ETV Bharat / city

ಬಿಜೆಪಿ ವಿರುದ್ಧ ಯಾವುದೇ ಅಸಮಾಧಾನವಿಲ್ಲ: ಅನರ್ಹ ಶಾಸಕ ಬಿ.ಸಿ.ಪಾಟೀಲ್ - Disqualified MLA BC Patel

ತುರ್ತಾಗಿ ಅರ್ಜಿಯನ್ನ ಏಕೆ ಕೈಗೆತ್ತಿಕೊಳ್ಳಬೇಕು ಎಂದು ನಿನ್ನೆ ಸುಪ್ರೀಂಕೋರ್ಟ್ ಪ್ರಶ್ನಿಸಿದ್ದಕ್ಕೆ ಇಂದು ಬೆಂಗಳೂರಿನ ದೇವಪ್ರಿಯ ಬ್ರಿಗೇಡ್ ಪ್ಯಾಲೇಸ್ ಅಪಾರ್ಟ್​ಮೆಂಟ್​ನಲ್ಲಿ ಅನರ್ಹ ಶಾಸಕರು ಸಭೆ ನಡೆಸಿದ್ದಾರೆ.

ಅನರ್ಹ ಶಾಸಕ ಬಿ.ಸಿ.ಪಾಟೀಲ್
author img

By

Published : Sep 13, 2019, 5:24 PM IST

ಬೆಂಗಳೂರು: ಕೋರ್ಟ್ ವಿಚಾರಣೆ ವಿಚಾರವಾಗಿ ಮಾತಾಡಿಕೊಂಡಿದ್ದೇವೆ, ಬಿಜೆಪಿ ವಿರುದ್ಧ ನಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.

ನಗರದ ದೇವಪ್ರಿಯ ಬ್ರಿಗೇಡ್ ಪ್ಯಾಲೇಸ್ ಅಪಾರ್ಟ್​ಮೆಂಟ್​ನಲ್ಲಿ ಸಭೆ ನಡೆಸಿ, ಬಳಿಕ ಮಾತನಾಡಿದ ಅವರು, ಶೀಘ್ರವಾಗಿ ಕೋರ್ಟ್​ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರಲಿ ಅಂತ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದೇವೆ. ಈ ಸಂಬಂಧ‌ ಮುಂದಿನ ಆಗು ಹೋಗುಗಳ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದರು.

