ETV Bharat / city

ಬಿಬಿಎಂಪಿ ಬಜೆಟ್ ತಡೆ ಹಿಡಿದ ಬಿಜೆಪಿ ಸರ್ಕಾರ.. ಸಿಎಂ ಬಿಎಸ್‌ವೈ ಜತೆ ಮೇಯರ್ ಗಂಗಾಂಬಿಕೆ ಚರ್ಚೆ.. - ಸಿಎಂ ಬಿಎಸ್ ಯಡಿಯೂರಪ್ಪ

2019-20ನೇ ಸಾಲಿನ ಬಿಬಿಎಂಪಿ ಬಜೆಟ್​ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯದೆಯೇ ಹಲವು ಕಾಮಗಾರಿಗಳಿಗೆ ಜಾಬ್ ಕೋಡ್ ನೀಡಲಾಗಿತ್ತು. ಹೀಗಾಗಿ ಇದು ಕಾನೂನು ಬಾಹಿರವೆಂದು ಬಿಜೆಪಿ ಸರ್ಕಾರ ಬಜೆಟ್‌ಗೆ ತಡೆ ನೀಡಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಸಿಎಂ ಬಿಎಸ್‌ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಸಿಎಂ ಜೊತೆ ಮೇಯರ್ ಚರ್ಚೆ
author img

By

Published : Aug 5, 2019, 11:47 PM IST

ಬೆಂಗಳೂರು: ಸಚಿವ ಸಂಪುಟ ಅನುಮೋದನೆಯಿಲ್ಲದ ಹಿನ್ನೆಲೆ ಬಿಜೆಪಿ ಸರ್ಕಾರದಿಂದ ಬಿಬಿಎಂಪಿ ಬಜೆಟ್ ತಡೆ ಹಿಡಿಯಲಾಗಿದೆ. ಈ ಕುರಿತು ಚರ್ಚಿಸಲು ಮೇಯರ್ ಗಂಗಾಂಬಿಕೆ, ಸಿಎಂ ಬಿಎಸ್‌ವೈ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

9 ಸಾವಿರ ಕೋಟಿಗೆ ಬಜೆಟ್ ಮಂಡಿಸುವಂತೆ ಆರ್ಥಿಕ ಇಲಾಖೆ ಸೂಚಿಸಿದ್ರೂ 13 ಸಾವಿರ ಕೋಟಿಗೆ ಬಜೆಟ್ ಮಂಡಿಸಲಾಗಿತ್ತು. 2019-20ನೇ ಸಾಲಿನ ಬಿಬಿಎಂಪಿ ಬಜೆಟ್​ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯದೆಯೇ ಹಲವು ಕಾಮಗಾರಿಗಳಿಗೆ ಜಾಬ್ ಕೋಡ್ ನೀಡಲಾಗಿತ್ತು. ಹೀಗಾಗಿ ಇದು ಕಾನೂನು ಬಾಹಿರವೆಂದು ನೂತನ ಸರ್ಕಾರ ಬಜೆಟ್‌ಗೆ ತಡೆ ನೀಡಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಈ ಕುರಿತಂತೆ ಮೇಯರ್ ಪ್ರತಿಕ್ರಿಯಿಸಿ, ಅಗತ್ಯ ಹಾಗೂ ದಿನನಿತ್ಯದ ಬಳಕೆಗೆ ಹಣ ಬಳಕೆ ಮಾಡಿಕೊಳ್ಳಲು ಸಮ್ಮತಿಸಿದ್ದು, ಸಂಪೂರ್ಣವಾಗಿ ಪರಿಶೀಲಿಸಿ ಬಜೆಟ್‌ಗೆ ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಡೆಂಘೀ ಇಲ್ಲಿಯವರೆಗೆ 3,994 ಪ್ರಕರಣಗಳು ದಾಖಲಾಗಿವೆ. 200 ಆಶಾ ಕಾರ್ಯಕರ್ತೆಯರನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಮೇಯರ್ ತಿಳಿಸಿದರು.

9 ಸಾವಿರ ಕೋಟಿಗೆ ಬಜೆಟ್ ಮಂಡಿಸುವಂತೆ ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದ್ರೂ ಮಾಜಿ ಡಿಸಿಎಂ ಪರಮೇಶ್ವರ್ ಅದನ್ನು ಉಲ್ಲಂಘಿಸಿದ್ದಾರೆ. ಮುಖ್ಯಮಂತ್ರಿಗಳು ನವ ಬೆಂಗಳೂರು ಯೋಜನೆ ಹಾಗೂ ಬಜೆಟ್ ಎರಡನ್ನೂ ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಸಾಮಾನ್ಯ ಕೆಲಸಗಳನ್ನ ಹೊರತುಪಡಿಸಿ, ಜಾಬ್ ಕೋಡ್ ಹಾಗೂ ಹೊಸ ಪ್ರಾಜೆಕ್ಟ್‌ಗಳಿಗೆ ಮಾತ್ರ ತಡೆ ನೀಡಲಾಗಿದೆ. ಒಂದು ವಾರದಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಸರ್ಕಾರದ ನಡೆ ಸಮರ್ಥಿಸಿಕೊಂಡಿದ್ದಾರೆ.

