ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಅಂತ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಜನರಿಗೆ ಜಾಗೃತಿ ಮೂಡಿಸುತ್ತಿದೆ. ಈ ನಡುವೆ ಹಲವರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಹಲವು ಭಾಗದಲ್ಲಿ ಜಾಗೃತಿ ಮೂಡಿಸಲು ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ನೋ ರೇಷನ್, ನೋ ಪೆನ್ಶನ್ ಅಂತ ಅಲ್ಲಿನ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಹೀಗಾಗಿ ಇದಕ್ಕೆ ಪ್ರತಿಪಕ್ಷ ಸೇರಿದಂತೆ ಎಲ್ಲೆಡೆ ವಿರೋಧ ವ್ಯಕ್ತವಾಗ್ತಿದೆ.
ಲಸಿಕೆ ಹಾಕಿಸಿಕೊಳ್ಳೋದು ಜನರ ಹಕ್ಕು. ಇದಕ್ಕಾಗಿ ಲಸಿಕೆ ಹಾಕಿಸಿಕೊಳ್ಳದವರಿಗೆ ರೇಷನ್, ಪೆನ್ಶನ್ ಇಲ್ಲ ಅನ್ನೋದು ಸರಿಯಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಓದಿ: ನೋ ವ್ಯಾಕ್ಸಿನೇಷನ್-ನೋ ರೇಷನ್- ನೋ ಪೆನ್ಷನ್.. ಚಾಮರಾಜನಗರ ಡಿಸಿ ಮಹತ್ವದ ತೀರ್ಮಾನ..
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ. ಸುಧಾಕರ್, ನೋ ವ್ಯಾಕ್ಸಿನ್, ನೋ ರೇಷನ್, ನೋ ಪೆನ್ಶನ್ ವಿಚಾರ ಸರ್ಕಾರದ ನಿರ್ಧಾರವಲ್ಲ. ಈ ರೀತಿಯಾಗಿ ಹೇಳಿದ್ದರೆ ಅದನ್ನ ಸರ್ಕಾರವೂ ಒಪ್ಪುವುದಿಲ್ಲ. ಚಾಮರಾಜನಗರದ ಜಿಲ್ಲಾಧಿಕಾರಿ ಎಂ ಆರ್ ರವಿಯವ್ರು, ಲಸಿಕೆ ಹಾಕಿಸಿಕೊಳ್ಳಿ ಅನ್ನೋ ಜಾಗೃತಿಯಲ್ಲಿ ಹೇಳಿರಬಹುದು. ಈ ಬಗ್ಗೆ ಅವರೊಟ್ಟಿಗೆ ಮಾತಾನಾಡುತ್ತೇನೆ ಅಂತ ತಿಳಿಸಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಮನವರಿಕೆ ಮಾಡಿಕೊಡುತ್ತೇವೆ. ಇದಕ್ಕೆ ಆಡಳಿತ-ವಿರೋಧ ಪಕ್ಷದ ಎಲ್ಲರೂ ಸೇರಿ ಮನವರಿಕೆ ಮಾಡಿಕೊಡೋಣ. ಇದಕ್ಕೆ ಡಿ.ಕೆ ಶಿವಕುಮಾರ್ ಸಹ ಸಹಕಾರ ಕೊಡಲಿ ಅಂತ ಕೇಳಿಕೊಂಡರು.
ಇದನ್ನೂ ಓದಿ: ನೋ ವ್ಯಾಕ್ಸಿನೇಷನ್- ನೋ ರೇಷನ್, ನೋ ಪೆನ್ಷನ್ ವಿರುದ್ಧ ಡಿಕೆಶಿ ಆಕ್ರೋಶ..!
ಶಾಸಕ ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದ ಸಚಿವ ಸುಧಾಕರ್
ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆ ಉದ್ಘಾಟನೆ ವಿಚಾರವಾಗಿ ಶಾಸಕ ರಮೇಶ್ ಕುಮಾರ್ ವಿರುದ್ಧ ಸಚಿವ ಸುಧಾಕರ್ ಹರಿಹಾಯ್ದರು. ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯನ್ನು ಸರ್ಕಾರ ಇವತ್ತು ಅಧಿಕೃತವಾಗಿ ಉದ್ಘಾಟನೆ ಮಾಡುತ್ತಿದೆ. ಒಬ್ಬ ಆರೋಗ್ಯ ಸಚಿವನಾಗಿ ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳೀಯ ಶಾಸಕರಿಗೆ ಅಧಿಕೃತ ಆಮಂತ್ರಣ ಹೋಗಿರುತ್ತೆ. ಯಾರು ಬೇಕಿದ್ದರೂ ಯಾವಾಗ ಬೇಕಿದ್ದರೂ ಉದ್ಘಾಟನೆ ಮಾಡಿಕೊಳ್ಳಬಹುದು. ಇವತ್ತು ಹೋಗಿ ಆಸ್ಪತ್ರೆಯನ್ನ ಅಧಿಕೃತವಾಗಿ ಉದ್ಘಾಟನೆ ಮಾಡುತ್ತಿದ್ದೇನೆ ಎಂದರು.
