ETV Bharat / city

ರಾಜ್ಯದೆಲ್ಲೆಡೆ 2 ಲಕ್ಷಕ್ಕೂ ಹೆಚ್ಚು ಟ್ರಾನ್ಸ್‌​ಫಾರ್ಮರ್ ದುರಸ್ತಿ: ಸಚಿವ ಸುನೀಲ್ ಕುಮಾರ್ - Transformer Repair

ಮೇ.5 ರಿಂದ 20ರವರೆಗೆ ನಡೆದ ಟ್ರಾನ್ಸ್‌​ಫಾರ್ಮರ್ ನಿರ್ವಹಣಾ ಅಭಿಯಾನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಟ್ರಾನ್ಸ್​ಫಾರ್ಮರ್‌ಗಳನ್ನು ದುರಸ್ತಿ ಮಾಡಲಾಗಿದೆ ಎಂದು ಇಂಧನ ಸಚಿವರು ಮಾಹಿತಿ ನೀಡಿದ್ದಾರೆ.

Minister Sunil Kumar
ಸಚಿವ ಸುನೀಲ್ ಕುಮಾರ್
author img

By

Published : May 22, 2022, 8:45 AM IST

ಬೆಂಗಳೂರು: ರಾಜ್ಯಾದ್ಯಂತ ಮೇ.5 ರಿಂದ 20ರವರೆಗೆ ನಡೆದ ಟ್ರಾನ್ಸ್‌ಫಾರ್ಮರ್ ನಿರ್ವಹಣಾ ಅಭಿಯಾನದಲ್ಲಿ ಒಟ್ಟು 2,03,438 ಟ್ರಾನ್ಸ್‌​ಫಾರ್ಮರ್‌ಗಳನ್ನು ದುರಸ್ತಿ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯ- 10,794, ಸೆಸ್ಕಾಂ- 16,170, ಮೆಸ್ಕಾಂ- 73,012, ಜೆಸ್ಕಾಂ- 32,112, ಹೆಸ್ಕಾಂ- 71,350 ಟ್ರಾನ್ಸ್‌​​ಫಾರ್ಮರ್​ಗಳನ್ನು ನಿರ್ವಹಣೆ ನಡೆದಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಹದಿನೈದು ವರ್ಷಕ್ಕಿಂತ ಹಳೆಯ ಟ್ರಾನ್ಸ್‌ಫಾರ್ಮರ್​ಗಳು ಸಾಕಷ್ಟು ಪ್ರಮಾಣದಲ್ಲಿವೆ. ಮಳೆಗಾಲದಲ್ಲಿ ಸಿಡಿಲು ಬಡಿತ, ಅಧಿಕ ಲೋಡ್​ನಿಂದ ತೊಂದರೆಯಾಗುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಅಗತ್ಯವಿದ್ದೆಡೆ ರಿಪೇರಿ ಕೆಲಸ ಮಾಡುವಂತೆ ಎಲ್ಲ ಹಂತದ ಅಧಿಕಾರಿಗಳಿಗೂ ಸೂಚನೆ ನೀಡಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಜಯನಗರ ಜಿಲ್ಲೆಗೆ ತಕ್ಷಣ ಅಧಿಕಾರಿಗಳನ್ನು ನೇಮಿಸಿ: ಸಿಎಂ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.