ETV Bharat / city

ವರ್ಗಾವಣೆ ಆದ್ರೂ ಕರ್ತವ್ಯಕ್ಕೆ ಬಾರದ 38 ಇನ್ಸ್​ಪೆಕ್ಟರ್ಸ್‌; ಡಿಜಿ ಕಚೇರಿಯಿಂದ ಎಚ್ಚರಿಕೆ ನೋಟಿಸ್‌ - ಬೆಂಗಳೂರು ಪೊಲೀಸ್ ಇಲಾಖೆ ಸುದ್ದಿ

ಒಂದು ವೇಳೆ ಕರ್ತವ್ಯಕ್ಕೆ ವರದಿ ಮಾಡಕೊಳ್ಳದೇ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿಗೆ ಕಳುಹಿಸಿದ ನೋಟಿಸ್‌ನಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.

Notice issued by DG IGP office to inspectors  inspectors who have not reported for duty after transfer  police inspectors transfer issue  Bengaluru police department news  ವರ್ಗಾವಣೆ ಬಳಿಕ ಕರ್ತವ್ಯಕ್ಕೆ ಹಾಜರಾಗದ ಇನ್ಸ್‌ಪೆಕ್ಟರ್‌ಗಳಿಗೆ ಡಿಜಿ ಐಜಿಪಿ ಕಚೇರಿಯಿಂದ ನೋಟಿಸ್  ಬೆಂಗಳೂರು ಪೊಲೀಸ್ ಇಲಾಖೆ ಸುದ್ದಿ  ಡಿಜಿ ಐಜಿಪಿ ಕಚೇರಿಯಿಂದ ಇನ್ಸ್​ಪೆಕ್ಟರ್​ಗಳಿಗೆ ವಾರ್ನಿಂಗ್​ ನೊಟೀಸ್
ಡಿಜಿ-ಐಜಿಪಿ ಕಚೇರಿಯಿಂದ ವಾರ್ನಿಂಗ್​ ನೊಟೀಸ್
author img

By

Published : May 11, 2022, 8:24 AM IST

ಬೆಂಗಳೂರು: ವರ್ಗಾವಣೆಗೊಂಡರೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ 38 ಇನ್ಸ್​ಪೆಕ್ಟರ್‌ಗಳಿಗೆ ಡಿಜಿ-ಐಜಿಪಿ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಏಳು ದಿನಗಳೊಳಗೆ ಉತ್ತರ ನೀಡುವಂತೆ ಖಡಕ್​ ಎಚ್ಚರಿಕೆ ಕೊಡಲಾಗಿದೆ.

ಇದನ್ನೂ ಓದಿ: ವಿಡಿಯೋ ನೋಡಿ: ಪೊಲೀಸ್ ತಂಡದ ಮೇಲೆ ಚಿರತೆ ಅಟ್ಯಾಕ್; ರಕ್ಷಕರ ಧೈರ್ಯ ಮೆಚ್ಚಲೇಬೇಕು!

ನೋಟಿಸ್​ನಲ್ಲೇನಿದೆ?: ಸಂಬಂಧಿಸಿದ ಘಟಕಾಧಿಕಾರಿಗಳು ನಿಮ್ಮನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ. ಆದ್ರೂ ಸಹ ನೀವು ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಇದುವರೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಈ ಮೂಲಕ ಬೇಜವಾಬ್ದಾರಿ, ಉದ್ಧಟತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರಿದ್ದೀರಿ. ಹೀಗಾಗಿ ಕೂಡಲೇ ನೀವು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಂತಿಮವಾಗಿ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಪೊಲೀಸ್​ ಸಿಬ್ಬಂದಿಗೆ ಚಿಕ್ಕಮಗಳೂರು ಎಸ್​ಪಿ 'ಫಿಟ್‌ನೆಸ್‌ ಟಾಸ್ಕ್'​.. ದೇಹ ಹುರಿಗಟ್ಟಿದರೆ 'ರಿವಾರ್ಡ್​ ಆಫರ್​'!

ಒಂದು ವೇಳೆ ನೀವು ಕರ್ತವ್ಯಕ್ಕೆ ವರದಿ ಮಾಡಕೊಳ್ಳದೇ ಇಲ್ಲವಾದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮ್ಮಿಂದಾದ ತಪ್ಪಿನ ಬಗ್ಗೆ ವಿವರಣೆ ಸಲ್ಲಿಸಲು ಈ ಅವಕಾಶ ನೀಡಲಾಗಿದೆ. ಸೂಚನಾ ಪತ್ರ ತಲುಪಿದ 7 ದಿನದೊಳಗಾಗಿ ಸಮಜಾಯಿಷಿ ಸಲ್ಲಿಸತಕ್ಕದ್ದು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.