ಎರಡು ಬಾರಿ ಉದ್ಘಾಟನೆ ವಿಚಾರವಾಗಿ ರಮೇಶ್ ಕುಮಾರ್ ಅವ್ರನ್ನೇ ಕೇಳಬೇಕು ಎಂದ ಸಚಿವರು, ಈ ಹಿಂದೆ 26 ರಂದು ಉದ್ಘಾಟನೆ ಮಾಡಬೇಕೆಂದು ಅಂದುಕೊಂಡಿದ್ದೆವು. ಆದರೆ ದೆಹಲಿಗೆ ಹೋದ ಕಾರಣ ಕಾರ್ಯಕ್ರಮವನ್ನ ಮುಂದೂಡಲಾಯ್ತು. 26ರ ಬದಲು ಸೆಪ್ಟೆಂಬರ್ 1 ರಂದು ಮಾಡಲು ಹೇಳಿದ್ದೆ. ಆ ಪ್ರಕಾರ ಇವತ್ತು ಉದ್ಘಾಟನೆ ಮಾಡುತ್ತಿದ್ದೇವೆ. ಇದರ ಹೊರತು ಕೂಡ ಅವರಾಗಿ ಅವರೇ ಹೋಗಿ, ಯಾರು ಇಲ್ಲದೇ ಅವರ ಕಾರ್ಯಕರ್ತರ ಜೊತೆ ಹೋಗಿ ಟೇಪ್ ಕಟ್ ಮಾಡಿ ದೀಪಾ ಹಚ್ಚಿ ಉದ್ಘಾಟಿಸಿದ್ದಾರೆ. ರಾಜ್ಯದಲ್ಲಿ ಎಲ್ಲಾದರೂ ಈ ರೀತಿಯಾಗಿದ್ಯಾ? ಈ ಹಿಂದೆ ಅವ್ರು ಕೂಡ ಆರೋಗ್ಯ ಸಚಿವರಾಗಿದ್ದರು. ಈ ರೀತಿ ಯಾರಾದರೂ ಮಾಡಿದರೆ ಅವರು ಆಗ ಏನ್ ಅಂದಿರೋರು ಅಂತ ಪ್ರಶ್ನೆ ಮಾಡಿದರು. ನಮ್ಮನ್ನ ರಾಜ್ಯದ ಜನತೆ ನೋಡುತ್ತಾರೆ, ನಮ್ಮ ನಡೆ ನುಡಿ ಒಂದೇ ಇರಬೇಕು ಅಂತ ತಿಳಿಸಿದರು.
ಬಾಯಿಮಾತಿನಲ್ಲಿ ಶಿಷ್ಟಾಚಾರ ಭಾಷಣ ಮಾಡುತ್ತಾರೆ, ಮಾರಲ್ ಸ್ಟೋರಿಸ್ ಹೇಳುತ್ತಾರೆ. ಮಾತೊಂದು, ಕೃತಿಯೊಂದು ಅಗಿದ್ದರೆ ಜನ ನೋಡುತ್ತಿದ್ದಾರೆಂದು ಶಾಸಕ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನ ಮತ್ತು ರಮೇಶ್ ಕುಮಾರ್ ನಡುವೆ ಯಾವುದೇ ಮುಸುಕಿನ ಗುದ್ದಾಟವಿಲ್ಲ. ಅವರು ಮೊದಲ ಸಾಲ ಎಂಎಲ್‌ಎ ಆದಾಗ ನಂಗೆ 5 ವರ್ಷ. ಅವ್ರ ವಿಚಾರಧಾರೆಗಳು ಬೇರೆ ಇರಬಹುದು. ನಮಗೆ ಪಾಠ ಹೇಳಿಕೊಡೋರು, ನಮ್ಮ ಹತ್ತಿರ ಪಾಠ ಕಲಿಯೋದು ತಪ್ಪಾಗುತ್ತೆ ಅಂತ ಸಚಿವ ಸುಧಾಕರ ಹೇಳಿದರು.