ಬೆಂಗಳೂರು: ಒಂಭತ್ತನೇ ಹಂತದಲ್ಲಿ 120 ಟನ್ ಆಕ್ಸಿಜನ್ಅನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದು, ಆರು ಆಮ್ಲಜನಕ ಕಂಟೈನರ್ಗಳನ್ನ ಹೊತ್ತು ತಂದ ರೈಲು ಇಂದು ಬೆಳಗ್ಗೆ 9 ಗಂಟೆಗೆ ನಗರವನ್ನು ತಲುಪಿದೆ.
9ನೇ ಹಂತದ ಆಕ್ಸಿಜನ್ ಟ್ಯಾಂಕರ್ ಹೊತ್ತ ರೈಲು ಜಾರ್ಖಂಡ್ನ ಟಾಟಾ ನಗರದಿಂದ ಮೇ 22ರಂದು ಪ್ರಯಾಣ ಆರಂಭಿಸಿತ್ತು. ಇಂದು ಬೆಳಗ್ಗೆ ನಗರದ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಬಂದಿದೆ. ತ್ವರಿತ ಸಾಗಾಣಿಕೆಗಾಗಿ 'ಗ್ರೀನ್ ಕಾರಿಡಾರ್' ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿಯವರೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ 1080 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸದ್ಯ ಯಾವುದೇ ಆಸ್ಪತ್ರೆಗಳಲ್ಲಿ ಪ್ರಾಣವಾಯು ಕೊರತೆ ಉಂಟಾಗದಂತೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ.
ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ 1200 ಟನ್ ಆಮ್ಲಜನಕವನ್ನು ನೀಡುವಂತೆ ಕೇಂದ್ರಕ್ಕೆ ಆದೇಶ ನೀಡಿತ್ತು. ಕೋರ್ಟ್ ತೀರ್ಪಿನಂತೆ ಇದುವರೆಗೂ 1080 ಟನ್ಗಳಷ್ಟು ಆಕ್ಸಿಜನ್ ನೀಡಿದೆ. ಇನ್ನೂ ಬಾಕಿ 120 ಟನ್ ಆಕ್ಸಿಜನ್ ರಾಜ್ಯಕ್ಕೆ ಬರಬೇಕಿದೆ.