ETV Bharat / city

ಹುಷಾರ್​.. ವರ್ಕ್​ ಫ್ರಂ ಹೋಮ್ ಹೆಸರಿನಲ್ಲಿ ಉದ್ಯೋಗಿಗಳಿಗೆ ​ವಂಚಿಸಿದ ಸೈಬರ್​ ಖದೀಮರು - bangaluru

ವರ್ಕ್​ ಫ್ರಂ ಹೋಮ್​ (Work from home system) ನೀಡುವುದಾಗಿ ಸೈಬರ್ ವಂಚಕರು (Cyber hackers fraud) ಹೊಸದಾಗಿ ಕೆಲಸ ಹುಡುಕುತ್ತಿರುವ ಯುವಕರನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದಾರೆ.

online fraud
ಆನ್​ಲೈನ್ ವಂಚನೆಗಿಳಿದ ಸೈಬರ್​ ಖದೀಮರು
author img

By

Published : Nov 15, 2021, 12:21 PM IST

ಬೆಂಗಳೂರು: ತಂತ್ರಜ್ಞಾನ ಎಷ್ಟೇ ಬೆಳೆದರೂ ಜನರು ಮೋಸ ಹೋಗುವುದು ಮಾತ್ರ ತಪ್ಪಿಲ್ಲ. ಸೈಬರ್​ ಅಪರಾಧಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ 'ವರ್ಕ್​ ಫ್ರಂ ಹೋಮ್​ ವಂಚನೆ ಜಾಲ'(Work from home fraud case) ಬೆಳಕಿಗೆ ಬಂದಿದೆ.

ಇದೇನಪ್ಪಾ ಅಂತೀರಾ..? ಕೊರೋನಾ ಲಾಕ್​ಡೌನ್​ನಿಂದ ವರ್ಕ್​ ಫ್ರಂ ಹೋಮ್​ ಪದ್ಧತಿ(Work from home system) ಹೆಚ್ಚಾಗಿ ಚಾಲ್ತಿಗೆ ಬಂತು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಹೊಸದಾಗಿ ಕೆಲಸ ಹುಡುಕುತ್ತಿರುವ ಯುವಕರನ್ನು ಟಾರ್ಗೆಟ್ ಮಾಡಿ ಉದ್ಯೋಗ ನೀಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದಾರೆ.

ಈ ಬಗ್ಗೆ ಆಗ್ನೇಯ ಹಾಗೂ ದಕ್ಷಿಣ ವಿಭಾಗದ ಸೈಬರ್ ಕ್ರೈಂ‌ ಪೊಲೀಸ್ ಠಾಣೆಗಳಲ್ಲಿ 2 ಪ್ರಕರಣಗಳು ದಾಖಲಾಗಿವೆ. ಪುನೀತ್ ಪೊನ್ನಪ್ಪ ಹಾಗೂ ಹರ್ಷವರ್ಧನ್​ ಎಂಬುವರು ಈ ಜಾಲದಿಂದ ಮೋಸ ಹೋದ ಬಗ್ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಎನ್‌ಸಿಬಿ ಕಾರ್ಯಾಚರಣೆ: ಬರೋಬ್ಬರಿ 1,500 ಕೆಜಿ ಗಾಂಜಾ ವಶ

ಕೆಲ ದಿನಗಳ ಹಿಂದೆ ಪುನೀತ್ ಪೊನ್ನಪ್ಪ ಎಂಬುವರಿಗೆ ಕರೆ ಮಾಡಿದ್ದ ವಂಚಕನೊಬ್ಬ ವರ್ಕ್​ ಫ್ರಂ ಹೋಮ್​ ಆಧಾರದ ಮೇಲೆ ಇ ಕಾಮರ್ಸ್ ಕಂಪನಿಯಿಂದ ರಿಚಾರ್ಜ್ ಕೆಲಸ ನೀಡುವುದಾಗಿ 5.54 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹರ್ಷವರ್ಧನ್ ಎಂಬುವರಿಗೆ ಅಮೇಜಾನ್​ನಿಂದ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ವಂಚಿಸಿದ್ದಾನೆ. ಈ ಪ್ರಕರಣಗಳ ಸಂಬಂಧ ಪೊಲೀಸರು ವಂಚಕರ ಬೆನ್ನಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.