ETV Bharat / city

ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ ಎಂದ್ರು ಅರುಣ್​ ಸಿಂಗ್​...No Change ಅಂದ್ರು ಕಟೀಲ್​

ನಾಯಕತ್ವದ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಸಂಬಂಧ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್, ಇವತ್ತಿನ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

no changes in karnataka bjp; state incharge arun singh
ರಾಜ್ಯ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ; ಉಸ್ತುವಾರಿ ಅರುಣ್‌ ಸಿಂಗ್ ಸ್ಪಷ್ಟನೆ
author img

By

Published : Jun 16, 2021, 8:22 PM IST

Updated : Jun 16, 2021, 9:06 PM IST

ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ಸಚಿವರ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಕೋವಿಡ್, ಪಕ್ಷ ಸಂಘಟನೆ, ಶಾಸಕರ ಸಮಸ್ಯೆ ಆಲಿಸುವ ಬಗ್ಗೆ ಮಾತ್ರ ಚರ್ಚೆ ನಡೆಸಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು, ಸಚಿವರ ಜತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಚರ್ಚೆ ಆಯಿತು. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ, ಪಕ್ಷ, ಸಚಿವರ ಕಾರ್ಯ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ: ಅರುಣ್‌ ಸಿಂಗ್
ಪ್ರತಿ ಗುರುವಾರ ಜನಸಾಮಾನ್ಯರ ಅಹವಾಲು ಆಲಿಸಬೇಕು!
ಪ್ರತಿ ಗುರುವಾರ ಎಲ್ಲ ಸಚಿವರು ತಮ್ಮ ತಮ್ಮ ಸಚಿವಾಲಯದ ಕೊಠಡಿಯಲ್ಲಿಯೇ ಇರಬೇಕು. ಶಾಸಕರು, ಕಾರ್ಯಕರ್ತರು ಮತ್ತು ಜನಸಾಮಾನ್ಯರ ಅಹವಾಲು ಆಲಿಸಿ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಅದೇ ರೀತಿ, ಸಚಿವರು ಜಿಲ್ಲಾ ಪ್ರವಾಸಕ್ಕೆ ತೆರಳಿದ್ದಾಗ ಸ್ಥಳೀಯ ಶಾಸಕರನ್ನು ಕೂರಿಸಿಕೊಂಡು ಅಧಿಕಾರಿಗಳ‌ ಸಭೆ ನಡೆಸಬೇಕು. ಪಕ್ಷದ ಕಚೇರಿಗೆ ಭೇಟಿ ನೀಡಬೇಕು ಎಂದು ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ: ತಡವಾಗಿ ಸಭೆಗೆ ಬಂದು ಅಸಮಾಧಾನದ ಸಂದೇಶ ರವಾನಿಸಿದ್ರಾ ಸಚಿವ ಯೋಗೀಶ್ವರ್?

ಪಕ್ಷ ವಿರೋಧಿ ಹೇಳಿಕೆ ಕೊಡಬಾರದು!
ಯಾರೂ ಸಹ ಪಕ್ಷ ವಿರೋಧಿ ಹೇಳಿಕೆ ನೀಡಬಾರದು. ಪಕ್ಷದ ಬಗ್ಗೆ ನಿಷ್ಠಾವಂತರಾಗಿರಬೇಕು ಯಾವುದೇ ಭಿನ್ನಾಭಿಪ್ರಾಯ ಬಹಿರಂಗವಾಗಿ ಮಾತನಾಡಬಾರದು ಎಂದು ಮತ್ತೆ ಹಳೆ ಮಾತುಗಳನ್ನು ಮುಂದುವರಿಸಿದ್ದಾರೆ. ಶಾಸಕ ಯತ್ನಾಳ್ ವಿರುದ್ಧ ಕ್ರಮ ಇಲ್ಲ ಎಂಬ ಪ್ರಶ್ನೆಗೆ ಯತ್ನಾಳ್ ವಿರುದ್ಧ ಎರಡು ತಿಂಗಳ ಹಿಂದೆಯೇ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾ ಸಮರ್ಮಕ ಉತ್ತರ ಕೊಡದೇ ನುಣುಚಿಕೊಂಡಿದ್ದಾರೆ.

Last Updated : Jun 16, 2021, 9:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.