ETV Bharat / city

2016ರ ಮೈಸೂರು ಕೋರ್ಟ್‌ನಲ್ಲಿನ ಬಾಂಬ್ ಬ್ಲಾಸ್ಟ್.. ಮೂವರು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟ..

2016 ಆಗಸ್ಟ್ 6ರಂದು ಮೈಸೂರು ಜಿಲ್ಲಾ ನ್ಯಾಯಾಲಯದ ಶೌಚಾಲಯದಲ್ಲಿ ಅಡುಗೆ ಕುಕ್ಕರಿನಲ್ಲಿ ಬಾಂಬ್ ಇಟ್ಟು ಆರೋಪಿಗಳು ಸ್ಫೋಟಿಸಿದ್ದರು. ಬ್ಯಾಟರಿ, ಗ್ಲಾಸ್ ಪೀಸ್, ಪಟಾಕಿ ಪೌಡರ್, ಕೆಮಿಕಲ್ ಬಳಸಿ ಬಾಂಬ್ ತಯಾರಿಸಿದ್ದರು..

Mysuru court blast
Mysuru court blast
author img

By

Published : Oct 11, 2021, 9:11 PM IST

Updated : Oct 11, 2021, 9:23 PM IST

ಬೆಂಗಳೂರು : 2016ರ ಮೈಸೂರು ಬಾಂಬ್ ಸ್ಫೋಟ ಪ್ರಕರಣದ ಮೂವರು ಅಪರಾಧಿಗಳಿಗೂ ಇಂದು ಎನ್ಐಎ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿ ತೀರ್ಪು ನೀಡಿದೆ.

ಈಗಾಗಲೇ ನೈನಾರ್ ಅಬ್ಬಾಸ್ ಅಲಿ, ಅಬ್ದುಲ್ ಕರೀಂ ಹಾಗೂ ದಾವೂದ್ ಸುಲೈಮಾನ್ ಈ ಮೂವರು ಪ್ರಕರಣದಲ್ಲಿ ಅಪರಾಧಿಗಳೆಂದು ಕೋರ್ಟ್ ಆದೇಶಿಸಿತ್ತು.

ನೈನಾರ್​​ ಅಬ್ಬಾಸ್​ಗೆ 10 ವರ್ಷ ಜೈಲು, ₹43,000 ದಂಡ. ಅಬ್ದುಲ್​ ಕರೀಂ​ಗೆ​​​ 5 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಜತೆಗೆ ₹25,000 ದಂಡ ಹಾಗೂ ಸುಲೈಮಾನ್​​​ಗೆ 10 ವರ್ಷಗಳ ಜೈಲು ಶಿಕ್ಷೆಯೊಂದಿಗೆ 38,000 ಸಾವಿರ ರೂ. ದಂಡ ವಿಧಿಸಿ ಕೋರ್ಟ್‌ ಆದೇಶಿಸಿದೆ. ಇದರಲ್ಲಿ 7 ವರ್ಷಗಳ ಕಠಿಣ ಶಿಕ್ಷೆ ಹಾಗೂ 3 ವರ್ಷಗಳ ಸಾಧಾರಣ ಶಿಕ್ಷೆಯನ್ನೂ ವಿಧಿಸಲಾಗಿದೆ.

  • NIA Special Court, Bengaluru has sentenced three convicted Al Qaeda- Base Movement terrorists to imprisonment in the 2016 Mysuru Court blast case. pic.twitter.com/v41iQhXABC

    — ANI (@ANI) October 11, 2021 " class="align-text-top noRightClick twitterSection" data=" ">

ನ್ಯಾ. ಕಸನಪ್ಪ ನಾಯ್ಕ್ ಅವರಿಂದ್ದ ಪೀಠ ಈ ತೀರ್ಪು ನೀಡಿದೆ. ತಮಿಳುನಾಡು ಮೂಲದ A1 ಅಬ್ಬಾಸ್ ಅಲಿ, A ಸಂಸುನ್ ಕರೀ ರಾಜಾ, A5 ದಾವೂದ್ ಸುಲೇಮಾನ್ ತಪ್ಪಿತಸ್ಥರೆಂದು ಈಗಾಗಲೇ ಕೋರ್ಟ್​ ತೀರ್ಪು ನೀಡಿತ್ತು. ಆರೋಪಿಗಳು 'ಬೇಸ್ ಮೂವ್​ಮೆಂಟ್​' ಎಂಬ ಸಂಘಟನೆ ಕಟ್ಟಿಕೊಂಡು ಅಲ್-ಕೈದಾ ಸಂಘಟನೆಗೆ ಬೆಂಬಲ ನೀಡುತ್ತಿದ್ದರು ಎಂದು ವಿಚಾರಣೆ ವೇಳೆ ಸಾಬೀತಾಗಿದೆ.

ಇದನ್ನೂ ಓದಿರಿ: 2016ರ ಮೈಸೂರು ಕೋರ್ಟ್‌ನಲ್ಲಿನ ಬಾಂಬ್ ಬ್ಲಾಸ್ಟ್.. ಮೂವರು ತಪ್ಪಿತಸ್ಥರೆಂದು ತೀರ್ಪು..

ಪ್ರಕರಣದ ಹಿನ್ನೆಲೆ: 2016 ಆಗಸ್ಟ್ 6ರಂದು ಮೈಸೂರು ಜಿಲ್ಲಾ ನ್ಯಾಯಾಲಯದ ಶೌಚಾಲಯದಲ್ಲಿ ಅಡುಗೆ ಕುಕ್ಕರಿನಲ್ಲಿ ಬಾಂಬ್ ಇಟ್ಟು ಆರೋಪಿಗಳು ಸ್ಫೋಟಿಸಿದ್ದರು. ಬ್ಯಾಟರಿ, ಗ್ಲಾಸ್ ಪೀಸ್, ಪಟಾಕಿ ಪೌಡರ್, ಕೆಮಿಕಲ್ ಬಳಸಿ ಬಾಂಬ್ ತಯಾರಿಸಿದ್ದರು. A3 ಆಯೂಬ್​ಗೆ ಗೊತ್ತಿಲ್ಲದೇ ಅವನ ಮನೆಯಲ್ಲಿ ಬಾಂಬ್​ ತಯಾರು ಮಾಡಿದ್ದ ಹಿನ್ನೆಲೆ ಹೈಕೋರ್ಟ್ ವಾದ ಆಲಿಸಿ ಕ್ಷಮಾದಾನ ನೀಡಿತ್ತು. ತನಿಖಾ ವೇಳೆ A4 ಪಾತ್ರ ಇಲ್ಲ ಎಂದು ಚಾರ್ಜ್‌ಶೀಟ್​ನಲ್ಲಿ ಕೈಬಿಡಲಾಗಿತ್ತು.

Last Updated : Oct 11, 2021, 9:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.