ETV Bharat / city

ಜೈಲಿನೊಳಗಿನ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ರೆ ಶಿಕ್ಷೆ ಅವಧಿ ಕಡಿತ : ಕೈದಿಗಳಿಗೆ ಗೃಹ ಸಚಿವರ ಬಿಗ್​ ಆಫರ್​

ಜೈಲಿನೊಳಗೆ ಅಕ್ರಮ ನಡೆಯುತ್ತಿರುವ ಬಗ್ಗೆ ಕೈದಿಗಳು ಮಾಹಿತಿ ನೀಡಿದರೆ ಅಂತಹವರಿಗೆ ಶಿಕ್ಷೆ ಕಡಿಮೆ ಮಾಡಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Parappana Agrahara
ಗೃಹಸಚಿವ ಆರಗ ಜ್ಞಾನೇಂದ್ರ
author img

By

Published : Jul 12, 2022, 6:09 PM IST

ಬೆಂಗಳೂರು : ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರ ಕಾರಾಗೃಹದಲ್ಲಿ ಕೈದಿಗಳಷ್ಟೇ ಅಲ್ಲ, ಅಧಿಕಾರಿಗಳೂ ಭ್ರಷ್ಟಾಚಾರದಲ್ಲಿ ತೊಡಗಿರುವ ಮಾಹಿತಿ ಇದೆ. ವರದಿಗಾಗಿ ಕಾಯುತ್ತಿದ್ದೇವೆ. ಜೈಲಿನೊಳಗಿನ ಅಕ್ರಮಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದರೆ ಅಂತಹ ಕೈದಿಗಳ ಹೆಸರನ್ನು ಗೌಪ್ಯವಾಗಿರಿಸಿ ಅವರ ಶಿಕ್ಷೆ ತಪ್ಪಿಸುವ ಭರವಸೆಯನ್ನು ಗೃಹಸಚಿವರು ಈ ವೇಳೆ ನೀಡಿದರು.

ಪರಪ್ಪನ ಅಗ್ರಹಾರ ಜೈಲಿನೊಳಗೆ ತಪಾಸಣೆ ಮಾಡಲಾಗಿದೆ. ಮುರುಗನ್ ಸಮಿತಿಯ ವರದಿ ಮೇಲೆ ಸಾಕಷ್ಟು ಜನರನ್ನು ವರ್ಗಾಯಿಸಲಾಗಿದೆ. ಡಿಐಜಿ ಸಹಿತ 25 ಜನರನ್ನು ವರ್ಗಾವಣೆ ಮಾಡಿದ್ದೇವೆ. ಮುರುಗನ್ ವರದಿಯಲ್ಲಿ ಹೆಸರಿದ್ದವರನ್ನು ಅಮಾನತು ಮಾಡಿದ್ದೇವೆ. 15 ಮಂದಿ ಜೈಲಿನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. 3800 ವಿಚಾರಾದೀನ ಕೈದಿ, 1100 ಸಜಾ ಕೈದಿಗಳು ಜೈಲಲ್ಲಿದ್ದಾರೆ. ಯಾವುದೇ ಕೈದಿಗಳ ಬಳಿ ಮಾದಕ ವಸ್ತು ಫೋನ್ ಸಿಕ್ಕಿದರೆ ನೇರವಾಗಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಗೃಹಸಚಿವರು ಎಚ್ಚರಿಕೆ ನೀಡಿದರು.

ಪರಪ್ಪನ ಅಗ್ರಹಾರದ ಜೈಲಿನೊಳಗಡೆಯ ಅಕ್ರಮ ಮಾಹಿತಿ ನೀಡಿದರೆ ಶಿಕ್ಷೆ ಅವಧಿ ಕಡಿತ

ಸಹಾಯ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಎಫ್​ಐಆರ್ ಮಾಡಿ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ. ಹರ್ಷ ಕೊಲೆ ಅಪರಾಧಿಗಳು ಗಮ್ಮತ್ತಲ್ಲಿದ್ರು, ಮೊಬೈಲ್ ಫೋನ್ ಬಳಸಿದ್ರು ಎಂಬುದರ ಕುರಿತು ತನಿಖೆ ನಡೆಸಲಾಗ್ತಿದೆ. ಟೆಲಿಫೋನ್ ಕಾಲ್​ಗಳಿಗೆ ಸಂಬಂಧಿಸಿದಂತೆ ಯಾರ್ಯಾರು ಮಾತಾಡಿದ್ದಾರೆ ಅನ್ನೋದರ ವರದಿ ಬರಬೇಕಿದೆ. ಸರ್ಕಾರಕ್ಕೆ ಮುಜುಗರವಾಗುವಂತ ಯಾವುದೇ ಘಟನೆ ನಡೆದ್ರು ಯಾರಿಗೂ ಕರುಣೆ ತೋರಿಸುವ ಮಾತಿಲ್ಲವೆಂದು ಖಡಕ್ ಎಚ್ಚರಿಕೆ ನೀಡಿದರು.

ಜೈಲಿನೊಳಗಿನ ಅಕ್ರಮ ನಡೆಯುತ್ತಿರುವ ಬಗ್ಗೆ ಕೈದಿಗಳು ಮಾಹಿತಿ ನೀಡಿದರೆ, ಅವರಿಗೆ ಶಿಕ್ಷೆ ಕಡಿಮೆ ಮಾಡಲಾಗುವುದು. ಸಿಬ್ಬಂದಿ ಹಿಡಿದುಕೊಟ್ಟರೆ ಅವರಿಗೆ 2000 ಬಹುಮಾನ ಕೊಡಲಾಗುತ್ತೆ ಎಂದು ಹೇಳಿದರು.

ಇದನ್ನೂ ಓದಿ: 52 ನಿಗಮ ಮಂಡಳಿ ಅಧ್ಯಕ್ಷರ ನಾಮ ನಿರ್ದೇಶನ ರದ್ದು: ಬಿಎಸ್​ವೈ, ವಿಜಯೇಂದ್ರ ಆಪ್ತರಿಗೆ ಶಾಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.