ETV Bharat / city

ಮ್ಯಾಟ್ರಿಮೋನಿಯಲ್ಲಿ ನಕಲಿ ಖಾತೆ.. ಮದುವೆಯಾಗುವುದಾಗಿ ಯುವತಿಯರಿಗೆ ಗಾಳ ಹಾಕ್ತಿದ್ದ ವಂಚಕ ಅಂದರ್​ - fruad through Matrimonial Websites

ವೈವಾಹಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವತಿಯರನ್ನು ನಂಬಿಸಿ ಹಣ ಸುಲಿಗೆ ಮಾಡಿದ್ದ ಆರೋಪಿಯನ್ನು ಸಿಇಎನ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

one arrested who cheated to Young women through Matrimonial Websites
ವಂಚನೆ ಆರೋಪದಡಿ ವಿಜಯಪುರ ಮೂಲದ ಜೈ ಭೀಮ್ ವಿಠಲ್ ಅರೆಸ್ಟ್
author img

By

Published : Jan 9, 2022, 3:24 PM IST

ಬೆಂಗಳೂರು: ಮ್ಯಾಟ್ರಿಮೋನಿ ಸೇರಿದಂತೆ ಇನ್ನಿತರೆ ವೈವಾಹಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ, ತಾನೊಬ್ಬ ಸರ್ಕಾರಿ ನೌಕರ ಎಂದು ಬಿಂಬಿಸಿದ್ದವನ ಬಣ್ಣ ಕೊನೆಗೂ ಬಯಲಾಗಿದೆ. ಹತ್ತಾರು ಯುವತಿಯರನ್ನು ನಂಬಿಸಿ ಹಣ ಸುಲಿಗೆ ಮಾಡಿದ್ದ ಆರೋಪಿಯನ್ನು ನಗರದ ಆಗ್ನೇಯ ವಿಭಾಗದ ಸಿಇಎನ್ ಸೈಬರ್ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವಿಜಯಪುರ ಮೂಲದ ಜೈ ಭೀಮ್ ವಿಠಲ್ ಬಂಧಿತ ಆರೋಪಿ‌.

ಈತನ ತಂದೆ ಸರ್ಕಾರಿ ಅಧಿಕಾರಿಯಾಗಿದ್ದು, ಕರ್ತವ್ಯದ ಅವಧಿಯಲ್ಲಿ ಮೃತರಾಗಿದ್ದರಿಂದ ಅನುಕಂಪd ಆಧಾರದ ಮೇಲೆ ಆರೋಪಿಗೆ ಹೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಸಿಕ್ಕಿತ್ತು. ಎಂಟು ತಿಂಗಳ ಕಾಲ‌ ಲೈನ್ ಮ್ಯಾನ್ ಆಗಿ ಕೆಲಸ ಮಾಡಿದ್ದ. 2013ರಲ್ಲಿ ಸುನಿತಾ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಎರಡು ವರ್ಷಗಳ ಕಾಲ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದ.

ವಂಚನೆ ಆರೋಪದಡಿ ವಿಜಯಪುರ ಮೂಲದ ಜೈ ಭೀಮ್ ವಿಠಲ್ ಅರೆಸ್ಟ್

ಜೀವನ ನಿರ್ವಹಣೆಗಾಗಿ ಕೆಲಸವಿಲ್ಲದಿದ್ದರಿಂದ ವೈವಾಹಿಕ ಜಾಲತಾಣವಾದ ಮ್ಯಾಟ್ರಿಮೋನಿ ಸೇರಿದಂತೆ ಇನ್ನಿತರೆ ವೆಬ್ ಸೈಟ್​ಗಳಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ತಾನು ಹೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಬಿಂಬಿಸಿಕೊಂಡಿದ್ದ. ಮ್ಯಾಟ್ರಿಮೋನಿ ಮೂಲಕವೇ ಯುವತಿಯರನ್ನು ಸಂಪರ್ಕಿಸುತ್ತಿದ್ದ‌. ಯುವತಿಯರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಮದುವೆಯಾಗುವುದಾಗಿ ನಂಬಿಸುತ್ತಿದ್ದ.‌

ಇದನ್ನೂ ಓದಿ: Video: ಪುಂಡರ ಅಟ್ಟಹಾಸ.. ಮನೆಗಳ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳ ಗಾಜು ಪುಡಿ ಪುಡಿ

ಅಲ್ಲದೇ ಹೆಸ್ಕಾಂನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹತ್ತಾರು ಯುವತಿಯರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುವುದನ್ನು ಕರಗತ ಮಾಡಿಕೊಂಡಿದ್ದ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.