆಟಿವ್‌ ವರದಿಗೂ ಮುನ್ನವೇ ಆಸ್ಪತ್ರೆಯಿಂದ ರಮೇಶ್ ಜಾರಕಿಹೊಳಿ ಡಿಸ್ಚಾರ್ಜ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.