ETV Bharat / city

ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಭದ್ರತೆ: ಹೊರಗಿನಿಂದಲೇ ಅಭಿಮಾನಿಗಳಿಂದ ಅಂತಿಮ ನಮನ - puneet rajkumar funeral

ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ದಿ.ಡಾ.ರಾಜ್ ಕುಮಾರ್‌ ಅವರ ಸ್ಮಾರಕದ ಬಳಿ ಪುನೀತ್​ ರಾಜ್​ಕುಮಾರ್​​ ಅಂತಿಮ ವಿಧಿವಿಧಾನಗಳನ್ನು ಈಡಿಗ ಸಂಪ್ರದಾಯದಂತೆ ನೆರವೇರಿಸಲಾಗಿದೆ.

people tribute to puneet rajkumar
ಪುನೀತ್ ರಾಜ್​​ಕುಮಾರ್​​ಗೆ ಅಂತಿಮ ನಮನ
author img

By

Published : Oct 31, 2021, 8:32 AM IST

Updated : Oct 31, 2021, 9:20 AM IST

ಬೆಂಗಳೂರು: ನಟ ಪುನೀತ್ ರಾಜ್​​ಕುಮಾರ್ ಅಂತ್ಯಸಂಸ್ಕಾರ ವಿಧಿವಿಧಾನಗಳೊಂದಿಗೆ ನೆರವೇರಿತು. ಅಂತಿಮ ಸಂಸ್ಕಾರ ವೀಕ್ಷಣೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಕಂಠೀರವ ಸ್ಟುಡಿಯೋ ಬಳಿ ಆಗಮಿಸಿದ್ದು, ಜನರು ಒಳನುಗ್ಗದಂತೆ ತಡೆಯಲು ಪೊಲೀಸ್ ಬಿಗಿಭದ್ರತೆ ನಿಯೋಜಿಸಲಾಗಿತ್ತು.

ರಾಜ್ ಸ್ಮಾರಕದ ಬಳಿ ಪೊಲೀಸ್ ಪಡೆ, ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಆರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಂತ್ಯಸಂಸ್ಕಾರ ವೀಕ್ಷಣೆಗೆ ಬಂದ ಅಭಿಮಾನಿಗಳಿಗಾಗಿ ಕಂಠೀರವ ಸ್ಟುಡಿಯೋ ಹೊರಭಾಗದಲ್ಲಿ ದೊಡ್ಡ ಎಲ್ಇಡಿ ಪರದೆ ವ್ಯವಸ್ಥೆ ಕಲ್ಪಿಸಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಅಭಿಮಾನಿಗಳಿಂದ ಅಂತಿಮ ನಮನ

ಹೊರಗಿನಿಂದಲೇ ಅಪ್ಪು ಅಭಿಮಾನಿಗಳು ಅಂತ್ಯ ಸಂಸ್ಕಾರದ ದೃಶ್ಯ ವೀಕ್ಷಿಸಿದರು. ಕಂಠೀರವ ಸ್ಟುಡಿಯೋ ಎದುರಿನ ಮನೆಗಳು, ಕಟ್ಟಡ ತುಂಬೆಲ್ಲ ಜನರು ನೆರೆದು ಅಪ್ಪು ನೆನೆದು ಘೋಷಣೆಗಳನ್ನು ಕೂಗುತ್ತಿದ್ದರು.

ಪುನೀತ್ ಅಂತಿಮ ವಿಧಿವಿಧಾನ ಹಿನ್ನೆಲೆ, ರಿಂಗ್ ರಸ್ತೆಯ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಹೊರಗಿನಿಂದಲೇ ಅಪ್ಪುವಿಗೆ ಜನರು ನಮನ ಸಲ್ಲಿಸಿದರು. ಕೆಲವೇ ಕೆಲವು ಗಣ್ಯರು, ಕುಟುಂಬಸ್ಥರನ್ನು ಹೊರತುಪಡಿಸಿ ಬೇರೆ ಯಾರಿಗೂ ಕಂಠೀರವ ಸ್ಟುಡಿಯೋ ಒಳಗೆ ಹೋಗಲು ಅನುಮತಿ ನೀಡಿಲ್ಲ. ವಾರ್ತಾ ಇಲಾಖೆಯಿಂದ ಪಾಸ್ ಪಡೆದ ಮಾಧ್ಯಮ ವರದಿಗಾರರು ಮತ್ತು ಕ್ಯಾಮರಾ ಪರ್ಸನ್ ಗಳನ್ನು ಮಾತ್ರ ಒಳಬಿಡಲಾಗಿತ್ತು.

