ದೇವನಹಳ್ಳಿ: ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಮತ್ತು ಅಮೆರಿಕದ ಸಿಲಿಕಾನ್ ವ್ಯಾಲಿ ಸ್ಯಾನ್ ಫ್ರಾನ್ಸಿಸ್ಕೋ ನಡುವೆ ಮುಂದಿನ ವರ್ಷದ ಆರಂಭದಿಂದ ತಡೆ ರಹಿತ ನೇರ ವಿಮಾನ ಸೇವೆ ಆರಂಭವಾಗಲಿದೆ. ವಾರದಲ್ಲಿ ಮೂರು ದಿನಗಳ ಕಾಲ ಈ ವಿಮಾನ ಹಾರಾಟ ನಡೆಸಲಿದೆ.
ಇದನ್ನೂ ಓದಿ...ಅಂತಾರಾಷ್ಟ್ರೀಯ ವಿಮಾನ ಸೇವೆಗೆ ಡಿ. 31ರವರೆಗೆ ನಿರ್ಬಂಧ
2021ರ ಜನವರಿ 11ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಈ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದೆ. ಹೀಗಾಗಿ, ಕರ್ನಾಟಕದ ಐಟಿ (ಮಾಹಿತಿ ತಂತ್ರಜ್ಞಾನ) ಉದ್ಯಮದ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ ಎಂಬ ಆಶಾಭಾವನೆ ಮೂಡಿಸಿದೆ.
ಅಲ್ಲದೆ, ಈ ವಿಮಾನಯಾನ ಸೇವೆ ಏರ್ ಇಂಡಿಯಾದ ಅತಿ ದೂರದ ವಿಮಾನ ಮಾರ್ಗವಾಗಿದೆ. ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಡುವೆ 14,000 ಕಿ.ಮೀ (8698 ಮೈಲಿ) ದೂರವಿದೆ. ಈ ದೂರವನ್ನು ತಲುಪಲು 16 ತಾಸುಗಳ ಪ್ರಯಾಣ ಬೆಳಸಬೇಕಿದೆ. ಈ ವಿಶೇಷ ಪ್ರಯಾಣಕ್ಕಾಗಿ ಏರ್ ಇಂಡಿಯಾ 238 ಸೀಟ್ (ಆಸನ) ಸಾಮರ್ಥ್ಯದ ಬೋಯಿಂಗ್ 777-200 LR ಬಳಸಲಿದೆ.
ಇದನ್ನೂ ಓದಿ...ಕೋವಿಡ್ ಎಫೆಕ್ಟ್: ಇ-ಕಾಮರ್ಸ್ನಲ್ಲಿ ಶೇಕಡಾ 30 - 40ರಷ್ಟು ಬೆಳವಣಿಗೆ
ಈ ವರ್ಷದಲ್ಲೇ ಈ ವಿಮಾನ ಸೇವೆ ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಮುಂದೂಡಲಾಗಿದೆ. ಜನವರಿಯಲ್ಲಿ ಪ್ರಾರಂಭವಾಗುವ ಈ ವಿಮಾನ ಸೇವೆ ಪಡೆಯಲು ನವೆಂಬರ್ 25ರಿಂದಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.