ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಹಿನ್ನೆಲೆಯಲ್ಲಿ ಆತುರದ ಹೇಳಿಕೆಗಳನ್ನು ನೀಡದಂತೆ ಪಕ್ಷದ ಶಾಸಕರು, ಸಚಿವರು ಮತ್ತು ಮುಖಂಡರಿಗೆ ರಾಜ್ಯ ಬಿಜೆಪಿ ಸೂಚನೆ ನೀಡಿದೆ.
ಡಿ.ಕೆ ಶಿವಕುಮಾರ್ ಬಂಧನ ಪ್ರಕ್ರಿಯೆ ಕಾನೂನು ಪರಿಮಿತಿಯಲ್ಲಿ ಆಗಿದೆ. ಈ ಪ್ರಕರಣದಲ್ಲಿ ಯಾವ ನಾಯಕರೂ ಆತುರದ ಹೇಳಿಕೆ ನೀಡಬಾರದು. ಪಕ್ಷದ ಆಯ್ದ ಪ್ರಮುಖರು ಮಾತ್ರ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡುತ್ತಾರೆ. ಹೇಳಿಕೆ ನೀಡುವ ಭರದಲ್ಲಿ ವಿವಾದಾತ್ಮಕ ಅಭಿಪ್ರಾಯಕ್ಕೆ ಅವಕಾಶ ನೀಡಬೇಡಿ. ಡಿಕೆಶಿ ಬಂಧನ ವಿಚಾರದಲ್ಲಿ ಎಚ್ಚರಿಕೆಯ ನಿಲುವು ವ್ಯಕ್ತಪಡಿಸಿ ಎಂದು ಬಿಜೆಪಿ ಸಚಿವರು, ಶಾಸಕರು, ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.