ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಐಸಿಸ್ ಉಗ್ರ ಸಂಘಟನೆಗೆ(ಇಸ್ಲಾಮಿಕ್ ಸ್ಟೇಟ್) ಯುವಕರ ನೇಮಕಾತಿಗಾಗಿ ದೊಡ್ಡ ವೇದಿಕೆಯೇ ಸಿದ್ದವಾಗಿತ್ತು ಎನ್ನುವ ಸ್ಪೋಟಕ ಅಂಶ ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ.
ಪ್ರಮುಖವಾಗಿ, ಜೊಹೈಬ್ ಮನ್ನ ಹಾಗೂ ಅಬ್ದುಲ್ ಖಾದೀರ್ ಎಂಬುವವರು ಸುಮಾರು 28 ಅನ್ಯಕೋಮಿನ ಯುವಕರನ್ನು ಇಸ್ಲಾಂಗೆ ಮತಾಂತರ ಮಾಡಿದ್ದರು. ಡಿನ್ನರ್ ಪಾರ್ಟಿಯೊಂದರ ನೆಪದಲ್ಲಿ ಕರೆದು ಯುವಕರಿಗೆ ಉಗ್ರವಾದದ ಭಾಷಣ ಮಾಡಿ ಪ್ರಚೋದಿಸಿ ಐಸಿಸ್ ಸೇರಲು ಪ್ರೇರೇಪಿಸಲಾಗುತ್ತಿತ್ತು ಎನ್ನುವ ಆತಂಕಕಾರಿ ಅಂಶ ಬಯಲಾಗಿದೆ.
ಇದನ್ನೂ ಓದಿ: ಐಸಿಸ್ ಸಂಘಟನೆಗೆ ಯುವಕರನ್ನು ಸೆಳೆಯುತ್ತಿದ್ದ ವ್ಯಕ್ತಿ ಹೈದರಾಬಾದ್ನಲ್ಲಿ ಬಂಧನ
ಸಿರಿಯಾದಲ್ಲಿ ಕುಖ್ಯಾತ ಬಂಡುಕೋರ ಎಂದು ಗುರುತಿಸಿಕೊಂಡಿದ್ದ ಮಹಮ್ಮದ್ ಸಾಜಿದ್ ಬೆಂಗಳೂರಿಗೆ ಆಗಮಿಸಿ ಭಾಷಣ ಮಾಡಿದ್ದ. ಈತ ಮೂರು ದಿನಗಳ ಕಾಲ ನಗರದಲ್ಲೇ ಉಳಿದುಕೊಂಡು ಯುವಕರಿಗೆ ಐಸಿಸ್ ಸೇರಲು ಪ್ರೇರೇಪಿಸಿದ್ದಾನೆೆ. ಅಷ್ಟೇ ಅಲ್ಲ, ಬೆಂಗಳೂರಿನಿಂದ ಮರಳಿ ಹೋಗುವಾಗ ಹಲವು ಯುವಕರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಆತನನ್ನು ಬೀಳ್ಕೊಟ್ಟಿದ್ದರು ಎಂದು ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ವಿವರವಾಗಿ ತಿಳಿಸಿದೆ.