ಬೆಂಗಳೂರು : ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಸಂಸ್ಥೆ ನಡೆಸಿದ್ದ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದ 46 ವರ್ಷ ವಯಸ್ಸಿನ ವೈದ್ಯರೊಬ್ಬರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿತ್ತು.
ಹೀಗಾಗಿ, ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ 14 ದಿನಗಳ ಕ್ವಾರಂಟೈನ್ ಮುಗಿಸಿದ್ದ ವೈದ್ಯರಿಗೆ ನಿನ್ನೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿದಾಗ, ವೈದ್ಯರ ರಿಪೋರ್ಟ್ ಮತ್ತೊಮ್ಮೆ ಪಾಸಿಟಿವ್ ಬಂದಿದೆ.
ಒಮಿಕ್ರಾನ್ ಸೋಂಕಿತ ವೈದ್ಯರಿಗೆ ಕೊರೊನಾ : ಇದೀಗ ಪಾಸಿಟಿವ್ ಬಂದ ಹಿನ್ನೆಲೆ ವೈದ್ಯರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ. ವೈದ್ಯರ ಜತೆ ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ಉಳಿದ ಮೂವರು ವೈದ್ಯರ ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೆ, ಜಿನೋಮ್ ಸೀಕ್ವೆನ್ಸಿಂಗ್ ವರದಿ ಬರುವವರೆಗೆ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಕ್ವಾರೈಂಟೈನ್ ಇರಲಿದ್ದಾರೆ.
ಇಂದು ಮತ್ತೊಮ್ಮೆ ಮೂರು ವೈದ್ಯರಿಗೆ ಪರೀಕ್ಷೆ ನಡೆಸಿ, ನೆಗೆಟಿವ್ ಬಂದು, ಜೀನೋಮ್ ಸೀಕ್ವೆನ್ಸಿಂಗ್ ವರದಿ ಕೈ ಸೇರಿ ಅಲ್ಲಿಯೂ ನೆಗಟಿವ್ ಬಂದರೆ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡುವ ಸಾಧ್ಯತೆ ಇದೆ.
ಇನ್ನು ಪರೀಕ್ಷೆಯಲ್ಲಿ ವೈರಲ್ ಲೋಡ್ ಇಳಿಕೆ ಕಂಡಿದೆ. ಒಮಿಕ್ರಾನ್ ಸೋಂಕಿತ ವೈದ್ಯನಿಗೆ ಮತ್ತೊಮ್ಮೆ ಸೋಂಕು ಪತ್ತೆಯಾದರೂ ಸೋಂಕಿನ ತೀವ್ರತೆ ಹೆಚ್ಚಾಗಿ ಕಂಡು ಬಂದಿಲ್ಲ ಅಂತಾ ಮೂಲಗಳು ತಿಳಿಸಿವೆ.