ಬೆಂಗಳೂರು: ಜಿಎಸ್ಟಿಯನ್ನು(ಸರಕು ಮತ್ತು ಸೇವಾ ತೆರಿಗೆ) ರಾಷ್ಟ್ರದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಿನ್ನೆ ಜಿಎಸ್ಟಿ ಉಸ್ತುವಾರಿ, ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಗರದ ಖಾಸಗಿ ಹೋಟೆಲ್ನಲ್ಲಿ ಸಭೆ ಮಾಡಿ, ಜಿಎಸ್ಟಿ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಮುಖವಾಗಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು:
ಜಿಎಸ್ಟಿ ಸ್ಲಾಬ್ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಜಿಎಸ್ಟಿ ತೆರಿಗೆಗಳಲ್ಲಿ ಯಾವುದೇ ಹೆಚ್ಚಳ ಹಾಗೂ ಬದಲಾವಣೆ ಮಾಡುವುದಿಲ್ಲ. ಆರ್ಥಿಕ ಸುಸ್ಥಿರತೆ ಹಿನ್ನೆಲೆ ಯಾವುದೇ ತೆರಿಗೆ ಏರಿಕೆ ಇಲ್ಲ. ಎಲ್ಲಾ ರಾಜ್ಯಗಳ ಜಿಎಸ್ಟಿ ಪಾಲನ್ನು ಈಗಾಗಲೇ ಸೆಪ್ಟಂಬರ್ವರೆಗೂ ಕ್ಲಿಯರ್ ಮಾಡಲಾಗಿದೆ. ಏಪ್ರಿಲ್ 1 ರಿಂದ ಎಲೆಕ್ಟ್ರಾನಿಕ್ ರಿಟರ್ನ್ಸ್ ಸಿಸ್ಟಮ್ ಜಾರಿಗೆ ತರುವುದಾಗಿ ಸುಶೀಲ್ ಕುಮಾರ್ ತಿಳಿಸಿದ್ರು.
ಜನವರಿಯಿಂದ ಹಂತಹಂತವಾಗಿ ಪ್ರಾಯೋಗಿಕವಾಗಿ ಜಿಎಸ್ಟಿ ಜಾರಿಗೆ ತರಲಾಗುವುದು. ವ್ಯಾಪಾರಿಗಳು ಈ ಬಗ್ಗೆ ಸಾಧಕ-ಬಾಧಕಗಳನ್ನು ತಿಳಿಯಬಹುದಾಗಿದೆ. ಈ ಹಿಂದಿನ ಜಿಎಸ್ಟಿ ರಿಟರ್ನ್ಸ್ ಫೈಲ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳಿದ್ದು, ಅದನ್ನು ಪರಿಹರಿಸಲಾಗಿದೆ. ಈ ಹೊಸ ವಿಧಾನದಿಂದ ರಿಟರ್ನ್ಸ್ ಫೈಲ್ ಮಾಡುವುದು ಇನ್ನಷ್ಟು ಸುಲಭವಾಗಿದೆ. ಕಡ್ಡಾಯವಾಗಿ ಏಪ್ರಿಲ್ 1 ರಿಂದ ನೂತನ ಪದ್ದತಿ ಅಳವಡಿಸಿಕೊಳ್ಳಲು ಅವರು ಮನವಿ ಮಾಡಿದ್ರು.
ಇನ್ನು 24.86 ಲಕ್ಷ ನಕಲಿ ಖಾತೆಗಳು ಪತ್ತೆಯಾಗಿದ್ದು, ಅವುಗಳನ್ನು ಪತ್ತೆಹಚ್ಚಿ ರದ್ದು ಮಾಡಲಾಗಿದೆ. 66.79 ಸಾವಿರ ಹೊಸದಾಗಿ ನೋಂದಣಿಯಾದ ತೆರಿಗೆದಾರರಿದ್ದು, ಕಳೆದ 8 ತಿಂಗಳಲ್ಲಿ ಪ್ರತಿ ತಿಂಗಳಿಗೆ 95 ಲಕ್ಷ ಕೋಟಿ ರೂ ಆದಾಯ ಬಂದಿದೆ. ಜಿಎಸ್ಟಿ ಗೆ ಅಧಾರ್ ನೋಂದಾಣಿ ಕಡ್ಡಾಯವಾಗಿರುವುದಾಗಿ ತಿಳಿಸಿದರು.