ETV Bharat / city

ರಾಜ್ಯದಲ್ಲಿ ಈವರೆಗೆ ಯಾರಲ್ಲೂ ಕೊರೊನಾ ವೈರಸ್​ ಪತ್ತೆಯಾಗಿಲ್ಲ: ಸಚಿವ ಸುಧಾಕರ್​​​ - ಈಗಾಗಲೇ 28 ದಿನಗಳ ನಿಗಾ ಅವಧಿ ಮುಕ್ತಾಯ ಆಗಿದೆ

ಈವರೆಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸಂಬಂಧ 695 ಶಂಕಿತ ರೋಗಿಗಳ ತಪಾಸಣೆ ಮಾಡಿದ್ದು, ರಕ್ತ ಪರೀಕ್ಷೆಗೊಳಗಾದವರಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

KN_BNG_05_CORINOVIRUS_SUDHAKARPC_VIDEO_7201951
ರಾಜ್ಯದಲ್ಲಿ ಈವರೆಗೆ ಯಾರಲ್ಲೂ ಕೊರೊನಾ ವೈರಸ್ ಪತ್ತೆಯಾಗಿಲ್ಲ: ಸಚಿವ ಡಾ.ಸುಧಾಕರ್
author img

By

Published : Mar 5, 2020, 9:17 PM IST

ಬೆಂಗಳೂರು: ಈವರೆಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸಂಬಂಧ 695 ಶಂಕಿತ ರೋಗಿಗಳ ತಪಾಸಣೆ ಮಾಡಿದ್ದು, ರಕ್ತ ಪರೀಕ್ಷೆಗೊಳಗಾದವರಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಈವರೆಗೆ ಯಾರಲ್ಲೂ ಕೊರೊನಾ ವೈರಸ್ ಪತ್ತೆಯಾಗಿಲ್ಲ: ಸಚಿವ ಸುಧಾಕರ್

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿದೇಶದಿಂದ ಬಂದವರನ್ನು ತಪಾಸಣೆ ಮಾಡುತ್ತಿದ್ದೇವೆ. ರಕ್ತ ಪರೀಕ್ಷೆಗೊಳಪಡಿಸಿರೋದು 321 ಮಂದಿ. ಈ ಪೈಕಿ ಇಂದು 46 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. 273 ರಕ್ತ ಪರೀಕ್ಷೆ ನೆಗೆಟಿವ್ ಬಂದಿದೆ. ಇನ್ನೂ 225 ಮಂದಿಯ ಮೇಲೆ ನಿಗಾ ಇಡಲಾಗಿದ್ದು, ಈಗಾಗಲೇ 28 ದಿನಗಳ ನಿಗಾ ಅವಧಿ ಮುಕ್ತಾಯ ಆಗಿದೆ. ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿದ್ದೇವೆ. ಈ ಸಂಬಂಧ ಖಾಸಾಗಿ ಆಸ್ಪತ್ರೆಗಳ ಮಾಲೀಕರ ಜೊತೆ ಮಾತನಾಡಿದ್ದೇವೆ. ಈ ವೈರಾಣುವನ್ನು ತಡೆಯಲು ಸೂಚನೆ ಕೊಟ್ಟಿದ್ದೇವೆ. ತುಂಬಾ ಜನರು ನಮಗೆ ಸೋಂಕು ತಗುಲಿದೆಯಾ ಎಂದು ಭಯಭೀತರಾಗ್ತಿದ್ದಾರೆ. ಆದರೆ ಯಾರೂ ಭೀತಿಗೊಳಗಾಗುವುದು ಬೇಡ ಎಂದು ಮನವಿ ಮಾಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.