ETV Bharat / city

ಕೃಷಿ ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು ಕೃಷಿಕರಿಗೆ ಹತ್ತಿರವಾಗಬೇಕು.. ಕೃಷಿ ಸಚಿವ ಬಿ ಸಿ ಪಾಟೀಲ್ - ಕೃಷಿಗೆ ಸಂಬಂಧಿಸಿದ ಸುದ್ದಿ

ಲಾಕ್​ಡೌನ್ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಗಳತ್ತ ಮುಖಮಾಡದೇ ಹೋಗಿದ್ದರೆ ಮುಂದಿನ ದಿನಗಳಲ್ಲಿ ಅನ್ನವೇ ಸಿಗುತ್ತಿರಲಿಲ್ಲ. ತೀವ್ರ ಸಂಕಷ್ಟ ಎದುರಾಗುತ್ತಿತ್ತು.

Agriculture Minister B.C.Patil
ಕೃಷಿ ಸಚಿವ ಬಿ.ಸಿ.ಪಾಟೀಲ್
author img

By

Published : Jun 13, 2020, 2:29 PM IST

ಬೆಂಗಳೂರು : ಕೋವಿಡ್-19 ಸಂದರ್ಭದಲ್ಲಿಯೂ ಕೃಷಿ ವಿಶ್ವವಿದ್ಯಾಲಯಗಳು ಕೃಷಿಕನ ಕೈ ಹಿಡಿದಿವೆ. ಹೀಗಾಗಿ ಕೃಷಿ ಇಲಾಖೆ ಸಚಿವನಾಗಿರುವುದಕ್ಕೆ ಬಹಳ ಹೆಮ್ಮೆಯಾಗುತ್ತದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹರ್ಷ ವ್ಯಕ್ತಪಡಿಸಿದರು.

ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದು ವರ್ಚ್ಯುವಲ್ ಉಪನ್ಯಾಸ ಕೊಠಡಿಗಳನ್ನ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿಜ್ಞಾನಿಗಳು ಮತ್ತು ವಿಶ್ವವಿದ್ಯಾಲಯಗಳು ಕೃಷಿಕರಿಗೆ ಆದಷ್ಟು ಹತ್ತಿರವಾಗಿರಬೇಕು ಎಂದು ಸಲಹೆ ನೀಡಿದರು.

ಹೊಸ ಹೊಸ ಬೇಸಾಯ ಪದ್ಧತಿಗಳು, ಹವಾಮಾನಕ್ಕೆ ಅನುಸಾರ ಭೂಮಿಗೆ ಅನುನುಗುಣವಾಗಿ ಬೇಸಾಯ, ತಾಂತ್ರಿಕ ಬಳಕೆಗಳ ಬಗ್ಗೆ ಹೆಚ್ಚೆಚ್ಚು ಪ್ರಚುರಪಡಿಸಬೇಕು. ರೈತರು ಅಪ್ಪ ಹಾಕಿದ ಆಲದಮರವೆಂಬ ಮನಸ್ಥಿತಿಯಿಂದ ಹೊರಬಂದು ಕೃಷಿಯಲ್ಲಿ ನವೀನತೆ ಸಾಧಿಸಲು ಮುಂದಾಗಬೇಕು ಎಂದರು.

ಕೃಷಿ ಸಚಿವ ಬಿ ಸಿ ಪಾಟೀಲ್..

ಲಾಕ್​ಡೌನ್ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಗಳತ್ತ ಮುಖಮಾಡದೇ ಹೋಗಿದ್ದರೆ ಮುಂದಿನ ದಿನಗಳಲ್ಲಿ ಅನ್ನವೇ ಸಿಗುತ್ತಿರಲಿಲ್ಲ. ತೀವ್ರ ಸಂಕಷ್ಟ ಎದುರಾಗುತ್ತಿತ್ತು ಎಂದ ಅವರು, ಕಷ್ಟಗಳು ಎದುರಾದಾಗ ಕೃಷಿಯನ್ನು ಯಾವ ರೀತಿ ಸವಾಲಾಗಿ ಸ್ವೀಕರಿಸಬಹುದು ಎಂಬುದರ ಬಗ್ಗೆ ವಿಜ್ಞಾನಿಗಳು ಅಧ್ಯಯನಶೀಲರಾಗಬೇಕು ಎಂದರು.

ಬೇರೆ ಬೇರೆ ಉದ್ಯಮಗಳಲ್ಲಿ ಪ್ರಗತಿ ಸಾಧಿಸುವಂತೆ ನಮ್ಮ ರೈತರು ಸಹ ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರ ಪ್ರಗತಿ ಮಾಡಬೇಕು ಎಂಬ ಅಭಿಲಾಷೆ ನನ್ನದು. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಸಹ ವಿಶ್ವವಿದ್ಯಾಲಯದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.