ETV Bharat / city

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ 83ಕ್ಕೆ ಏರಿಕೆ: ಇಂದು 7 ಹೊಸ ಕೇಸ್ - ಕೊರೊನಾ ವೈರಸ್​​

ರಾಜ್ಯದಲ್ಲಿ ಕೊರೊನಾ ವೈರಸ್​ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಸದ್ಯ ಹೊಸ 7 ಪ್ರಕರಣಗಳು ಪತ್ತೆಯಾಗಿವೆ. ಆಶ್ಚರ್ಯವೆಂದರೆ ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 5 ಜನರಲ್ಲಿ ಕೊರೊನಾ ವೈರಸ್​ ಕಂಡು ಬಂದಿದ್ದು, ಸೋಂಕು ಹರಡುವ ಭೀಕರತೆಯನ್ನು ಸಾಬೀತು ಪಡಿಸಿದಂತಾಗಿದೆ.

new-7-corona-virus-cases-find-in-karnataka
ಕೊರೋನಾ ಪಾಸಿಟಿವ್ ಪ್ರಕರಣಗಳು
author img

By

Published : Mar 29, 2020, 7:40 PM IST

Updated : Mar 29, 2020, 7:50 PM IST

ಬೆಂಗಳೂರು: ಕೊರೊನಾ ವೈರಸ್​ ತನ್ನ ಭೀಕರತೆಯನ್ನು ಮುಂದುವರೆಸಿದ್ದು ಇಂದೂ ಕೂಡ ರಾಜ್ಯದಲ್ಲಿ 7 ಹೊಸ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ..

ಉಡುಪಿಯಲ್ಲಿ ಇಬ್ಬರು ಮತ್ತು ನಂಜನಗೂಡಿನ 5 ಜನರಲ್ಲಿ ಸೋಂಕು ಪತ್ತೆಯಾಗಿದೆ. ವೇಗವಾಗಿ ಹರಡುತ್ತಿರುವ ವೈರಸ್​ ನಂಜನಗೂಡಿನಲ್ಲಿ ಔಷಧ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಟ್ಟು ಐದು ಜನರಲ್ಲಿ ಕಾಣಿಸಿಕೊಂಡಿದ್ದು ಮೈಸೂರಿಗರನ್ನು ಬೆಚ್ಚಿ ಬೀಳಿಸಿದೆ.

ಇವತ್ತಿನ ಸೋಂಕಿತರ ಹಿಸ್ಟರಿ ಹೀಗಿದೆ

ರೋಗಿ-77: 39 ವರ್ಷದ ವ್ಯಕ್ತಿ, ನಂಜನಗೂಡು, ಮೈಸೂರು ಜಿಲ್ಲೆಯ ನಿವಾಸಿಯಾಗಿದ್ದು, ಔಷಧಿ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ವ್ಯಕ್ತಿಯನ್ನು ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-78 : 38 ವರ್ಷದ ಪುರುಷರೊಬ್ಬರು, ಮೈಸೂರು ಜಿಲ್ಲೆಯ ನಿವಾಸಿಯಾಗಿದ್ದು (ರೋಗಿ 52 ರ ಸಂಪರ್ಕ ಹೊಂದಿದ್ದು) ಔಷಧಿ ತಯಾರಿಕಾ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ವ್ಯಕ್ತಿಯನ್ನು ಮೈಸೂರು ಜಿಲ್ಲೆಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-79 : 21 ವರ್ಷದ ಯುವಕ ನಂಜನಗೂಡು, ಮೈಸೂರು ಜಿಲ್ಲೆಯ ನಿವಾಸಿಯಾಗಿದ್ದು, ಔಷಧಿ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ವ್ಯಕ್ತಿಯನ್ನು ಮೈಸೂರು ಜಿಲ್ಲೆಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-80 : 31 ವರ್ಷದ ವ್ಯಕ್ತಿ ಇವರು, ನಂಜನಗೂಡು, ಮೈಸೂರು ಜಿಲ್ಲೆಯ ನಿವಾಸಿಯಾಗಿದ್ದು, ಔಷಧಿ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ವ್ಯಕ್ತಿಯನ್ನು ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-81: 42 ವರ್ಷದ ವ್ಯಕ್ತಿಯು ನಂಜನಗೂಡು, ಮೈಸೂರು ಜಿಲ್ಲೆಯ ನಿವಾಸಿಯಾಗಿದ್ದು, ಔಷಧಿ ತಯಾರಿಕೆ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಈ ವ್ಯಕ್ತಿಯನ್ನು ಮೈಸೂರು ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-82 : 35 ವರ್ಷದ ಪುರುಷರೊಬ್ಬರು, ಉಡುಪಿ ಜಿಲ್ಲೆಯ ನಿವಾಸಿಯಾಗಿದ್ದು, ಮಾರ್ಚ್ 17 ರಂದು ದುಬೈನಿಂದ ಮಂಗಳೂರಿಗೆ ಬಂದಿರುವ ಹಿನ್ನಲೆಯನ್ನು ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-83: 29 ವರ್ಷದ ವ್ಯಕ್ತಿ, ಉಡುಪಿ ಜಿಲ್ಲೆಯ ನಿವಾಸಿಯಾಗಿದ್ದು, ಇವರು ಕೇರಳ ಜಿಲ್ಲೆಯ ತಿರುವನಂತಪುರಕ್ಕೆ ಪ್ರಯಾಣ ಮಾಡಿರುವ ಹಿನ್ನೆ ಲೆಯನ್ನು ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ಒಟ್ಟು ರಾಜ್ಯದಲ್ಲಿ 83 ಪ್ರಕರಣ ಪತ್ತೆ

ಬೆಂಗಳೂರು - 41 ಪ್ರಕರಣ
ಚಿಕ್ಕಬಳ್ಳಾಪುರ - 8 ಪ್ರಕರಣ
ಮೈಸೂರು - 8 ಪ್ರಕರಣ
ದಕ್ಷಿಣ ಕನ್ನಡ - 7 ಪ್ರಕರಣ
ಉತ್ತರ ಕನ್ನಡ - 7 ಪ್ರಕರಣ
ಕಲಬುರಗಿ - 3 ಪ್ರಕರಣ
ದಾವಣಗೆರೆ - 3 ಪ್ರಕರಣ
ಉಡುಪಿ - 3 ಪ್ರಕರಣ
ಕೊಡಗು - 1 ಪ್ರಕರಣ
ಧಾರವಾಡ - 1 ಪ್ರಕರಣ
ತುಮಕೂರು - 1 ಪ್ರಕರಣ ಪತ್ತೆ

ಇದುವರೆಗೂ 5 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಮೂವರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.

Last Updated : Mar 29, 2020, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.