Intro:Body:ಬಿಬಿಎಂಪಿ ಬಜೆಟ್ ತಡೆಹಿಡಿದ ನೂತನ ಸರ್ಕಾರ- ಸಿಎಂ ಜೊತೆ ಚರ್ಚಿಸಿದ ಮೇಯರ್

ಬೆಂಗಳೂರು- ಸಚಿವ ಸಂಪುಟ ಅನುಮೋದನೆಯಿಲ್ಲದ ಹಿನ್ನೆಲೆ, ನೂತನ ಸರ್ಕಾರದಿಂದ ಬಿಬಿಎಂಪಿ ಬಜೆಟ್ ತಡೆ ಹಿಡಿಯಲಾಗಿದೆ. ಈ ಬಗ್ಗೆ ಚರ್ಚಿಸಲು ಮೇಯರ್ ಗಂಗಾಂಬಿಕೆ, ಸಿಎಂ ಬಿಎಸ್‌ವೈ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ..
9 ಸಾವಿರ ಕೋಟಿಗೆ ಬಜೆಟ್ ಮಂಡಿಸುವಂತೆ ಆರ್ಥಿಕ ಇಲಾಖೆ ಸೂಚಿಸಿದ್ರೂ, 13 ಸಾವಿರ ಕೋಟಿಗೆ ಬಜೆಟ್ ಮಂಡಿಸಲಾಗಿತ್ತು..
2019-20ನೇ ಸಾಲಿನ ಬಿಬಿಎಂಪಿ ಬಜೆಟನ್ನ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯದೆಯೇ ಹಲವು ಕಾಮಗಾರಿಗಳಿಗೆ ಜಾಬ್ ಕೋಡ್ ನೀಡಲಾಗಿತ್ತು.. ಹೀಗಾಗಿ ಇದು ಕಾನೂನು ಬಾಹಿರ ಅಂತ, ನೂತನ ಸರ್ಕಾರ ಬಜೆಟ್‌ಗೆ ತಡೆ ನೀಡಿದೆ.. ಈ ಬಗ್ಗೆ ಸ್ಪಷ್ಟನೆ ಕೇಳಲು ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.. ಎಮರ್ಜೆನ್ಸಿ ಹಾಗೂ ದಿನನಿತ್ಯದ ಬಳಕೆಗೆ ಹಣ ಬಳಕೆ ಮಾಡಿಕೊಳ್ಳಲು ಸಮ್ಮತಿಸಿದ್ದು, ಸಂಪೂರ್ಣವಾಗಿ ಪರಿಶೀಲಿಸಿ ಬಜೆಟ್‌ಗೆ ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಮೇಯರ್ ಹೇಳಿದರು..
ಇನ್ನು, 9 ಸಾವಿರ ಕೋಟಿಗೆ ಬಜೆಟ್ ಮಂಡಿಸುವಂತೆ ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದ್ರೂ, ಮಾಜಿ ಡಿಸಿಎಂ ಪರಮೇಶ್ವರ್ ಅದನ್ನು ಉಲ್ಲಂಘಿಸಿದ್ದಾರೆ.. ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ ಹಾಗೂ ಬಜೆಟ್ ಎರಡನ್ನೂ ಸದ್ಯಕ್ಕೆ ತಡೆ ಹಿಡಿಯಲಾಗಿದೆ.. ಸಾಮಾನ್ಯ ಕೆಲಸಗಳನ್ನ ಹೊರತುಪಡಿಸಿ, ಜಾಬ್ ಕೋಡ್ ಹಾಗೂ ಹೊಸ ಪ್ರಾಜೆಕ್ಟ್‌ಗಳಿಗೆ ಮಾತ್ರ ತಡೆ ನೀಡಲಾಗಿದೆ.. ಒಂದು ವಾರದಲ್ಲಿ ಎಲ್ಲವೂ ಸರಿಹೋಗಲಿದೆ ಅಂತ, ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಸರ್ಕಾರದ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ..
ಇನ್ನು ನಗರದಲ್ಲಿ ಡೆಂಗ್ಯೂ ಇಲ್ಲಿಯವರೆಗೆ 3,994 ಪ್ರಕರಣಗಳು ದಾಖಲಾಗಿವೆ. 200 ಆಶಾ ಕಾರ್ಯಕರ್ತೆಯರನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಮೇಯರ್ ತಿಳಿಸಿದರು.

ಬಿಎಸ್ ವೈ ರನ್ನು ಭೇಟಿಯಾದ ಮೇಯರ್ ವಿಶ್ವಲ್ ಬ್ಯಾಕ್ ಪ್ಯಾಕ್ ನಲ್ಲಿ ಬೆಳಗ್ಗೆ ಬಂದಿದೆ.

ಸೌಮ್ಯಶ್ರೀ
Kn_Bng_02_mayor_budget_7202707Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.