ಬೆಂಗಳೂರು: ಏಕಕಾಲದಲ್ಲಿ ದ್ವಿತೀಯ ಪಿಯು ಅರ್ಧವಾರ್ಷಿಕ ಪರೀಕ್ಷೆ(2nd PU Mid term Exam)ಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಪರೀಕ್ಷೆ ಮುಂದೂಡುವ ಚಿಂತನೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ (Department of Pre University Education) ಇತ್ತು. ಅದರಂತೆ, ಪಿಯು ಮಂಡಳಿ(PU Board)ಯು ಅರ್ಧವಾರ್ಷಿಕ ಪರೀಕ್ಷೆಗಳನ್ನು ಮುಂದೂಡಿದ್ದು, 13-12-2021 ರಿಂದ 24-12-2021ರವರೆಗೆ ಪರೀಕ್ಷೆ ನಡೆಯಲಿದೆ.
ಉತ್ತರ ಪತ್ರಿಕೆಯ ಮೌಲ್ಯಮಾಪನದ ಜವಾಬ್ದಾರಿಯನ್ನು ಕಾಲೇಜು ಪ್ರಾಂಶುಪಾಲರಿಗೆ ನೀಡಿದ್ದು, ಕಾಲೇಜುಗಳಲ್ಲಿ ಪಠ್ಯಕ್ರಮದ ಪೂರೈಕೆಯ ಕುರಿತು ಪ್ರಾಂಶುಪಾಲರಿಂದ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ.
ಬುಧವಾರ ನಡೆದ ಸಭೆಯ ತೀರ್ಮಾನದಂತೆ, ಆಯಾ ಕಾಲೇಜಿನ ಪ್ರಾಂಶುಪಾಲರು ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದೈನಂದಿನ ಹಾಜರಾತಿಯನ್ನು ಕಡ್ಡಾಯವಾಗಿ ಬೆಳಗ್ಗೆ 12 ಗಂಟೆ ಒಳಗಾಗಿ ಎಸ್.ಎಸ್.ಟಿ.ಎಸ್.ನಲ್ಲಿ ನಮೂದಿಸಬೇಕು. ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಘಟಕ ಪರೀಕ್ಷೆಗಳು ಹಾಗೂ ಅಸೈನ್‌ಮೆಂಟ್‌ಗಳ ಅಂಕಗಳನ್ನು ಎಸ್.ಎಸ್.ಟಿ.ಎಸ್.ನಲ್ಲಿ ನಮೂದಿಸುವಂತೆ ಸೂಚನೆ ನೀಡಲಾಗಿದೆ.
ಅರ್ಧವಾರ್ಷಿಕ ಪರೀಕ್ಷೆಗಳು 13-12-2021 ರಿಂದ 24-12-2021 ರವರೆಗೆ ಏಕ ಕಾಲಕ್ಕೆ ನಡೆಯಲಿವೆ. ತಮ್ಮ ತಮ್ಮ ಕಾಲೇಜಿನ ಹಂತದಲ್ಲಿ ಮೌಲ್ಯಮಾಪನ ಕಾರ್ಯವನ್ನು ಮಾಡಿ ಡಿಸೆಂಬರ್ 31ರ ಒಳಗಾಗಿ ಎಸ್.ಎ.ಟಿ.ಎಸ್ ಪೋರ್ಟ್ಲ್ನಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಲು ಪ್ರಾಂಶುಪಾಲರಿಗೆ ಸೂಚಿಸಿದೆ.
ಇದನ್ನೂ ಓದಿ: 2ಎ ಮೀಸಲಾತಿ ನೀಡದಿದ್ದರೆ ಸಿಎಂ ಬೊಮ್ಮಾಯಿ ಕೂಡ ಅಧಿಕಾರ ಕಳೆದುಕೊಳ್ತಾರೆ: ಕಾಶಪ್ಪನವರ್ ಭವಿಷ್ಯ
ಇನ್ನು ಮಧ್ಯಂತರ ಪರೀಕ್ಷೆಗೆ ಸಂಬಂಧಿಸಿದಂತೆ ಇಲಾಖೆ ನಿಗದಿಪಡಿಸಿದ ಎಲ್ಲ ಪಠ್ಯಕ್ರಮಗಳನ್ನು ಪೂರ್ಣಗೊಳಿಸಲು ಹಾಗೂ ಪೂರ್ಣಗೊಂಡ ಬಗ್ಗೆ ಇಲಾಖೆಗೆ ವರದಿ ನೀಡಲು ಸೂಚನೆ ನೀಡಲಾಗಿದೆ. ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಇನ್ನು ಮುಂದೆ ಕಡ್ಡಾಯವಾಗಿ ಇ-ಆಫೀಸ್‌ನಲ್ಲಿಯೇ ಎಲ್ಲ ಕರ್ತವ್ಯಗಳನ್ನು ನಿರ್ವಹಿಸಲು ತಿಳಿಸಲಾಗಿದೆ. ವಿಜ್ಞಾನ ವಿಭಾಗದ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಭೌತಶಾಸ್ತ್ರ ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕಾಲೇಜಿನ ಅವಧಿ ನಂತರ ಹೆಚ್ಚುವರಿಯಾಗಿ ಒಂದು ಗಂಟೆ ಭೋದನೆ ಮಾಡಲು ತಿಳಿಸಿದೆ.