ಅನರ್ಹ ಶಾಸಕ ಬಿ.ಸಿ.ಪಾಟೀಲ್

ಬಿಜೆಪಿಯಿಂದ ಸೂಕ್ತ ಸ್ಪಂದನೆ ಸಿಕ್ತಿಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ನಮಗೆ ಏಕೆ ಸ್ಪಂದನೆ ಸಿಗಬೇಕು‌, ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿವೆ‌. ಸಿಎಂ ಭೇಟಿ ಮಾಡಿ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದೇವೆ‌. ಶಾಸಕ ಸ್ಥಾನ ಹೋದ ಮಾತ್ರಕ್ಕೆ ಜೀವನ ಮುಗಿದು ಹೋಗಿಲ್ಲ. ಅನರ್ಹರಾದರೂ ಕ್ಷೇತ್ರದ ಜವಾಬ್ದಾರಿ ನಮ್ಮ ಮೇಲಿದೆ. ನಾವು ಸಿಎಂ ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಬೇಡ. ಜೆಡಿಎಸ್​​ನಿಂದ ಬಿಜೆಪಿಗೆ ಯಾರಾದರೂ ಬರಲಿ, ಅದು ಆ ಶಾಸಕರಿಗೆ ಬಿಟ್ಟಿದ್ದು. ನಾವು ಜೆಡಿಎಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಆತಂಕಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ತುರ್ತಾಗಿ ಅರ್ಜಿಯನ್ನ ಏಕೆ ಕೈಗೆತ್ತಿಕೊಳ್ಳಬೇಕು ಎಂದು ನಿನ್ನೆ ಸುಪ್ರೀಂ ಕೋರ್ಟ್ ಪ್ರಶ್ನಿಸಿರುವುದರಿಂದ ಅನರ್ಹ ಶಾಸಕರ ಆತಂಕ, ಗೊಂದಲ ಹೆಚ್ಚಾಗಿದೆ. ಇದಕ್ಕಾಗಿಯೇ ಇಂದು ಅನರ್ಹ ಶಾಸಕರು ಡಾ.ಸುಧಾಕರ್​ಗೆ ಸೇರಿದ ಅಪಾರ್ಟ್​ಮೆಂಟ್​ನಲ್ಲಿ ದಿಢೀರ್ ಸಭೆ ನಡೆಸಿ ಮುಂದಿನ ನಡೆ, ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಅನರ್ಹ ಶಾಸಕರಾದ ಡಾ. ಸುಧಾಕರ್, ಎಂಟಿಬಿ ನಾಗರಾಜ್, ಬಿ.ಸಿ ಪಾಟೀಲ್, ಮುನಿರತ್ನ, ರೋಷನ್ ಬೇಗ್, ಪ್ರತಾಪ್ ಗೌಡ ಪಾಟೀಲ್ ಭಾಗಿಯಾಗಿದ್ದರು. ಸಭೆಯಲ್ಲಿ ಅರ್ಜಿ ವಿಚಾರಣೆ ವಿಳಂಬದ ಕುರಿತು ಹಾಗೂ ಭವಿಷ್ಯದಲ್ಲಿ ಏನು ಮಾಡಬೇಕು ಎಂಬ ಕುರಿತು ಗಂಭೀರ ಚರ್ಚೆ ನಡೆಸಿದರು. ಅಲ್ಲದೇ ಬಿಜೆಪಿ ಧೋರಣೆ ಬಗ್ಗೆನೂ ಅನರ್ಹ ಶಾಸಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಜೆಡಿಎಸ್​ನಿಂದ ಬಂದ ಶಾಸಕರಿಗೆ ಬಿಜೆಪಿ ನಾಯಕರು ಮಣೆ ಹಾಕಿದರೆ ತಮ್ಮ ಗತಿಯೇನು? ಸರ್ಕಾರ ರಚನೆಗೆ ಮೊದಲು ಕೊಟ್ಟಿದ್ದ ಆಶ್ವಾಸನೆಗಳನ್ನು ಬಿಜೆಪಿ ನಾಯಕರು ಈಡೇರಿಸುತ್ತಿಲ್ಲ, ಈ ಎಲ್ಲ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಯಿತು.

Intro:Body:KN_BNG_02_DISQUALIFIEDMLAMAEETING_BCPATIL_SCRIPT_7201951

ಅನರ್ಹ ಶಾಸಕರ ಸಭೆ; ಬಿಜೆಪಿ ವಿರುದ್ಧ ಅಸಮಾಧಾನವಿಲ್ಲ: ಬಿ.ಸಿ.ಪಾಟೀಲ್

ಬೆಂಗಳೂರು: ಕೋರ್ಟ್ ವಿಚಾರಣೆ ವಿಚಾರವಾಗಿ ಮಾತಾಡಿಕೊಂಡಿದ್ದೇವೆ. ಬಿಜೆಪಿ ವಿರುದ್ಧ ನಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ತಿಳಿಸಿದರು.

ಪ್ಯಾಲೆಸ್ ರಸ್ತೆಯಲ್ಲಿರುವ ದೇವಪ್ರಿಯ ಬ್ರಿಗೆಡ್ ಪ್ಯಾಲೇಸ್ ಅಪಾರ್ಟ್ಮೆಂಟ್ ನಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಶೀಘ್ರವಾಗಿ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿ ಅಂತ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದೇವೆ. ಈ ಸಂಬಂಧ‌ ಮುಂದಿನ ಆಗು ಹೋಗುಗಳ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯಿಂದ ಸ್ಪಂದನೆ ಸಿಕ್ತಿಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ನಮಗೆ ಏಕೆ ಸ್ಪಂದನೆ ಸಿಗಬೇಕು‌. ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿವೆ‌. ಸಿಎಂರನ್ನು ಭೇಟಿ ಮಾಡಿ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದೇವೆ‌. ಶಾಸಕ ಸ್ಥಾನ ಹೋದ ಮಾತ್ರಕ್ಕೆ ಜೀವನ ಮುಗಿದು ಹೋಗಿಲ್ಲ. ಅನರ್ಹರಾದರೂ, ಕ್ಷೇತ್ರದ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿವರಿಸಿದರು‌.

