ETV Bharat / city

ಹೊಸ ಕೋವಿಡ್​ ರೂಪಾಂತರಿ ವೈರಸ್ ಪತ್ತೆ : ಕಡ್ಡಾಯ ಟೆಸ್ಟ್ ಹಾಗೂ ಟ್ರ್ಯಾಕಿಂಗ್ ಮಾಡಲು ಸೂಚನೆ - new corona virus in karnataka

ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿಯೂ ಸೋಂಕು ತೀವ್ರಗೊಳಿಸುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಕೇಂದ್ರದಿಂದಲೂ ಅಲರ್ಟ್ ಬಂದ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ..

new-covid-variant-found-in-karnataka
ಕೋವಿಡ್​ ರೂಪಾಂತರಿ ವೈರಸ್ ಪತ್ತೆ
author img

By

Published : Nov 26, 2021, 6:57 PM IST

ಬೆಂಗಳೂರು : ಸಾಂಕ್ರಾಮಿಕ ಕೊರೊನಾ ಸೋಂಕು ಈಗಾಗಲೇ ಸಾಕಷ್ಟು ಸಂಕಷ್ಟ ತಂದೊಡ್ಡಿದೆ. ಈ ಮಧ್ಯೆ ಅಧ್ಯಯನದಿಂದ ಹೊಸ ಕೋವಿಡ್​ ಅವತಾರಗಳು ಪತ್ತೆಯಾಗುತ್ತಿವೆ.‌ ಇದೀಗ B.1.1.529 ಎಂಬ ಹೊಸ ಕೋವಿಡ್​ ರೂಪಾಂತರಿ ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ‌ ನೀಡಲಾಗಿದೆ.

COVID-19 virus variant : ಈಗಾಗಲೇ ಬೋಟ್ಸ್‌ವಾನಾದಲ್ಲಿ 3, ದಕ್ಷಿಣ ಆಫ್ರಿಕಾದಲ್ಲಿ 6, ಹಾಂಕಾಂಗ್‌ನಲ್ಲಿ 1 ಹೊಸ ತಳಿ ಪತ್ತೆಯಾಗಿವೆ.‌ B.1.1529 ಹೊಸ ತಳಿಯಾಗಿದೆ. ಹೆಚ್ಚು ವೇಗವಾಗಿ ಹರಡಲಿದೆ ಎಂದು ತಜ್ಞರು ಹೇಳ್ತಿದ್ದಾರೆ.

ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿಯೂ ಸೋಂಕು ತೀವ್ರಗೊಳಿಸುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಕೇಂದ್ರದಿಂದಲೂ ಅಲರ್ಟ್ ಬಂದ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಅಲ್ಲದೆ, ಈ ಮೂರು ದೇಶಗಳಿಂದ ಬರುವವರಿಗೆ ಕಡ್ಡಾಯ ಟೆಸ್ಟ್ ಹಾಗೂ ಟ್ರ್ಯಾಕಿಂಗ್ ಮಾಡುವಂತೆ ಆದೇಶಿಸಲಾಗಿದೆ. ಈಗಾಗಲೇ ಈ ಮೂರು ದೇಶಗಳಿಂದ ಬಂದಿರುವವರನ್ನ ಪತ್ತೆ ಮಾಡಿ ಪರೀಕ್ಷೆ ಮಾಡುವಂತೆಯೂ ಸಹ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿದೇಶಗಳಿಂದ ಬಂದವರಲ್ಲಿ ಪಾಸಿಟಿವ್ ಕಂಡು ಬಂದರೆ ಸ್ಯಾಂಪಲ್‌ಗಳನ್ನು ಸೀಕ್ವೆನ್ಸಿಂಗ್ ಮಾಡುವಂತೆ ಕೂಡ ಸಲಹೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.