ETV Bharat / city

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ: ಆಗಸ್ಟ್​​ 5ರವರೆಗೆ ಆರೆಂಜ್​ ಅಲರ್ಟ್​ - ಕರ್ನಾಟಕ ಮಳೆ ಸುದ್ದಿ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್​​ 5ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು ಆರೆಂಜ್​ ಅಲರ್ಟ್ ಘೋಷಿಸಲಾಗಿದೆ.

Orange Alert
ಆಗಸ್ಟ್​​ 5ರವರೆಗೆ ಆರೆಂಜ್​ ಅಲರ್ಟ್​
author img

By

Published : Aug 2, 2021, 10:24 AM IST

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್​​ 5ರವರೆಗೆ ಗುಡುಗುಸಹಿತ ವ್ಯಾಪಕ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಆರೆಂಜ್​ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಇಂದು ಸೇರಿದಂತೆ ಎರಡು ದಿನ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 29 ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ದಕ್ಷಿಣ ಒಳನಾಡಿನಲ್ಲಿ ಭಾನುವಾರ ನೈರುತ್ಯ ಮಾನ್ಸೂನ್ ಸಾಮಾನ್ಯವಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾನುವಾರ ದಕ್ಷಿಣ ಕನ್ನಡದ ಸುಬ್ರಮಣ್ಯದಲ್ಲಿ 7 ಸೆಂ.ಮೀ., ಶಿವಮೊಗ್ಗದ ತಾಳಗುಪ್ಪದಲ್ಲಿ 5 ಸೆಂ.ಮೀ., ಶೃಂಗೇರಿ, ಶಿವಮೊಗ್ಗದ ತುಮ್ರಿಯಲ್ಲಿ ತಲಾ 4 ಸೆಂ.ಮೀ., ಉತ್ತರ ಕನ್ನಡದ ಸಿದ್ದಾಪುರ, ಕೊಲ್ಲೂರು, ಉಡುಪಿಯ ಸಿದ್ದಾಪುರ, ಧರ್ಮಸ್ಥಳ, ಮಡಿಕೇರಿ, ಆಗುಂಬೆ, ಚಿಕ್ಕಮಗಳೂರಿನ ಜಯಪುರ, ಕೊಡಗಿನ ಸಂತಹಳ್ಳಿಯಲ್ಲಿ ತಲಾ 3 ಸೆಂ.ಮೀ., ಮೂಡುಬಿದ್ರೆ, ಕದ್ರಾ, ಮಂಚಿಕೆರೆ, ಕಾರ್ಕಳ, ಸೋಮವಾರಪೇಟೆ, ದಾವಣಗೆರೆಯ ತೆಲಿಗಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಉಳಿದಂತೆ ಕುಂದಾಪುರ, ಸುಳ್ಯ, ಮುಲ್ಕಿ, ಉಪ್ಪಿನಂಗಡಿ, ಪುತ್ತೂರು, ಉತ್ತರ ಕನ್ನಡದ ಜನ್ಮನೆ, ಜಗಲಬೆಟ್, ಭಟ್ಕಳ, ಬಾಸಗೋಡ್, ಬೇಲಿಕೇರಿ, ಹಲಿಯಾಳ, ಶಿರಾಲಿ, ಹಾವೇರಿ, ಕೊಡಗಿನ ಭಾಗಮಂಡಲ, ಸುಂಟಿಕೊಪ್ಪ, ಹಾರಂಗಿ, ಕುಶಾಲನಗರ, ಕೊಟ್ಟಿಗೆಹಾರ, ರಾಯಲಪಾಡು, ಗೌರಿಬಿದನೂರಿನಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಇದನ್ನೂ ಓದಿ: ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಸಿದ್ದರಾಮಯ್ಯ ವಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.