ನಾವು ಸಿಎಂ ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಬೇಡ. ಜೆಡಿಎಸ್ ನಿಂದ ಬಿಜೆಪಿಗೆ ಯಾರಾದರೂ ಬರಲಿ, ಅದು ಆ ಶಾಸಕನಿಗೆ ಬಿಟ್ಟಿದ್ದು. ನಾವು ಜೆಡಿಎಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಆತಂಕಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅನರ್ಹ ಶಾಸಕರಲ್ಲಿ ಆತಂಕ, ಅಸಮಾಧಾನ:

ಅನರ್ಹ ಶಾಸಕರಿಗೆ ರಾಜಕೀಯ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದ್ದು, ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆ ಆತಂಕಕ್ಕೆ ಒಳಗಾಗಿರುವ ಹಿನ್ನೆಲೆ ಸಭೆ ನಡೆಸಿದರು.

ನಿನ್ನೆ ಸುಪ್ರೀಂ‌ ಕೋರ್ಟ್ ನಲ್ಲಿ ಯಾಕೆ ತುರ್ತಾಗಿ ಅರ್ಜಿಯನ್ನ ಕೈಗೆತ್ತಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿರುವುದರಿಂದ ಅನರ್ಹ ಶಾಸಕರ ಆತಂಕ, ಗೊಂದಲ ಹೆಚ್ಚಾಗಿದೆ. ಇದಕ್ಕಾಗಿನೇ ಇಂದು ಅನರ್ಹ ಶಾಸಕರು ಡಾ.ಸುಧಾಕರ್ ಗೆ ಸೇರಿದ ಅಪಾರ್ಟ್ ಮೆಂಟಿನಲ್ಲಿ ದಿಢೀರ್ ಸಭೆ ನಡೆಸಿ ಮುಂದಿನ ನಡೆ, ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಅನರ್ಹ ಶಾಸಕರಾದ ಡಾ. ಸುಧಾಕರ್, ಎಂಟಿಬಿ ನಾಗರಾಜ್, ಬಿ.ಸಿ ಪಾಟೀಲ್, ಮುನಿರತ್ನ, ರೋಷನ್ ಬೇಗ್, ಪ್ರತಾಪ್ ಗೌಡ ಪಾಟೀಲ್ ಭಾಗಿಯಾಗಿದ್ದರು. ಸಭೆಯಲ್ಲಿ ಅರ್ಜಿ ವಿಚಾರಣೆ ವಿಳಂಬವಾಗುತ್ತಿರುವ ಕುರಿತು ಚರ್ಚಿಸಿದರು. ರಾಜಕೀಯವಾಗಿ ನೆಲೆಕಂಡುಕೊಳ್ಳಲು ಏನು ಮಾಡಬೇಕು. ನಮ್ಮ ಸಹಕಾರದಿಂದ ಬಿಜೆಪಿ ಏನೋ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ, ನಮಗೆ ಇನ್ನೂ ಅಧಿಕಾರ ಪಡೆಯಲು ಅಸಾಧ್ಯವಾಗಿದೆ. ಭವಿಷ್ಯದಲ್ಲಿ ಏನು ಮಾಡಬೇಕು ಎಂಬ ಕುರಿತು ಗಂಭೀರ ಚರ್ಚೆ ನಡೆಸಿದರು.

ಬಿಜೆಪಿ ಧೋರಣೆ ಬಗ್ಗೆನೂ ಅನರ್ಹ ಶಾಸಕರು ಅಸಮಾಧಾನಗೊಂಡಿದ್ದಾರೆ. ಜೆಡಿಎಸ್ ನಿಂದ ಬಂದ ಶಾಸಕರಿಗೆ ಬಿಜೆಪಿ ನಾಯಕರು ಮಣೆ ಹಾಕಿದರೆ ತಮ್ಮ ಗತಿಯೇನು?. ಸರ್ಕಾರ ರಚನೆಗೂ ಮೊದಲು ಕೊಟ್ಟಿದ್ದ ಆಶ್ವಾಸನೆಗಳನ್ನು ಬಿಜೆಪಿ ನಾಯಕರು ಈಡೇರಿಸುತ್ತಿಲ್ಲ. ಈ ಎಲ್ಲ ವಿಚಾರಗಳ ಕುರಿತಂತೆ ಗಂಭೀರ ಚರ್ಚೆ ನಡೆಸಲಾಯಿತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.