ಬೆಂಗಳೂರು: ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸುವ ಆಸೆಯಿಂದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಈರಪ್ಪ ನಾಯಕ್ (31) ಹಣ ಕಳೆದುಕೊಂಡವರು. ಈ ಸಂಬಂಧ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈರಪ್ಪ ನಾಯ್ಕ್ ಅವರ ನಂಬರ್ ಅನ್ನು ಹೇಗೆ ಪಡೆದು, ಅ.11 ರಂದು ಬಿಟ್‌ಕಾಯಿನ್‌ಗೆ ಸಂಬಂಧಿಸಿದ ವಾಟ್ಸಾಪ್ ಗ್ರೂಪ್‌ವೊಂದಕ್ಕೆ ಸೇರಿಸಿದ್ದಾರೆ. ಆ ಗ್ರೂಪ್ ಮುಖಾಂತರ ಅನಲಿಸ್ಟಾ ವೆನೆಸ್ಸಾ ಎಂಬುವವರು ಪರಿಚಯ ಮಾಡಿಕೊಂಡಿದ್ದಾರೆ. ಅವರು ಬಿಟ್ ಕಾಯಿನ್ ಟ್ರಾಂಜಕ್ಷನ್ ಪ್ರೊಸೆಸ್ಅನ್ನು ಪರಿಚಯಿಸಿ ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ.
ನಂತರ ವೆನಿಸ್ಸಾ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುತ್ತದೆ ಎಂದು ಹೇಳಿ ಈರಪ್ಪನನ್ನು ನಂಬಿಸಿದ್ದಾರೆ. ಮೊದಲು ಈರಪ್ಪ ಅವರಿಂದ 3 ಲಕ್ಷ ರೂಗಳನ್ನು ಹೂಡಿಕೆ ಮಾಡಿಸಿದ್ದಾರೆ. ನೀವು ಹೂಡಿಕೆ ಮಾಡಿರುವ ಹಣದಿಂದ ನಿಮಗೆ ಅಧಿಕ ಲಾಭ ಬಂದಿದೆ. ಆದರೆ ಆ ಹಣವನ್ನು ನೀವು ವಾಪಸ್ ಪಡೆಯಲು ಹಲವಾರು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿ ಈರಪ್ಪ ನಾಯ್ಕ್ ಅವರ ಎಚ್‌ಡಿಎಫ್‌ಸಿ ಖಾತೆಯಿಂದ ಹಂತ ಹಂತವಾಗಿ 13,62,817 ರು.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಆದರೆ ಲಾಭದ ಹಣವನ್ನು ಹಾಗೂ ಅಸಲನ್ನು ಕೊಡದೇ ವಂಚನೆ ಮಾಡಿದ್ದಾರೆೆ ಎಂದು ಈರಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಯುವಕರ ನಡುವೆ ಜಗಳ: ಹಣಕ್ಕಾಗಿ ಬಿತ್ತು ಓರ್ವನ ಹೆಣ!