ETV Bharat / city

ಸದ್ಯಕ್ಕೆ ಸಿಲಿಕಾನ್​ ಸಿಟಿಯಲ್ಲಿ ನಡೆಯುತ್ತಿಲ್ಲ ಡ್ರಂಕ್​ ಅಂಡ್​ ಡ್ರೈವ್ ಟೆಸ್ಟ್​..! - ಮದ್ಯ

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಡ್ರಂಕ್ ಅಂಡ್​ ಡ್ರೈವ್ ತಪಾಸಣೆ ನಡೆಸಲು ಸಾಧ್ಯವಾಗುತ್ತಿಲ್ಲ. ತಪಾಸಣೆ ವೇಳೆ ಪೊಲೀಸರಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಅವರಲ್ಲೂ ಭೀತಿ ಕಾಡುತ್ತಿದೆ.

liqour
ಮದ್ಯಮಾರಾಟ
author img

By

Published : May 5, 2020, 2:49 PM IST

ಬೆಂಗಳೂರು: ರಾಜ್ಯ ಸರಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಎಣ್ಣೆ ಅಂಗಡಿ ಬಳಿ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇನ್ನೂ ಕೆಲವರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದೂ ಕೂಡಾ ಕಂಡುಬಂದಿದೆ. ಆದರೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಒಂದು ವೇಳೆ ಡ್ರಿಂಕ್ ಅಂಡ್​ ಡ್ರೈವ್​ ತಪಾಸಣೆಗೆ ಇಳಿದರೆ ಕೊರೊನಾ ಕಾಡುವ ಭೀತಿ ಅವರಲ್ಲಿದೆ.

ಸದ್ಯ ಕೊರೊನಾ ಮಹಾಮಾರಿ ಸಿಲಿಕಾನ್ ಸಿಟಿಯಲ್ಲಿ ಕೂಡ ರೌದ್ರ ನರ್ತನ ತೋರತ್ತಿದೆ. ಕುಡಿದು ವಾಹನ ಚಾಲನೆ ಮಾಡುವಾಗ ವಾಹನ ಸವಾರ ಕುಡಿದಿದ್ದನಾ? ಇಲ್ಲವಾ? ಎಂಬುದನ್ನು ಪತ್ತೆ ಹಚ್ಚಲು ಅವನಿಗೆ ಆಲ್ಕೋಮೀಟರ್ ನೀಡಿ ಊದಿಸಬೇಕಾಗುತ್ತದೆ. ಈ ವೇಳೆ ವಾಹನ ಸವಾರ ಕೊರೊನಾ ಸೋಂಕಿತ ವ್ಯಕ್ತಿಯಾಗಿದ್ದರೆ, ಆ ಸೋಂಕು ಪೊಲೀಸರಿಗೂ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಲ್ಕೋಮೀಟರ್ ಮೂಲಕ ತಪಾಸಣೆಗೆ ನಡೆಸುವುದಿಲ್ಲ.

ಸದ್ಯ ನಗರದಲ್ಲಿ ಟ್ರಾಫಿಕ್ ಪೊಲೀಸರು ತಪಾಸಣೆ ಮಾಡದ ಕಾರಣ ಅಲ್ಲಲ್ಲಿ ಮದ್ಯಪಾನ ಮಾಡಿ ವಾಹನ ಚಾಲನ ಮಾಡುವ ಸನ್ನಿವೇಶಗಳೂ ಸೃಷ್ಟಿಯಾಗುತ್ತಿವೆ. ನಿನ್ನೆ ಸಂಜೆಯಿಂದ ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಾಗಿಲ್ಲ ಎಂಬುದು ಇದಕ್ಕೆ ಸಾಕ್ಷಿ ಒದಗಿಸುತ್ತದೆ.

ಆದರೂ ನಗರದ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮುಂಜಾನೆ 9ರಿಂದ ಸಂಜೆ 6ರವರೆಗೆ ಮಾತ್ರ ಮದ್ಯ ಮಾರಾಟ ಮಾಡಬೇಕೆಂದು ನಗರ ಪೊಲೀಸರು ಆಯುಕ್ತರು ಖಡಕ್​ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಮದ್ಯವನ್ನು ಖರೀದಿ ಮಾಡುವ ವ್ಯಕ್ತಿ ಯಾವುದೇ ರಸ್ತೆ, ಫುಟ್​ಪಾತ್, ಪಾರ್ಕ್, ಮೈದಾನಗಳಲ್ಲಿ ಮದ್ಯಪಾನ ಮಾಡಬಾರದು. ರಾತ್ರಿ ವೇಳೆ ಯಾರೂ ಮನೆಯಿಂದ ಹೊರ ಬರಬಾರದೆಂದು ಆದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.