ಬೆಂಗಳೂರು: ಬಿಎಸಿ ಸಭೆಗೆ ಯಾವ ಸ್ವಾರ್ಥಕ್ಕೆ ಹೋಗಬೇಕು. ಅಲ್ಲಿ ಏನೂ ಇಂಪ್ಲಿಮೆಂಟ್ ಮಾಡಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ಕಾರ ಹೇಳಿದ ಹಾಗೆ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಒಂದು ದೇಶ, ಒಂದು ಚುನಾವಣೆ ಬಗ್ಗೆ ನೋಡೋಣ ಅಂತ ಹೇಳಿದ್ದೆವು. ಚರ್ಚೆ ಮಾಡೋಣ ಅಂತ ಎಲ್ಲೂ ಹೇಳಿಲ್ಲ. ನಾವು ಬಿಎಸಿ ಸಭೆಗೆ ಸದ್ಯಕ್ಕೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ: ತನಿಖೆಗೆ ರೇಣುಕಾಚಾರ್ಯ ಆಗ್ರಹ
ರಮೇಶ್ ಜಾರಕಿಹೊಳಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ರಮೇಶ್ ಜಾರಕಿಹೊಳಿಯವರನ್ನೇ ಕೇಳಿಕೊಳ್ಳಿ ಎಂದರು.