ETV Bharat / city

ರೈತರ ಪರ ಹೋರಾಟದ ಕಣಕ್ಕಿಳಿಯುವಂತೆ ಚಿತ್ರರಂಗ, ಸಾಹಿತಿಗಳನ್ನು ಆಹ್ವಾನಿಸಿದ ಸಿದ್ದರಾಮಯ್ಯ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಇಲ್ಲವೇ ರಾಜಕೀಯ ಪಕ್ಷಗಳದ್ದಲ್ಲ. ಈ ಮಣ್ಣಿನ ಎಲ್ಲ ಸಾಹಿತಿಗಳು, ಕಲಾವಿದರು, ವಿಶೇಷವಾಗಿ ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು.‌ ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

opposition-leader-siddaramaiah-tweet-about-farmers-protest
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Feb 4, 2021, 2:04 PM IST

ಬೆಂಗಳೂರು: ರೈತರ ಹೋರಾಟದ ಪರವಾಗಿ ದನಿ ಎತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು, ಆಗಲೇ‌ ಅದಕ್ಕೆ ಬೆಲೆ ಎಂದು ಹೇಳಿದ್ದಾರೆ.

  • ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಇಲ್ಲವೇ ರಾಜಕೀಯ ಪಕ್ಷಗಳದ್ದಲ್ಲ.

    ಈ ಮಣ್ಣಿನ ಎಲ್ಲ ಸಾಹಿತಿಗಳು,
    ಕಲಾವಿದರು
    ವಿಶೇಷವಾಗಿ
    ಸಿನೆಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು.‌

    ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ?#FarmersProtest

    — Siddaramaiah (@siddaramaiah) February 4, 2021 " class="align-text-top noRightClick twitterSection" data=" ">

ಟ್ವೀಟ್ ಮೂಲಕ ಈ ಕರೆ ಕೊಟ್ಟಿರುವ ಅವರು, ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟ ಕೇವಲ ರೈತ ಸಂಘಟನೆಗಳು ಇಲ್ಲವೇ ರಾಜಕೀಯ ಪಕ್ಷಗಳದ್ದಲ್ಲ. ಈ ಮಣ್ಣಿನ ಎಲ್ಲ ಸಾಹಿತಿಗಳು, ಕಲಾವಿದರು, ವಿಶೇಷವಾಗಿ ಸಿನಿಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು.‌ ನಾವೆಲ್ಲರೂ ರೈತರು ಬೆಳೆದ ಅನ್ನ ತಿನ್ನುವವರಲ್ಲವೇ? ಎಂದು ಎಚ್ಚರಿಸಿದ್ದಾರೆ.

ರೈತರ ಹೋರಾಟವನ್ನು ನಿರಂತರವಾಗಿ ಬೆಂಬಲಿಸುತ್ತಾ ಬಂದಿರುವ ಸಿದ್ದರಾಮಯ್ಯ, ಇದೀಗ ಟ್ವೀಟ್ ಮೂಲಕ‌ ಎಲ್ಲರೂ ರೈತ ಪರ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ವಿವಿಧ ರಾಜ್ಯಗಳ ಸಮುದಾಯಗಳು, ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಕೂಡ ಈ ಹೋರಾಟಕ್ಕೆ ರಾಜ್ಯದಿಂದ ಬೆಂಬಲ ಸಿಗಬೇಕು ಎಂದು ಆಶಿಸಿದ್ದಾರೆ.

ಅಲ್ಲದೆ, ಅತ್ಯಂತ ಪ್ರಮುಖವಾಗಿ ಹಿಂದೆ ಚಿತ್ರರಂಗ ನಡೆಸಿದ ಹೋರಾಟಕ್ಕೆ ರೈತ ಸಮುದಾಯಗಳು ಸಂಘಟನೆಗಳು ಕೂಡ ಬೆಂಬಲಿಸಿದ್ದವು. ಇದೀಗ ಸಂಕಷ್ಟದಲ್ಲಿರುವ ರೈತರ ಹೋರಾಟಕ್ಕೆ ಕೈಜೋಡಿಸುವಂತೆ ಸಿದ್ದರಾಮಯ್ಯ ಅವರು ಚಿತ್ರರಂಗ, ಸಾಹಿತ್ಯ ಹಾಗೂ ಉಳಿದ ರಂಗಗಳನ್ನು ಹೋರಾಟಕ್ಕೆ ಬೆಂಬಲಿಸುವಂತೆ ಆಹ್ವಾನಿಸಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮಿತಿ ವಿವಿಧ ಜಿಲ್ಲಾಧ್ಯಕ್ಷರಿಂದ ಸಿದ್ದರಾಮಯ್ಯ ಭೇಟಿ:

ಪ್ರದೇಶ ಕಾಂಗ್ರೆಸ್ ಸಮಿತಿಯ ವಿವಿಧ ಜಿಲ್ಲೆಗಳ ಅಧ್ಯಕ್ಷರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

opposition-leader-siddaramaiah-tweet-about-farmers-protest
ಪ್ರದೇಶ ಕಾಂಗ್ರೆಸ್ ಸಮಿತಿ ವಿವಿಧ ಜಿಲ್ಲಾಧ್ಯಕ್ಷರಿಂದ ಸಿದ್ದರಾಮಯ್ಯ ಭೇಟಿ

ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿಂದು ಭೇಟಿ ಮಾಡಿದ ವಿವಿಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಸರ್ಕಾರದಿಂದ ಅನುದಾನ ಬಿಡುಗಡೆಯಲ್ಲಿ ಆಗುತ್ತಿರುವ ತಾರತಮ್ಯ, ಕಾಂಗ್ರೆಸ್ ಶಾಸಕರು ಹೆಚ್ಚಿರುವ ಜಿಲ್ಲೆಗಳನ್ನು ನಿರ್ಲಕ್ಷಿಸುತ್ತಿರುವ, ಬಿಜೆಪಿ ಪ್ರಬಲವಾಗಿರುವ ಕಡೆ ಪಕ್ಷದ ಮುಖಂಡರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅನಗತ್ಯವಾಗಿ ದಾಖಲಾಗುತ್ತಿರುವ ಪ್ರಕರಣಗಳು ಇತ್ಯಾದಿ ವಿಚಾರಗಳ ಕುರಿತು ಚರ್ಚಿಸಿದರು.

ಈ ಮೇಲಿನ ವಿಚಾರಗಳನ್ನು ತಾವು ಸರ್ಕಾರದ ಗಮನಕ್ಕೆ ತರಬೇಕು. ವಿಧಾನಮಂಡಲ ಅಧಿವೇಶನಕ್ಕಿಂತ ಉತ್ತಮ ವೇದಿಕೆ ಇನ್ನೊಂದು ಸಿಗಲಾರದು. ಈ ಹಿನ್ನೆಲೆ ಇರುವ ಎರಡು ದಿನಗಳಲ್ಲಿ ತಾವು ಹೆಚ್ಚಿನ ಕಾಲಾವಧಿ ಮಾತನಾಡಿ, ಜಿಲ್ಲಾ ವ್ಯಾಪ್ತಿಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಎದುರಾಗುತ್ತಿರುವ ಸಮಸ್ಯೆಯ ಕುರಿತು ಮಾತನಾಡಬೇಕು. ವಿಧಾನಸಭೆ ಮೂಲಕ ಜನರಿಗೆ ಆಗುತ್ತಿರುವ ನಿಜಾಂಶದ ವಿವರ ಸಿಗಬೇಕು ಎಂದು ಮನವಿ ಮಾಡಿದರು.

ಪಕ್ಷದ ಮುಖಂಡರಿಗೆ ಎದುರಾದ ಸಮಸ್ಯೆಯ ಬಗ್ಗೆ ನಮಗೂ ಆತಂಕವಿದೆ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲು ಪ್ರಯತ್ನಿಸುತ್ತೇನೆ. ಸಾಧ್ಯವಾಗದಿದ್ದರೆ, ಖುದ್ದು ಮುಖ್ಯಮಂತ್ರಿ ಅಥವಾ ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಈ ವಿಚಾರದಲ್ಲಿ ನಿಮಗೆ ಯಾವುದೇ ಆತಂಕ ಬೇಡ. ನೀವು ಸಾಧ್ಯವಾದಷ್ಟು ಪಕ್ಷ ಸಂಘಟನೆಗೆ ಒತ್ತು ಕೊಡಿ. ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವಂತೆ ಪ್ರಯತ್ನಿಸಿ ಎಂದರು.

ಪಕ್ಷ ದೊಡ್ಡದು. ಪಕ್ಷ ಉಳಿದರೆ ನಾವು ಉಳಿಯುತ್ತೇವೆ. ಪಕ್ಷವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದೆ. ಪಕ್ಷ ಸುಭದ್ರವಾಗಿದೆ ಎಂಬ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ನೀಡಿ. ಇದರ ಜೊತೆಗೆ ಸ್ಥಳೀಯವಾಗಿ ಸರ್ಕಾರದಿಂದ ಆಗಿರುವ ನಷ್ಟಗಳ ಕುರಿತು ಗಮನ ಸೆಳೆಯಿರಿ. ಹಂತಹಂತವಾಗಿ ಪಕ್ಷ ಬಲವರ್ಧನೆಯ ಜೊತೆಗೆ ಈ ಹಿಂದೆ ನಮ್ಮ ಸರ್ಕಾರ ನೀಡಿದ ಕೊಡುಗೆಗಳನ್ನು ಜನರಿಗೆ ಅರಿವಾಗುವಂತೆ ಮಾಡಿ. ಎರಡು ವರ್ಷದ ನಂತರ ನಾವು ಅಧಿಕಾರಕ್ಕೆ ಬಂದರೆ, ಇಂತಹ ದಬ್ಬಾಳಿಕೆಯನ್ನು ಸರಳವಾಗಿ ನಿಯಂತ್ರಿಸಬಹುದು. ಇದು ನಮಗೆ ಪರೀಕ್ಷೆ ಕಾಲವಾಗಿದ್ದು, ಒಂದಿಷ್ಟು ದಿನ ಸಹನೆಯಿಂದ ಇರಿ. ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಸಿದ್ದರಾಮಯ್ಯ ಜಿಲ್ಲಾ ಅಧ್ಯಕ್ಷರುಗಳಿಗೆ ಸಲಹೆಯನ್ನೂ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.