ಈಗ ಎಲ್ಲವೂ ಡಿಜಿಟಲ್ಮಯ. ಆನ್ಲೈನ್ ಕ್ಲಾಸ್, ಆನ್ಲೈನ್ ಫುಡ್ ಡೆಲಿವರಿ ಸೇರಿದಂತೆ ಆನ್ಲೈನ್ನಲ್ಲೇ ತರಕಾರಿ ಕೂಡ ಆರ್ಡರ್ ಮಾಡೋ ಟೆಕ್ನಾಲಜಿ ಬಂದಿದೆ.
ಮನರಂಜನೆಯ ವಿಷಯಕ್ಕೆ ಬಂದ್ರೂ ಈಗ ಕೂತಲ್ಲೇ ಹೊಸ ಸಿನಿಮಾ ನೋಡುವ ಒಟಿಟಿ ಪ್ಲಾಟ್ಫಾರ್ಮ್ ಟ್ರೆಂಡ್ನಲ್ಲಿದೆ. ಅದರಲ್ಲೂ ಕೊರೊನಾ ಬಂದು ಥಿಯೇಟರ್ ಬಂದ್ ಆದ ಮೇಲೆ ಒಟಿಟಿ ಪ್ಲಾಟ್ಫಾರ್ಮ್ಗೆ ರಹದಾರಿ ಸಿಕ್ಕಂತಾಗಿದೆ. ಇದನ್ನು ಅರಿತ ಕನ್ನಡಿಗರ ತಂಡವೊಂದು ಲಾಕ್ಡೌನ್ ಸಂದರ್ಭದಲ್ಲಿ ಪಕ್ಕಾ ಪ್ಲಾನ್ ಮಾಡಿ, ಕನ್ನಡಿಗರಿಂದ ಕನ್ನಡಿಗರಿಗಾಗಿ ಎಂಬ ಕಾನ್ಸೆಪ್ಟ್ನಲ್ಲಿ'Ok ಓನ್ಲಿ ಕನ್ನಡ' ಎಂಬ ಆನ್ಲೈನ್ ಪ್ಲಾಟ್ಫಾರ್ಮ್ ಒಪನ್ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಕನ್ನಡದವರೇ ಆದ ಪ್ರಯೋಗ್ ಸ್ಟುಡಿಯೋ ಹಾಗೂ ಮಯೂರ ಮೋಷನ್ ಪಿಕ್ಚರ್ಸ್ ಅವರ ಸಹಭಾಗಿತ್ವದಲ್ಲಿ 'Ok ಓನ್ಲಿ ಕನ್ನಡ' ಆನ್ಲೈನ್ ಪ್ಲಾಟ್ಫಾರ್ಮ್ ನಿರ್ಮಾಣಗೊಂಡಿದೆ.
ಈ ಒಟಿಟಿ ಫ್ಲಾಟ್ಫಾರ್ಮ್ನ ವಿಶೇಷ ಅಂದ್ರೆ, ಕನ್ನಡ ಚಿತ್ರಗಳನ್ನು ಮಾತ್ರ ಬಿಡುಗಡೆ ಮಾಡುವ ಉದ್ದೇಶದಿಂದ ಇದನ್ನು ನಿರ್ಮಾಣ ಮಾಡಿದ್ದು, ಕನ್ನಡದ ಚಿತ್ರಗಳು, ನಾಟಕ ಹಾಗೂ ಕಿರು ಚಿತ್ರಗಳನ್ನು ರಿಲೀಸ್ ಮಾಡಿ ಇಲ್ಲಿರುವ ಕನ್ನಡಿಗರಿಗೆ ಮನರಂಜನೆ ನೀಡುವ ಜೊತೆಗೆ ವಿದೇಶದಲ್ಲಿರುವ ಕನ್ನಡಿಗರಿಗೂ ಇದನ್ನು ತಲುಪಿಸುವ ಉದ್ದೇಶ ಇವರದ್ದಾಗಿದೆ.
ಇದರ ಜೊತೆಗೆ ಸಾಕಷ್ಟು ಕನ್ನಡ ಕಿರುಚಿತ್ರ, ಚಲನಚಿತ್ರ ಹಾಗೂ ನಾಟಕಗಳನ್ನು ನಿರ್ಮಾಣ ಮಾಡಲು ಇವರು ಹೊಸ ತಂಡಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. OK ಓನ್ಲಿ ಕನ್ನಡ ಕನ್ನಡಿಗರ ಮನೆ ಹಾಗೂ ಮನಗಳನ್ನು ತಲುಪಲು ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಡಿಜಿಟಲ್ ಲೋಕಕ್ಕೆ ಎಂಟ್ರಿ ಕೊಡಲಿದೆ.