ETV Bharat / city

ಪಾದರಾಯನಪುರ ಪ್ರಕರಣ: ಹೈದರಾಬಾದ್​ಗೆ ಎಸ್ಕೇಪ್​ ಆದ್ನಾ ಮಾಸ್ಟರ್​ ಮೈಂಡ್​ ಇರ್ಫಾನ್​?

ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಹುತೇಕ ಆರೋಪಿಗಳನ್ನ ಬಂಧಿಸಿದ್ದಾರೆ. ಆದರೆ ಪ್ರಕರಣದ ಮಾಸ್ಟರ್ ಮೈಂಡ್ ಇರ್ಫಾನ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪಾದರಾಯನಪುರ ಹಲ್ಲೆ ಪ್ರಕರಣ
ಪಾದರಾಯನಪುರ ಹಲ್ಲೆ ಪ್ರಕರಣ
author img

By

Published : Apr 26, 2020, 6:15 PM IST

ಬೆಂಗಳೂರು: ಪಾದರಾಯನಪುರ ಬಳಿ ಬಿಬಿಎಂಪಿ ಹಾಗೂ ಆರೋಗ್ಯಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಘಟನೆ ನಡೆದು 8 ದಿನ ಕಳೆದರೂ ಮಾಸ್ಟರ್ ಮೈಂಡ್ ಇರ್ಫಾನ್ ಮಾತ್ರ ಇನ್ನೂ ಪತ್ತೆಯಾಗಿಲ್ಲ.

ಇರ್ಫಾನ್ ಗಲಾಟೆ ಮಾಡಿಸಿ ಸ್ಥಳೀಯ ಜನರನ್ನು ರೊಚ್ಚಿಗೆಬಿಸಿ ಸ್ಥಳದಿಂದ ಕಾಲ್ಕಿತ್ತಿದ್ದ ಎನ್ನಲಾಗಿತ್ತು. ಸದ್ಯಕ್ಕೆ ಈ ಕುರಿತು ಸಿಸಿಬಿ ಹಾಗೂ ಪಶ್ಚಿಮ ವಿಭಾಗದ ಪೊಲೀಸರು ತನಿಖೆ ನಡೆಸಿದ್ದಾರೆ. ಪೊಲೀಸರಿಗೆ, ಆರೋಪಿ ಗಲಭೆ ನಡೆದ ನಂತರ ಹೈದರಾಬಾದ್​ಗೆ ಎಸ್ಕೇಪ್ ಆಗಿರಬಹುದಾ ಅಥವಾ ಮೈಸೂರಿನಲ್ಲಿಯೇ ಇದ್ದಾನಾ ಎಂಬ ಶಂಕೆ ಮೇರೆಗೆ ಮೈಸೂರು ಮತ್ತು ಹೈದರಾಬಾದ್ ಭಾಗದಲ್ಲಿ ಇರ್ಫಾನ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇನ್ನು ಆರೋಪಿ ಇರ್ಫಾನ್ ಓವೈಸಿ ಸಂಘಟನೆಯಲ್ಲಿ ಗುರಿತಿಸಿಕೊಂಡಿದ್ದ. ಹೀಗಾಗಿ ಈತನಿಗೆ ಸಂಂಘಟನೆಯವರು ಸಹಾಯ ಮಾಡಿರುವ ಗುಮಾನಿ ಕೂಡ ಇದೆ. ಈ ಹಿನ್ನೆಲೆ ಪೊಲೀಸರು ಓವೈಸಿ ಸಂಘಟನೆಯಲ್ಲಿದ್ದವರನ್ನು ವಿಚಾರಣೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.