ETV Bharat / city

ಕೋವಿಡ್ ಪರಿಕರ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ: ಸಚಿವ ಡಾ. ಸುಧಾಕರ್​ ಸ್ಪಷ್ಟನೆ

author img

By

Published : Jul 3, 2020, 4:05 PM IST

ಕೊವೀಡ್-19 ವಿಚಾರವಾಗಿ ಭ್ರಷ್ಟಾಚಾರ ನಡೆಸಿದ್ದರೆ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರೋಕೆ ನಾಲಾಯಕ್ ಎಂದು ಹೇಳುವ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

no-corruption-in-purchasing-covid-accessory
ಸಚಿವ ಡಾ ಕೆ‌ ಸುಧಾಕರ್​

ಬೆಂಗಳೂರು: ಕೋವಿಡ್ ಉಪಕರಣ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಳ್ಳಿ ಹಾಕಿದ್ದಾರೆ.

ಕೋವಿಡ್ ಪರಿಕರ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ: ಸಚಿವ ಡಾ. ಕೆ‌. ಸುಧಾಕರ್​ ಸ್ಪಷ್ಟನೆ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವ ತನಿಖೆ ಬೇಕಾದರು ನಡೆಸಲಿ. ಸಿಬಿಐ ತನಿಖೆ ಬೇಕಾದ್ರು ಮಾಡಿಸಲಿ. ಕೋವಿಡ್ -19 ವಿಚಾರವಾಗಿ ಭ್ರಷ್ಟಾಚಾರ ನಡೆಸಿದ್ದರೆ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರೋಕೆ ನಾಲಾಯಕ್. ಈ ಮಾತನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳುವ ಮೊದಲು ನಾನೇ ಹೇಳ್ತೇನೆ. ನಾವು ಪ್ರತಿಯೊಂದು ಉಪಕರಣಗಳ ಖರೀದಿಯ ಲೆಕ್ಕ ಕೊಡುತ್ತೇವೆ. ನಾವು ಎಲ್ಲೂ ಓಡಿಹೋಗಲ್ಲ. ಒಂದು ಎರಡು ತಿಂಗಳು ಪ್ರತಿಪಕ್ಷಗಳು ಸಹಕಾರ ನೀಡಲು ಸಾಧ್ಯವಾಗುವುದಿಲ್ಲವಾ ಎಂದು ಪ್ರಶ್ನಿಸಿದರು.

ಇಂಥಹ ಸಂದರ್ಭದಲ್ಲಿ ರಾಜಕಾರಣ ಮಾಡಬೇಕಾ? ಕೋವಿಡ್-19 ಮೆಡಿಕಲ್ ಉಪಕರಣಗಳನ್ನು ಸರ್ಕಾರದ ಹಿರಿಯ ಅಧಿಕಾರಿಗಳು ಬೆಲೆ ನಿರ್ಧರಿಸಿದ ಬಳಿಕವೇ ಖರೀದಿ ಮಾಡಿದ್ದಾರೆ. ಕೊರೊನಾ ರೋಗ ಬಂದ ಸಂದರ್ಭದಲ್ಲಿ ಉಪಕರಣಗಳ ಕೊರತೆ ಇತ್ತು. ಆ ಸಂದರ್ಭದಲ್ಲಿ ಉಪಕರಣಗಳು ಸಿಕ್ಕರೇ ಸಾಕಾಗಿತ್ತು. ಕೇಂದ್ರ ಸರ್ಕಾರಕ್ಕೆ ಉಪಕರಣಗಳು ಸಿಗುತ್ತಿರಲಿಲ್ಲ. ಅದಕ್ಕಾಗಿ ಕೆಲವು ಉಪಕರಣಗಳನ್ನು ದುಬಾರಿ ಬೆಲೆಗೆ ಖರೀದಿ ಮಾಡಿರಬಹುದು ಎಂದು ಹೇಳಿದರು.

ಸಿದ್ದರಾಮಯ್ಯರಿಂದ ಈ‌ ತರದ ಆರೋಪವನ್ನು ನಿರೀಕ್ಷಿಸಿರಲಿಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ. ಈ ಆರೋಪ ದುರದೃಷ್ಟಕರ. ಪ್ರತಿ ನಯಾ ಪೈಸೆಗೂ ಲೆಕ್ಕ ಕೊಡ್ತಿವಿ. ದರ ಫಿಕ್ಸ್ ಮಾಡಿರೋದು, ತಂದಿರೋದು ಉನ್ನತ ಮಟ್ಟದ ಅಧಿಕಾರಿಗಳು ಎಂದು ಸಚಿವ ಸುಧಾಕರ್​ ಸ್ಪಷ್ಟಪಡಿಸಿದರು.

ಬೂತ್ ಮಟ್ಟದ ಟಾಸ್ಕ್ ಫೋರ್ಸ್ ರಚನೆ

ರಾಜ್ಯದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಕೋವಿಡ್ ನಿರ್ವಹಣೆಗೆ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ನಿರ್ಧರಿಸಿದ್ದೇವೆ. ಬೆಂಗಳೂರಲ್ಲಿ 8,500 ಬೂತ್ ಗಳಿವೆ. ಪ್ರತಿ ಬೂತ್ ಗೂ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಚಿಂತನೆ ನಡೆಸಿದ್ದೇವೆ. ಹಳ್ಳಿಯಿಂದ ನಗರದ ಬೂತ್ ಮಟ್ಟದವರೆಗೂ ಟಾಸ್ಕ್ ಫೋರ್ಸ್ ಕಮಿಟಿ ಮಾಡುತ್ತೇವೆ. ಪ್ರತಿ ಮನೆಗೆ ಹೋಗಿ ಮನೆಯಲ್ಲಿ ಐಸೋಲೆಷನ್ ಮಾಡೋದಾದ್ರೆ ಹೇಗೆ? ಅಂತಹ ಲಕ್ಷಣಗಳಿವೆಯಾ ಅನ್ನೋದರ ಬಗ್ಗೆ ಕಮಿಟಿ ಮರುಶೀಲನೆ ಮಾಡಿ ಸಲಹೆ ಸೂಚನೆ ನೀಡಲಿದೆ ಎಂದು ತಿಳಿಸಿದರು.

ಯಾವುದೇ ಭಿನ್ನಾಭಿಪ್ರಾಯ ಇಲ್ಲ

ಸಚಿವರಾದ ಅಶೋಕ್, ಬೊಮ್ಮಾಯಿ, ಶ್ರೀರಾಮುಲು ಮತ್ತು ನಾನು ಎಲ್ಲರೂ ಒಟ್ಟಾಗಿ ಕಾರ್ಯನಿರರ್ವಹಿಸುತ್ತಿದ್ದೇವೆ. ನಮ್ಮ ಕ್ಯಾಪ್ಟನ್ ಯಡಿಯೂರಪ್ಪ ಅವರು. ಅವರ ಮಾರ್ಗದರ್ಶನದಂತೆ ನಾವು ಕಾರ್ಯನಿರ್ವಹಿಸುತ್ತಿದ್ದು, ನಮ್ಮಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ ಎಂದು ಸಚಿವ ಸುಧಾಕರ್​ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.