ಬೆಂಗಳೂರು : ಇನ್ನೇನು ಲಾಕ್‌ಡೌನ್ ಅವಧಿ ಮುಗಿಯಲು 6 ದಿನಗಳು ಬಾಕಿರುವ ಹಿನ್ನೆಲೆ ಮತ್ತೆ ಸಿಲಿಕಾನ್ ಸಿಟಿಯತ್ತ ಜನರು ಮುಖ ಮಾಡುತ್ತಿದ್ದಾರೆ.
ಲಾಕ್‌ಡೌನ್ ಆದಾಗ ತಮ್ಮ-ತಮ್ಮ ಊರುಗಳಿಗೆ ತೆರಳಿದ್ದ ಜನರು ಜೂನ್ ಏಳಕ್ಕೆ ಲಾಕ್‌ಡೌನ್ ತೆರವುಗೊಳಿಸಬಹುದು ಎಂದು ಊಹಿಸಿ ಮತ್ತೆ ಬೆಂಗಳೂರು ಕಡೆ ವಲಸೆ ಬರುತ್ತಿದ್ದಾರೆ.
ಬೆಂಗಳೂರು ಹೊರವಲಯ ಎಂಟನೇ ಮೈಲಿ, ಜಾಲಹಳ್ಳಿ ಕ್ರಾಸ್ ಬಳಿ ಜನರು ತಮ್ಮ ದ್ವಿಚಕ್ರ ವಾಹನ, ಕಾರುಗಳಲ್ಲಿ ಲಗೇಜ್ ಸಮೇತ ವಾಪಸ್ ಬರುತ್ತಿರುವ ಹಿನ್ನೆಲೆ ವಾಹನ ದಟ್ಟನೆ ಹೆಚ್ಚಾಗಿದೆ.
ಒಂದೆಡೆ ಬೆಂಗಳೂರಿನಿಂದ ಹೊರಹೋಗುವ ರಸ್ತೆಗಳು ಖಾಲಿಯಾಗಿದ್ದರೆ, ಬೆಂಗಳೂರಿಗೆ ಒಳಬರುವ ರಸ್ತೆಗಳು ಕಿಲೋ ಮೀಟರ್ ಗಟ್ಟಲೆ ವಾಹನಗಳಿಂದ ಕಂಪ್ಲೀಟ್ ಜಾಮ್ ಆಗಿವೆ.
ಇದನ್ನೂ ಓದಿ: ಮಾಸ್ಕ್ ವಿಚಾರಕ್ಕೆ ಯುವತಿ ಮೇಲೆ ಹಲ್ಲೆ.. ಬೀದಿ ರಂಪ ಮಾಡಿ ಪೊಲೀಸರ ಅತಿಥಿಯಾದ ಯುವತಿ