ಗೊರಗುಂಟೆಪಾಳ್ಯ ಪ್ರವೇಶದ್ವಾರ ಹಾಗೂ ನಾಯಂಡಹಳ್ಳಿ ಪ್ರವೇಶದ್ವಾರಗಳನ್ನು ಸಂಪೂರ್ಣ ಬಂದ್ ಮಾಡಿ, ತುರ್ತು ವಾಹನಗಳನ್ನು ಹೊರತುಪಡಿಸಿ ಇತರೆ ಯಾವುದೇ ವಾಹನಗಳಿಗೆ ಪ್ರವೇಶ ದೊರೆತಿಲ್ಲ. ವಾಹನಗಳನ್ನು ತಡೆದು ಅನಿವಾರ್ಯ ಇರುವವರನ್ನು ಮಾತ್ರ ಒಳಗೆ ಬಿಡಲಾಗಿದ್ದು, 5:00 ನಂತರ ಯಾವುದೇ ವಾಹನಗಳನ್ನು ಹೊರವರ್ತುಲ ರಸ್ತೆಯಲ್ಲಿ ಬಿಟ್ಟಿಲ್ಲ. ಅಂತ್ಯಸಂಸ್ಕಾರ ಮುಗಿದಿದ್ದು, ಕೆಲ ಹೊತ್ತಿನಲ್ಲೇ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ.

ಬಿಗಿ ಪೊಲೀಸ್ ಭದ್ರತೆ - ಅಭಿಮಾನಿಗಳಿಂದ ಅಂತಿಮ ನಮನ

ಅಂತ್ಯಕ್ರಿಯೆಯಲ್ಲಿ ಕೇವಲ ಕುಟುಂಬದ ಸದಸ್ಯರು ಹಾಗೂ ಬೆರಳೆಣಿಕೆಯಷ್ಟು ಗಣ್ಯರು ಮಾತ್ರ ಪಾಲ್ಗೊಂಡಿದ್ದು, ಮಾಧ್ಯಮಗಳ ಪ್ರವೇಶವನ್ನು ಸಹ ಸಾಕಷ್ಟು ಕಡೆ ನಿರ್ಬಂಧಿಸಲಾಗಿದೆ. ಅಂತಿಮಯಾತ್ರೆಯ ಜೊತೆ ಆಗಮಿಸಿದ ಮಾಧ್ಯಮ ಪ್ರತಿನಿಧಿಗಳನ್ನು ಹೊರತುಪಡಿಸಿ, ಇತರರನ್ನು ಒಳಗೆ ಬಿಟ್ಟಿಲ್ಲ. ಮುಖ್ಯರಸ್ತೆ ಮಾತ್ರವಲ್ಲದೇ ವಿವಿಧ ಮಾರ್ಗಗಳಿಂದ ಹೊರ ವರ್ತುಲ ರಸ್ತೆಯನ್ನು ಸಂಪರ್ಕಿಸುವ ಕಿರು ರಸ್ತೆಗಳನ್ನು ಸಹ ಬಂದು ಮಾಡಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಇದನ್ನೂ ಓದಿ: ಭೂತಾಯಿಯ ಮಡಿಲು ಸೇರಿದ ಭಾಗ್ಯವಂತ: ಮತ್ತೆ ಹುಟ್ಟಿ ಬನ್ನಿ ಅಪ್ಪು

Last Updated : Oct 31, 2021, 9:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.